

ಕುಂದಾಪುರ “ಕುಂದಪ್ರಭ” ಸಂಸ್ಥೆಯಿಂದ ಶ್ರೇಷ್ಠ ಸಾಧಕರಿಗೆ ನೀಡಲ್ಪಡುತ್ತಿರುವ “ಕೋ. ಮ. ಕಾರಂತ ಪ್ರಶಸ್ತಿ” ಪ್ರದಾನ ಸಮಾರಂಭ ಎ. 19 ಆದಿತ್ಯವಾರದಂದು ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಸಂಜೆ 3:30ಕ್ಕೆ ನಡೆಯಲಿದೆ.
ಮೂಡುಬಿದರೆ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮಿಗಳು ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಲಿದ್ದಾರೆ.
ಪ್ರತಿಭಾವಂತ ಕುಂಚ ಕಲಾವಿದರೂ ಆಗಿರುವ ಉದ್ಯಮಿ, ಫ್ಲೆöÊವಿ ಟೆಕ್ನಾಲಜೀಸ್ ಪ್ರೆöÊ. ಲಿ. ಬೆಂಗಳೂರು ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ಬಳ್ಕೂರು ಜಯರಾಮ ಉಡುಪ “ಕೋ. ಮ. ಕಾರಂತ ಪ್ರಶಸ್ತಿ” ಸ್ವೀಕರಿಸಲಿದ್ದಾರೆ.
ಸಮಾರಂಭವನ್ನು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು. ಬೈಂದೂರ ಶಾಸಕ ಗುರುರಾಜ್ ಗಂಟಿಹೊಳೆ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಭಂಡಾರ್ಕರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷರಾದ ಕೆ. ಶಾಂತಾರಾಮ ಪ್ರಭು ಸಾಧಕರನ್ನು ಗೌರವಿಸುವರು.
ಬಳ್ಕೂರು ಜಯರಾಮ ಉಡುಪರು ರಚಿಸಿದ ಚಿತ್ರಗಳ ಪ್ರದರ್ಶನವನ್ನು ಹಿರಿಯ ಕಲಾವಿದ ಕರ್ನಾಟಕ ಬ್ಯಾಂಕ್ನ ಮಾಜಿ ನಿರ್ದೇಶಕ ಡಾ| ಎಚ್. ರಾಮ ಮೋಹನ್ ಉದ್ಘಾಟಿಸಲಿದ್ದಾರೆ.
ಸಮಾರಂಭದ ಪೂರ್ವದಲ್ಲಿ ವೇಣುಗೋಪಾಲ ಭಟ್, ಕೋಟೇಶ್ವರ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಆಹ್ವಾನಿಸಿದ್ದಾರೆ.

