

ಶ್ರೀನಿವಾಸಪುರ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀನಿವಾಸಪುರ ತಾಲ್ಲೂಕು ಸಮಿತಿ ವತಿಯಿಂದ ಶುಕ್ರವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ತಹಶೀಲ್ದಾರ್ ರವರ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಕಚೇರಿಯ ಮುಜರಾಯಿ ಗುಮಾಸ್ತೆ ಶೈಲಜ ಮನವಿ ಸ್ವೀಕರಿಸಿದರು.
ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಾಧ್ಯಕ್ಷ ಹಬ್ಬನಿ ಶಿವಪ್ಪ ಮಾತನಾಡಿ ರಾಜ್ಯದಲ್ಲಿ ಲೈಸೆನ್ಸ್ ಸರ್ವೇಯರ್ ಗಳು ಕೆಲಸ ಮಾಡದೆ ಚಳುವಳಿ ಮಾಡುತ್ತಿರುವುದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿರುತ್ತದೆ, ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಲೈಸೆನ್ಸ್ ಸರ್ವೇಯರಗಳ ನ್ಯಾಯಯುತ ಬೇಡಿಕೆಗಳನ್ನು ಪರಿಹರಿಸಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಹಾಗೂ ತಾಲ್ಲೂಕು ಕಛೇರಿಯಲ್ಲಿ ಸರಿಯಾದ ಸಮಯಕ್ಕೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಅದನ್ನು ಸರಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಸಮಿತಿ ಒತ್ತಾಯಿಸುತ್ತದೆ.
ಈ ಸಮಯದಲ್ಲಿ ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಬಯಲುಸೀಮೆ ಕಾರ್ಯದರ್ಶಿ ಸಿ.ವಿ.ಪ್ರಭಾಕರಗೌಡ, ಜಿಲ್ಲಾಕಾರ್ಯಧ್ಯಕ್ಷ ರಮೇಶ್, ತಾಲೂಕು ಸಂಚಾಲಕ ಟಿ.ಆರ್.ಸುರೇಶ್, ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟಸ್ವಾಮಿರೆಡ್ಡಿ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ರಾಧಮ್ಮ ಕೆ.ಎನ್.ವೆಂಕಟೇಶ್, ಪುಷ್ಪಾವತಿ, ಪದ್ಮಮ್ಮ, ಅನಿತ, ಉಮಾದೇವಿ, ಶ್ಯಾಮಲ ಇದ್ದರು.

