ಹೊ ವಿಶ್ವ್ ದಾಖ್ಲೊ ಖಂಡಿತ್ ಘಡ್ತಲೊ – ಲಾಂಛನ್ ಮೆಕ್ಳಿಕ್ ಕರ್ನ್ ಭಲಾಯ್ಕೆ ಮಂತ್ರಿ ದಿನೇಶ್ ಗುಂಡೂರಾವ್
“This Record Will Definitely Happen” – Dinesh Gundu Rao Upon Unveiling the Logo

ಮಂಗಳೂರು ; ʼʼಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ, ಅವರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಖಂಡಿತಾ ಈ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಸಾಧ್ಯವಾದಲ್ಲಿ ನಾನೂ ಕಾರ್ಯಕ್ರಮಕ್ಕೆ ಬರುವೆʼʼ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಕೊಂಕಣಿಯ ಪ್ರಮುಖ ಸಾಂಸೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಅಸ್ತಿತ್ವದ ಮಾಣಿಕ್ಯ ಮಹೋತ್ಸವ ಆಚರಣಾ ಸಂದರ್ಭದಲ್ಲಿ, ಇದೇ ನವೆಂಬರ್ 03 ರಿಂದ 15 ರವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತವನ್ನು ವೀಣೆಯ ಪ್ರತಿಕೃತಿ ಮೇಲಿರುವ 12 ವಿಭಿನ್ನ ರಂಗಿನ ದೀಪಗಳನ್ನು ಬೆಳಗಿಸಿ ಮತ್ತು ಹೂವಿನ ಮೊಗ್ಗಿನಿಂದ ಸಮಾವೇಶದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಗೌರವ ಅತಿಥಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ ಇವರಿಗೆ ಸಂಗೀತ ಬೇಟನ್ ಹಸ್ತಾಂತರಿಸಿ ಮಾತನಾಡಿದರು.ʻಮಹಾನ್ ಸಾಧನೆಗಳನ್ನು ಮಾಡಿದ ಮಾಂಡ್ ಸೊಭಾಣ್ ಸಂಸ್ಥೆಗೆ ಇದುವರೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಕೊಂಕಣಿಯ ಕೀರ್ತಿ ಬಾವುಟವನ್ನು ಸದಾಕಾಲ ಹಾರಿಸುವ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸರಕಾರ ಅನುದಾನ ನೀಡಬೇಕು. ಈ ದಾಖಲೆಯೂ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಗೌರವ ಅತಿಥಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಗೋವಾದ ಕಲಾವಿದ ಮೈಕಲ್ ಗ್ರೇಶಿಯಸ್ ಶುಭ ಹಾರೈಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಲುವಿ ಪಿಂಟೊ, ಕೊಂಕಣಿ ಸಂಗೀತಕ್ಕೆ ಮಹೋನ್ನತ ಹಿರಿಮೆ ತಂದು ಕೊಟ್ಟ ಎರಿಕ್ ಒಝೇರಿಯೊರವರ ಕೆಲಸಗಳನ್ನು ಮುಂದುವರಿಸುವುದೇ ನಾವು ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ. ಇದು ಕೇವಲ ಗಿನ್ನೆಸ್ ದಾಖಲೆಯ ಪ್ರಯತ್ನವಾಗದೆ, ಕೊಂಕಣಿ ಒಗ್ಗಟ್ಟನ್ನು ಆಚರಿಸುವ, ಕೊಂಕಣಿ ಬಾವುಟವನ್ನು ಜಗದೆತ್ತರಕ್ಕೆ ಏರಿಸುವ ಹಾಗೂ ಈ ಮೂಲಕ ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಅವಕಾಶವಾಗಲಿದೆ. ಇದುವರೆಗೆ ನಮ್ಮ ಕಾರ್ಯಕ್ರಮದ ಶಿಸ್ತು, ಅಚ್ಚುಕಟ್ಟುತನ ನೋಡಿ ಜನರೇ ಸಹಕರಿಸಿದ್ದಾರೆ. ಈ ಕಾರ್ಯಕ್ರಮ ಕೂಡಾ ಎಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ. ಎಂದು ಹೇಳಿದರು.
