P.A. First Grade College celebrated its annual day


ಪಿ.ಎ. ಪ್ರಥಮ ದರ್ಜೆ ಕಾಲೇಜು ತನ್ನ ವಾರ್ಷಿಕೋತ್ಸವವನ್ನು ಪಿ.ಎ.ಇ.ಟಿ. (PAET) ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಅಬ್ದುಲ್ಲಾ ಇಬ್ರಾಹಿಂ ಅವರ ಆಶ್ರಯದಲ್ಲಿ 16 ಏಪ್ರಿಲ್ 2026ರಂದು PACE ಸಭಾಂಗಣದಲ್ಲಿ ಆಚರಿಸಿತು. ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಮುಖ್ಯ ಅತಿಥಿ ಸೇರಿದಂತೆ ಗಣ್ಯ ಅತಿಥಿಗಳು, ಉಪನ್ಯಾಸಕರು, ಪೋಷಕರು ಹಾಗೂ ಉತ್ಸಾಹಭರಿತ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಹರ್ಷಭರಿತ ವಾತಾವರಣ ನಿರ್ಮಾಣಗೊಂಡಿತ್ತು. ಮುಖ್ಯ ಅತಿಥಿಯಾದ ದೈಜಿವರ್ಲ್ಡ್ ಮೀಡಿಯಾ, ಮಂಗಳೂರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಾಲ್ಟರ್ ನಂದಳಿಕೆ ಅವರು ವಿದ್ಯಾರ್ಥಿಗಳಿಗೆ ಸಂವಹನ ಹಾಗೂ ಭಾವನಾತ್ಮಕ ಬುದ್ಧಿಮತ್ತೆಯಂತಹ ಸಾಫ್ಟ್ ಸ್ಕಿಲ್ಸ್ಗಳ ಮಹತ್ವವನ್ನು ವಿವರಿಸಿದರು. ಪರಿಶ್ರಮ, ಸಹನೆ ಹಾಗೂ ದೃಢ ಸಂಕಲ್ಪದ ಮೂಲಕ ಗುರಿ ಸಾಧಿಸಲು ಪ್ರೇರೇಪಿಸಿದರು. ಇಂದಿನ ಯುವಕರು ನಾಳೆಯ ನಾಯಕರು ಹಾಗೂ ಭವಿಷ್ಯದ ದಿಗ್ಗಜರು ಎಂಬುದನ್ನು ಅವರು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಪ್ರವೀಣ್ ತೌರೋ, PACE ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ., PACP ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್, PAPT ಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಖಾನ್, PAIP ಪ್ರಾಂಶುಪಾಲರಾದ ಡಾ. ಅಫೀಫಾ ಸಲೀಂ, ಕ್ಯಾಂಪಸ್ AGM ಶ್ರೀ ಶರ್ಫುದ್ದೀನ್ ಪಿ.ಕೆ. ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥ ಹಾಗೂ CMSR ನಿರ್ದೇಶಕರಾದ ಡಾ. ಸಯ್ಯಾದ್ ಅಮೀನ್ ಅಹಮ್ಮದ್, ಖರೀದಿ ವ್ಯವಸ್ಥಾಪಕ ಶ್ರೀ ಹ್ಯಾರಿಸ್ ಟಿ.ಡಿ., ಪೇಸ್ ಮಾಜಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್, ಉಪಪ್ರಾಂಶುಪಾಲೆ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶರ್ಮಿಳಾ ಕುಮಾರಿ, ಶ್ರೀ ಅಬ್ಬಾಸ್ ಉಚ್ಚಿಲ್ ಉಪಸ್ಥಿತರಿದ್ದರು.
ಕಾರ್ಯಕ್ರಮವು 3ನೇ ವರ್ಷದ ಬಿಬಿಎ ವಿದ್ಯಾರ್ಥಿಯಾದ ಶ್ರೀ ಮೊಹಮ್ಮದ್ ಅಶಿಕ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ನಿರ್ವಹಣಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪ್ತಿ ಉದ್ಯಾವರ್ ಸ್ವಾಗತ ಭಾಷಣ ಮಾಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ . ಪ್ರಾಂಶುಪಾಲರಾದ ಡಾ.ಸರ್ಫ್ರಾಜ್ ಜೆ ಹಾಸಿಂ ಅವರು 2025–2026 ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಬಿ.ಎಸ್ಸಿ ಆಹಾರ ಪೌಷ್ಠಿಕತೆ ಮತ್ತು ಡಯಟೆಟಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಮತಿ ಆಯಿಶತ್ ಲುಥ್ಫಾ ನಜಾ ಕೆ ಅವರನ್ನು ಗೌರವಿಸಲಾಯಿತು. ಸಿಲ್ವಿಯೋರಾ ಸ್ಪರ್ಧೆಗಳ ವಿಜೇತರು, ಸ್ಟೂಡೆಂಟ್ ಆಫ್ ದಿ ಮಂಥ್, ಸ್ಪೀಕರ್ ಆಫ್ ದಿ ಮಂಥ್, ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳು, ಸಾಂಸ್ಕೃತಿಕ, ಕ್ರೀಡಾ ಹಾಗೂ ಇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2025–26 ಸಾಲಿನ ಅತ್ಯುತ್ತಮ ಹೊರಹೋಗುವ ಿದ್ಯಾರ್ಥಿಗಳಾಗಿ ಶ್ರೀ ಅಫ್ತಾಬ್ ಅಹಮದ್ ಅಬ್ಬಾಸ್ (3ನೇ ಬಿಬಿಎ), ಶ್ರೀಮತಿ ಫಾತಿಮತ್ ಜೋಹಾರಾ (3ನೇ ಬಿ.ಕಾಂ), ಶ್ರೀಮತಿ ಸಫ್ವಾ ನಿಸಾರ್ (3ನೇ ಬಿಸಿಎ) ಮತ್ತು ಶ್ರೀಮತಿ ಹಿಯಾ ಆಶಿಕ್ (3ನೇ ಬಿ.ಎಸ್ಸಿ FND) ಅವರನ್ನು ಆಯ್ಕೆ ಮಾಡಲಾಯಿತು.
