

ಮೂಡ್ಲಕಟ್ಟೆ: ಎಂ.ಐ.ಟಿ ಕಾಲೇಜಿನಲ್ಲಿ ‘ಸಾವಿಷ್ಕರ್-2026’: ಮೈಸೂರು ಎಕ್ಸ್ಪ್ರೆಸ್ ಮತ್ತು ಬ್ಯಾಂಡ್ ಸ್ಟ್ರಿಂಗ್ಸ್ ತಂಡದಿಂದ ಸಂಗೀತ ರಸದೌತಣ
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏಪ್ರಿಲ್ 23 ಮತ್ತು 24 ರಂದು ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ ‘ಸಾವಿಷ್ಕರ್-2026’ ಅದ್ಧೂರಿಯಾಗಿ ಜರುಗಲಿದೆ. ಉದ್ಫ಼ಾಟಕರಾಗಿ ಪ್ರಸಿದ್ದ ಯಕ್ಷಗಾನ ಕಲಾವಿದರಾದ ಡಾ.ಶಿವಾನಂದ ಹೆಗ್ಡೆ ಕೆರೆಮನೆ ಆಗಮಿಸಲಿದ್ದಾರೆ. ಈ ಸಾಂಸ್ಕೃತಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ದೇಶದ ಖ್ಯಾತ ಸಂಗೀತ ತಂಡಗಳಿಂದ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಏಪ್ರಿಲ್ 23ರಂದು ಸಂಜೆ ಪ್ರಖ್ಯಾತ ಸಂಗೀತ ತಂಡವಾದ ‘ಮೈಸೂರು ಎಕ್ಸ್ಪ್ರೆಸ್’ ವತಿಯಿಂದ ಪವರ್ಫುಲ್ ಸಂಗೀತ ಪ್ರದರ್ಶನ ನಡೆಯಲಿದೆ. ಯುವ ಸಮೂಹವನ್ನು ಹುಚ್ಚೆಬ್ಬಿಸುವ ಮೆಲೋಡಿ ಮತ್ತು ಮಾಸ್ ಹಾಡುಗಳ ಸಂಗಮ ಈ ಕಾರ್ಯಕ್ರಮದ ವಿಶೇಷ. ಸಾವಿಷ್ಕರ್ ಸಂಭ್ರಮದ ಎರಡನೇ ದಿನದಂದು ‘ಬ್ಯಾಂಡ್ ಸ್ಟ್ರಿಂಗ್ಸ್’ ತಂಡದ ಕಲಾವಿದರು ತಮ್ಮ ಅದ್ಭುತ ಗಾಯನ ಮತ್ತು ವಾದ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ವಿವಿಧ ಶೈಲಿಯ ಹಾಡುಗಳ ಮೂಲಕ ಈ ತಂಡವು ಸಂಗೀತ ಪ್ರೇಮಿಗಳಿಗೆ ಹಬ್ಬದೂಟ ಬಡಿಸಲಿದೆ. ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಸೇರಿದಂತೆ ಇನ್ನಿತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಎರಡು ದಿನದ ಆಕರ್ಷಣೆಯಾಗಿ ಪ್ರಸಿದ್ಧ ಆರ್ ಡಿ ಎಕ್ಸ್ ಬೈಕ್ ಸ್ಟಂಟ್ಸ್ ಹಾಗೂ ಕಾರ್ ಎಕ್ಪೋ ಆಯೋಜಿಸಲಾಗಿದೆ.

