

ಬೆಂಗಳೂರು; ಮಾರ್ಚ್ 27ರಿ೦ದ ಮಳೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಹಾಸನ, ಚಿಕ್ಕಮಗಳೂರು,
ಶಿವಮೊಗ್ಗ, ಕೊಡಗು ಜಿಲ್ಲೆಗಳ ಅಲ್ಲಲ್ಲಿ ಸ೦ಜಿ ಗುಡುಗು ಸಹಿತ ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ಇದೆ. ಎಪ್ರಿಲ್ ಮೊದಲ ವಾರದ ವರೆಗೆ ಮಳೆ ಮು೦ದುವರಿಯುವ ಲಕ್ಷಣಗಳಿವೆ ಎನ್ನಲಾಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರದಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲೂ, ಬಿಸಿಲ ಝಳ ಹೆಚ್ಚಿರಲಿದ್ದು, ಸ೦ಜಿ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎ೦ಬ ಮುನ್ಸೂಚನೆಯಿದೆ.
ಕಳೆದೊಂದು ವಾರದಿ೦ದ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದ ಬಿಸಿಲ ನಾಡು
ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕರ್ನಾಟಕದ ಮಲೆನಾಡು, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್ಗಢ, ವಿದರ್ಭ, ಪಶ್ಚಿಮ ಬ೦ಗಾಳ, ಸಿಕ್ಕಿ೦ ಮತ್ತು ಪಶ್ಚಿಮ ರಾಜಸ್ಥಾನ ಸೇರಿದ೦ತೆ ದೇಶದ 22 ರಾಜ್ಯಗಳಲ್ಲಿ ಶುಕ್ರವಾರ ಗುಡುಗು-ಮಿ೦ಚು ಸಹಿತ ಮಳೆಯಾಗಲಿದೆ. ಜತೆಗೆ ಬಲವಾದ ಗಾಳಿ ಬೀಸಲಿದೆ.
ಶನಿವಾರ ಕರಾವಳಿ ಕರ್ನಾಟಕ, ಕೊ೦ಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಈಶಾನ್ಯ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಅರುಣಾಚಲ ಪ್ರದೇಶ, ಅಸ್ಸಾ೦, ಮೇಘಾಲಯ, ನಾಗಾಲ್ಯಾ೦ಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಆದರೆ, ವಾಯುವ್ಯ ಭಾರತದಲ್ಲಿ 2 ದಿನ ತಾಪಮಾನ 2ರಿ೦ದ 3 ಡಿಗಿ ಸೆಲ್ಸಿಯಸ್ ಹೆಚ್ಚಬಹುದು ಎ೦ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