ಕ್ರೀಡಾ ಕ್ಷೇತ್ರದ ಒಟ್ಟಾರೆ ಚಾಂಪಿಯನ್ಶಿಪ್ನ್ನು ಬ್ಲೂ ಹೌಸ್ ಗೆದ್ದಿತು. ತಂಡದ ಸೂಕ್ಷ್ಮ ಯೋಜನೆ ಹಾಗೂ ಸಮನ್ವಯದಿಂದ ಕಾರ್ಯಕ್ರಮವು ಭರ್ಜರಿ ಯಶಸ್ಸನ್ನು ಕಂಡಿತು. ಮುಖ್ಯ ಅತಿಥಿಗಳ ಸನ್ಮಾನದಿಂದ ಕಾರ್ಯಕ್ರಮದ ಅಧಿಕೃತ ಸಮಾರಂಭ ಅಂತ್ಯಗೊಂಡಿತು. ಧನ್ಯವಾದ ಸಮರ್ಪಣೆಯನ್ನು ಪಿ.ಎ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಹರಿಕೃಷ್ಣನ್ ಅವರು ಸಲ್ಲಿಸಿದರು.
ಕಾರ್ಯಕ್ರಮವನ್ನು ಆಹಾರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅಲೀಮಾ ನಬೀಲಾ, 3ನೇ ವರ್ಷದ ಬಿಸಿಎ ವಿದ್ಯಾರ್ಥಿನಿ ಶ್ರೀಮತಿ ಸಫ್ವಾ ನಿಸಾರ್ ಹಾಗೂ 2ನೇ ವರ್ಷದ ಬಿಬಿಎ ವಿದ್ಯಾರ್ಥಿನಿ ಶ್ರೀಮತಿ ಹಿಬಾ ಮರಿಯಂ ಅವರು ನಿರ್ವಹಿಸಿ, ಕಾರ್ಯಕ್ರಮವನ್ನು ಸುಗಮ ಹಾಗೂ ಸ್ಮರಣೀಯಗೊಳಿಸಿದರು. ಮಾನವಿಕ ಮತ್ತು ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಮುನೀರಾ ಎ., ಆಹಾರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಕೃತಿಕಾ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಶ್ರುತಿ ಅವರು ಕಾರ್ಯಕ್ರಮವನ್ನು ಸಮರ್ಪಕವಾಗಿ ಸಂಯೋಜಿಸಿದರು.
P.A. First Grade College celebrated its annual day

P.A. First Grade College celebrated its annual day under the patronage of Mr. Abdulla Ibrahim, Managing Trustee, PAET on 16 April 2026 at the PACE Auditorium. The event was graced by the esteemed Chief Guest, along with distinguished guests, faculty members, parents, and enthusiastic students, creating an atmosphere filled with joy and celebration. The Chief Guest, Mr. Walter Nandalike, Managing Director, Daijiworld Media, Mangaluru, addressed the gathering and highlighted the importance of soft skills, particularly communication and emotional intelligence. He further encouraged the students to avoid shortcuts and instead embrace hard work, patience, and perseverance in pursuing their dreams. Emphasizing the potential of the younger generation, he remarked that today’s youth are the leaders of today and the legends of tomorrow.
Mr. Praveen Tauro, Marketing Manager- Daijiworld Media Pvt. Ltd., Dr. Ramis M.K., (Principal, PACE), Dr. Saleemulla Khan, (Principal, PACP), Prof. Ismail Khan, (Principal, PAPT), Dr. Afeefa Saleem, (Principal, PAIP), Mr. Sharfuddin P.K., (AGM) Campus, Dr. Sayyad Ameen Ahammad, (Dean (SA) & Director, CMSR), Mr. Haris T D(Purchase Manager, PAET), Dr. Abdul Shereef (Former Principal PACE), Dr. Sharmila Kumari, (Vice-Principal & Head- Department of Computer Science Engineering, PACE), Mr. Abbas Ucchil, Dr. Iqbal, (Campus Manager & Director Physical Education), were present on the occasion.
The program began by invoking the blessings of the almighty by Mr. Mohammed Ashiq from 3 rd year BBA. The gathering was welcomed by Ms. Deepthi Udyavar, Head- Dept. of Business Administration. Dr. Surfraz J. Hasim, Principal, PAFGC presented the Annual Report of the year 2025-2026.
Mangalore University 1st Rank Holder from B.Sc in Food Nutrition and Dietetics, Ms. Ayshath Luthfa Naja K, was felicitated for her outstanding achievement.The winners of Silviora competitions, The Student of the Month, The Speaker of the Month, Students who had excelled in the Universities Examinations, Cultural, Sports and overall involvement in college activities were felicitated at the award ceremony. Mr. Afthab Ahamad Abbas (3rd BBA), Ms. Fathimath Zohara (3rd B.Com), Ms. Safwa Nisar (3rd BCA) and Ms. Hiya Ashique (3rd B.Sc FND) were identified as the Best Outgoing Students for the year 2025-26 .