ಗಾಯಕಿ ಜೊಯ್ಸ್ ಒಝೇರಿಯೊರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಮತ್ತು ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು. ರೈನಾ ಸಿಕ್ವೇರಾ ನೇತೃತ್ವದಲ್ಲಿ ಸುಮೇಳ್ ತಂಡದಿಂದ ಗಾಯನ ನಡೆಯಿತು. ಮಾಂಡ್ ಸೊಭಾಣ್ ನಡೆದು ಬಂದ ಹಾದಿಯ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಕಲಾಂಗಣ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ ಧನ್ಯವಾದ ಸಲ್ಲಿಸಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.
ಹೊ ವಿಶ್ವ್ ದಾಖ್ಲೊ ಖಂಡಿತ್ ಘಡ್ತಲೊ – ಲಾಂಛನ್ ಮೆಕ್ಳಿಕ್ ಕರ್ನ್ ಭಲಾಯ್ಕೆ ಮಂತ್ರಿ ದಿನೇಶ್ ಗುಂಡೂರಾವ್

ಮಂಗಳೂರ್ ; ʻʻಕೊಂಕ್ಣ್ಯಾಂಚೊ ಜಣಾ ಸಂಖೊ ಉಣೊ ತರೀ, ತಾಂಚಿ ಉಮೆದ್ ಆನಿ ಸರ್ಜನ್ಶೀಳತಾ ವಾಖಣೆಕ್ ಫಾವೊ. ಸಾಂಸ್ಕೃತಿಕ್ ಥಳಾರ್ ಆನಿ ಸಮಾಜ್ ಸೆವೆಂತ್ ಹೊ ಸಮುದಾಯ್ ಮುಕಾರ್ ಆಸಾ. ಸಂಗೀತ್ ತಾಂಚ್ಯಾ ರಗ್ತಾಂತ್ ಆಸಾ. ಸಬಾರ್ ದಾಖ್ಲೆ ರಚ್ಲ್ಲ್ಯಾ ಮಾಂಡ್ ಸೊಭಾಣ್ ಸಂಸ್ಥ್ಯಾ ಥಾವ್ನ್ ಸ ಹಜಾರ್ ಗಾವ್ಪಿ ಆನಿ ಪಾಂಚ್ ಹಜಾರ್ ಪದಾಂಸವೆಂ ನವೊ ವಿಶ್ವ್ ದಾಖ್ಲೊ ಘಡ್ಚೆಂ ಪ್ರೇತನ್ ಸುರ್ವಾತ್ಲಾಂ. ಸಾಧ್ಯ್ ತರ್ ಹಾಂವ್ಯಿ ಯೆತಲೊಂʼʼ ಮ್ಹಣ್ ಕರ್ನಾಟಕ ಸರ್ಕಾರಾಚ್ಯಾ ಭಲಾಯ್ಕೆ ಆನಿ ಕುಟ್ಮಾ ಕಲ್ಯಾಣ್ ಮಂತ್ರಿ ದಿನೇಶ್ ಗುಂಡೂರಾವ್ ಹಾಣೆಂ ಸಾಂಗ್ಲೆಂ.
ತೊ ಕೊಂಕ್ಣೆಚೆಂ ಪ್ರಮುಖ್ ಸಾಂಸ್ಕೃತಿಕ್ ಸಂಘಟನ್ ಮಾಂಡ್ ಸೊಭಾಣಾಚ್ಯಾ ಮಾಣಿಕ್ ಉತ್ಸವಾ ಸಂದರ್ಭಿಂ, ನವೆಂಬ್ರ್ 3-15 ಪರ್ಯಾಂತ್ ಯೆವ್ಜಿಲ್ಲ್ಯಾ, ಪಯ್ಲ್ಯಾ ವಿಶ್ವ್ ಕೊಂಕ್ಣಿ ಸಂಗೀತ್ ಮಹಾ ಸಮಾವೇಶಾಚೊ ಮುಹೂರ್ತ್, ವೀಣಾ ಪ್ರತಿಕೃತಿ ವಯ್ಲೆ 12 ರಂಗಾಳ್ ದಿವೆ ಪೆಟೊವ್ನ್ ಆನಿ ಬೊಂಗೊ ಫುಲೊವ್ನ್ ಲಾಂಛನ್ ಮೆಕ್ಳಿಕ್ ಕರ್ನ್ ಉಲಯ್ಲೊ.
