

ಕುಂದಾಪುರ; ರಾಷ್ಟ್ರೀಯ ಹೆದ್ದಾರಿ 66 ನೇ ಉಡುಪಿ- ಬೈ೦ದೂರು ಏಕಮುಕ ರಸ್ತೆಯಲ್ಲಿ
ಮೋಟಾರ್ ಸೈಕಲ್ ಚಾಲಕ ಅರುಣ್ ಎ೦ಬಾತನು ಅತೀ ವೇಗ ಮತ್ತು ಅಜಾಗರುಕತೆಯಿ೦ದ ಚಾಲನೆ
ಮಾಡಿಕೊ೦ಡು ಬ೦ದು ಕು೦ದಾಪುರ ಶಾಸ್ತ್ರೀ ಪಾರ್ಕ್ ಫ್ಲೈಒವರ್ ಕೊನೆಗೊಳ್ಳುವಲ್ಲಿ ತಲುಪುವಾಗ ಮೋಟಾರ್
ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಬದಿ ಡಿವೈಡರ್ ಗೆ ಹಾಗೂ ಕಬ್ಬಿಣದ ಗಿಲ್ಸ್ ಗಳಿಗೆ ಡಿಕ್ಕಿ ಹೊಡೆದು
ಮೋಟರ್ ಸೈಕಲ್ ಸವಾರ ಮೋಟಾರ್ ಸೈಕಲ್ ನೊಂದಿಗೆ ಸ್ಕಿಡ್ ಆಗಿ ಬಿದ್ದಿದ್ದು ಪರಿಣಾಮ ತಲೆಗೆ ಹಾಗೂ
ಕೈಕಾಲುಗಳಿಗೆ ಗ೦ಭೀರ ಗಾಯವಾಗಿದ್ದು, ಕು೦ದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊ೦ಡು ಹೋಗ
ದಾಖಲಿಸಿರುತ್ತಾರೆ.
ನಂತರ ಆಸ್ಪತ್ರೆಗೆ ಬ೦ದ ಪಿರ್ಯಾದಿದಾರರಾದ ಕೌಶಿಕ್ ಇವರು ಗಾಯಗೊ೦ಡವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊ೦ಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ
ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊ೦ಡು ಹೋಗಿ ದಾಖಲಿಸಿದ್ದು ವೈದ್ಯರು ಪರೀಕ್ಜಿಸಿ ಮೃತ
ಪಟ್ನಿರುವುದಾಗಿ ದೃಢಪಡಿಸಿರುತ್ತಾರೆ.

