

ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಯಲ್ಲಿ U. ಏ.ಉ ತರಗತಿ ಗೆ ಗ್ರಾಜುಯೇಷನ್ ಡೇ ಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ನಿವೃತ್ತ ಮುಖ್ಯೋ ಪಾಧ್ಯಾಯಿನಿ ರಾದ ಶ್ರೀಮತಿ ಗೌರಿ ಇವರು ವಿದ್ಯಾರ್ಥಿ ಗಳಿಗೆ ಸರ್ಟಿಫಿಕೇಟ್ ನೀಡಿ ” ಮಕ್ಕಳು ಮಣ್ಣಿನ ಮುದ್ದೆ, ಸುಂದರ ಕಲಾಕೃತಿ ಮಾಡುವುದು ಶಿಕ್ಷಕರ ಜವಾಬ್ದಾರಿ ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿ ರವರು “ಮಕ್ಕಳಲ್ಲಿ ಇರುವ ಸೃಜನಾತ್ಮಕತೆ ಯನ್ನು ಗುರುತಿಸಿ, ಪ್ರೋತ್ಸಾಹವನ್ನು ಶಿಕ್ಷಕರು ಮತ್ತು ಪೋಷಕರು ನೀಡ ಬೇಕೆಂದು” ತಮ್ಮ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ಬಾರಕೂರು ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ.ಶ್ರೀಮತಿ ಕಿಶೋರಿ ಶೆಟ್ಟಿ , K. G ತರಗತಿಗಳ ಮುಖ್ಯಸ್ಥರಾದ ಶ್ರೀಮತಿ ಸುಜಾತಾ ಎಲ್. ರೈ ರವರು ಉಪಸ್ಥಿತರಿದ್ದರು.
LKG ತರಗತಿಯ ವಿದ್ಯಾರ್ಥಿ ಗಳು ಪ್ರಾರ್ಥನೆ ಮತ್ತು ಸ್ವಾಗತ ನೃತ್ಯ ಮಾಡಿದರು. ಶಿಕ್ಷಕಿ ಶ್ರೀಮತಿ ಕುಸುಮ ವಂದಿಸಿದರು.. ಶಿಕ್ಷಕಿಯರಾದ ಶ್ರೀಮತಿ ಚಂದ್ರ ಕಲಾ ಮತ್ತು ಶ್ರೀಮತಿ ರಕ್ಷಿತಾ ರವರು ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಶ್ರೀಮತಿ ಶುಭ, ಶಾಲೆಯ ಸಹಾಯಕರಾದ ಶ್ರೀಮತಿ ಗ್ರೇಟಾ, ಶ್ರೀಮತಿ ಕವಿತಾ, ಶ್ರೀ ವಿಜಯ ಪೂಜಾರಿ ಮತ್ತು ಶಾಲೆಯ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.