ಮಾನಾಚೊ ಸಯ್ರೊ ವಿಧಾನ್ ಪರಿಷತ್ ಸಾಂದೊ ಐವನ್ ಡಿಸೋಜಾನ್ ಸಂಗೀತ್ ನಿರ್ದೇಶಕ್ ಜೊಯೆಲ್ ಪಿರೇರಾಕ್ ಸಂಗೀತ್ ಬೇಟನ್ ಹಾತಾಂತರ್ ಕೆಲೆಂ. ಮ್ಹಾನ್ ಸಾಧನಾಂ ಕೆಲ್ಲ್ಯಾ ಮಾಂಡ್ ಸೊಭಾಣಾಕ್ ಎದೊಳ್ ಕರ್ನಾಟಕ ರಾಜ್ಯೋತ್ಸವ್ ಪ್ರಶಸ್ತಿ ಮೆಳುಂಕ್ ನಾ. ಹ್ಯಾ ವಿಶಿಂ ಸರ್ಕಾರಾಚೆಂ ಗುಮಾನ್ ವೊಡ್ತಲೊಂ. ಕೊಂಕ್ಣೆಚೊ ಕೀರ್ತಿ ಬಾವ್ಟೊ ಸದಾ ಉಬೊಂವ್ಚ್ಯಾ ಸಂಸ್ಥ್ಯಾಚ್ಯಾ ಹ್ಯಾ ಕಾರ್ಯಾಕ್ ಸರ್ಕಾರಾನ್ ಅನುದಾನ್ ದೀಜೆ. ಹೊ ದಾಖ್ಲೊಯ್ ಯಶಸ್ವೆನ್ ಘಡ್ತಲೊ ಮ್ಹಣ್ ಬರೆಂ ಮಾಗ್ಲೆಂ.
ಹೆರ್ ಮಾನಾಚೆ ಸಯ್ರೆ ಮಂಗ್ಳುರ್ ದಕ್ಷಿಣ್ ಶಾಸಕ್ ವೇದವ್ಯಾಸ ಕಾಮತ್ ಆನಿ ಗೊಂಯ್ಚೊ ಕಲಾಕಾರ್ ಮೈಕಲ್ ಗ್ರೇಶಿಯಸ್ ಹಾಣಿಂ ಬರೆಂ ಮಾಗ್ಲೆಂ.
ಪ್ರಸ್ತಾವಿಕ್ ಉಲೊವ್ಪ್ ದಿಲ್ಲ್ಯಾ ಅಧ್ಯಕ್ಷ್ ಲುವಿ ಪಿಂಟೊನ್ ಕೊಂಕ್ಣಿ ಸಂಗೀತಾಕ್ ಮಾನ್ ಜೊಡುನ್ ದಿಲ್ಲ್ಯಾ ಎರಿಕ್ ಒಝೇರಿಯೊಚಿಂ ಕಾಮಾಂ ಫುಡೆಂ ವರ್ಚಿಂಚ್ ಆಮಿ ತಾಕಾ ಭೆಟೊಂವ್ಚಿ ನೀಜ್ ಶ್ರದ್ಧಾಂಜಲಿ. ಹೆಂ ಫಕತ್ ಏಕ್ ಗಿನ್ನೆಸ್ ದಾಖ್ಲ್ಯಾ ಪ್ರಯತ್ನ್ ನ್ಹಯ್, ಬಗಾರ್ ಕೊಂಕ್ಣಿ ಎಕ್ವಟ್ ಆಚರುಂಚೆಂ, ಕೊಂಕ್ಣಿ ಬಾವ್ಟೊ ಉಂಚಾಯೆಕ್ ಉಬಾರ್ಚೆಂ ಆನಿ ತ್ಯಾ ಮುಕಾಂತ್ರ್ ಕೊಂಕ್ನೀ ಸಂಗೀತಾಚಿ ಗಿರೇಸ್ತ್ ಕಾಯ್ ಸಂಭ್ರಮ್ಚೊ ಸುವಾಳೊ ಜಾತಲೊ. ಎದೊಳ್ ಆಮ್ಚ್ಯಾ ಕಾರ್ಯಾಚಿ ಶಿಸ್ತ್, ಮಾಂಡಾವಳ್ ಪಳೆವ್ನ್ ಲೊಕಾನ್ ಸಹಕಾರ್ ದಿಲಾ. ಹೆಂ ಕಾರ್ಯೆಂಯ್ ಸರ್ವಾಂಚ್ಯಾ ಸಹಕಾರಾನ್ ಜಯ್ತೆವಂತ್ ಜಾತಲೆಂ.
