

ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ನಲ್ಲಿ ಶೇ.100 ಫಲಿತಾಂಶ. 625ಕ್ಕೆ 625 ಅಂಕಗಳನ್ನುಗಳಿಸುವುದರೊಂದಿಗೆ ರಾಜ್ಯ ಮಟ್ಟದ ಮೊದಲ ರ್ಯಾಂಕ್ನೊAದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ
ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ನ 83 ವಿದ್ಯರ್ಥಿಗಳು ಈ ರ್ಷದ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ ಎಲ್ಲರೂ ಯಶಸ್ವಿಯಾಗಿ ಉತ್ತರ್ಣರಾಗಿದ್ದಾರೆ. ಇವರಲ್ಲಿ 50 ವಿದ್ಯರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 32ವಿದ್ಯರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತರ್ಣರಾಗಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತರ್ಣರಾಗಿ ಶಾಲೆಯ ಗರಿಮೆಯನ್ನು ಉತ್ತುಂಗಕ್ಕೇರಿಸಿದ್ದಾರೆ.
ಪ್ರೀತಮ್ ಜಿ ಪೂಜಾರಿ 625 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದು, ರಾಜ್ಯ ಮಟ್ಟದ ಮೊದಲ ರ್ಯಾಂಕ್ನ್ನು ಗಳಿಸಿ ಶಾಲೆಯ ಕರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ನಂದಶ್ರೀ ಶೆಟ್ಟಿ ಮತ್ತು ಗ್ರೀಷ್ಮಾ 616 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಯುಕ್ತ ಎಂ ಶೆಟ್ಟಿ ಶರ್ವಾಣಿ ಉಪ್ಪೂರ್ 610 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯರ್ಥಿಗಳ ಈ ಸಾಧನೆಗೆ ಸಂಸ್ಥೆಯ ವಿನೂತನ ಕರ್ಯಯೋಜನೆಗಳು, ಮತ್ತು ಶಿಕ್ಷಕರ ಮರ್ಗರ್ಶನ, ಶ್ರಮ ಹಾಗೂ ನಿರಂತರ ಅಭ್ಯಾಸ ಪ್ರಮುಖ ಕಾರಣವಾಗಿದ್ದು, ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.