ಹ್ಯೆ ವೆಳಿಂ ಜೊಯ್ಸ್ ಒಝೇರಿಯೊಕ್ ಫುಲಾಂಚೊ ಮಾನ್ ಭೆಟಯ್ಲೊ. ವೆದಿರ್ ಮೆಸ್ಕೊಮ್ ಅಧ್ಯಕ್ಷ್ ಹರೀಶ್ ಕುಮಾರ್, ಮಾಂಡ್ ಸೊಭಾಣ್ ಸಂಘಟಕ್ ಸ್ಟ್ಯಾನಿ ಆಲ್ವಾರಿಸ್ ಆನಿ ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತ್ ಆಸ್ಲ್ಲೆ. ರೈನಾ ಸಿಕ್ವೇರಾಚ್ಯಾ ಮುಕೆಲ್ಪಣಾರ್ ಸುಮೇಳ್ ಪಂಗ್ಡಾ ಥಾವ್ನ್ ಗಾಯನ್ ಚಲ್ಲೆಂ. ಮಾಂಡ್ ಸೊಭಾಣ್ ಚಲುನ್ ಆಯಿಲ್ಲ್ಯಾ ವಾಟೆ ವಿಶ್ಯಾಂತ್ ಸಾಕ್ಷೆ ಚಿತ್ರ್ ದಾಕಯ್ಲೆಂ. ಕಲಾಂಗಣ್ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊನ್ ಆಭಾರ್ ಮಾಂದ್ಲೊ. ಐರಿನ್ ರೆಬೆಲ್ಲೊನ್ ಕಾರ್ಯೆಂ ಚಲಯ್ಲೆಂ.
“This Record Will Definitely Happen” – Dinesh Gundu Rao Upon Unveiling the Logo

Mangaluru; “Although the Konkani population is small, their enthusiasm and creativity are commendable. The Konkani community is at the forefront of the cultural realm and social service. Music is in their blood. Mandd Sobhann, an organization that has set many records, is now gearing up to create a new World Record with 6,000 singers and 5,000 songs. I am confident that this record will definitely be achieved. If possible, I will also attend the program,” said Dinesh Gundu Rao, the Minister for Health and Family Welfare, Government of Karnataka.
He was speaking after inaugurating the First World Konkani Music Mega Convention – organized from November 3rd to 15th by the Premier Konkani Cultural Organization Mandd Sobhann on the occasion of its Ruby Jubilee celebrations. He inaugurated the event by lighting 12 differently colored lamps on a replica of a Veena and unveiled the convention’s logo from a flower bud.
Guest of Honor and MLC, Ivan Dsouza, handed over the Musical Baton to music director Joel Pereira and spoke. “Mandd Sobhann, an organization that has made magnificent achievements, has not yet been given the Karnataka Rajyotsava Award. The government’s attention will be drawn to this matter. The government must provide grants for this program organized by an institution that forever flies the flag of Konkani glory high. I wish this record attempt a grand success,” he said.
Guest of Honor, Mangaluru South MLA Vedavyas Kamath, and Goan Artiste Michael Gracias conveyed their best wishes.
Delivering the introductory remarks, President Louis Pinto said, “Continuing the work of Eric Ozario, who brought immense glory to Konkani music, is the true tribute we can offer him. This will not just be a Guinness Record attempt, but an opportunity to celebrate Konkani unity, hoist the Konkani flag to global heights, and thereby celebrate the rich heritage of Konkani Music. Seeing the discipline and impeccable organization of our programs, people have cooperated so far. This program will also be successful with everyone’s cooperation.”
Singer Joyce Ozario was honored during the event. MESCOM Chairman Harish Kumar, Mandd Sobhann Coordinator Stany Alvares and Secretary Ronald Crasta were present on the dais. A singing performance was delivered by the ‘Sumell’ troupe led by Raina Sequeira. A documentary showcasing the journey of Mandd Sobhann was screened. Kalaangann ‘Pirjent’ Roy Castelino proposed the vote of thanks. Irene Rebello compered the program.










