288 academic achievers awarded Pratibha Puraskar by Fuddar Foundation


ಮಂಗಳೂರು; ಕಥೋಲಿಕ ಕ್ರೆöÊಸ್ಥ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಶೈಕ್ಶಣಿಕ ಕ್ಶೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ನೇತ್ರತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಮರ್ಚ್ 22 ರಂದು ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಸಭಾಂಗಣದಲ್ಲಿ ನೆರವೇರಿಸಲಾಯಿತು. ಎಸ್ಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಶೆಗಳಲ್ಲಿ ಉತ್ತೀರ್ಣರಾದ 288 ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾಗಿರುವ ವಂದನೀಯ ಗುರು ಡಾ. ಆಲ್ವಿನ್ ಸೆರಾವೊ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಕುಲಪತಿಗಳಾಗಿರುವ ಡಾ. ರೊನಾಲ್ಡ್ ನಜರೆತ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ನೈಜಿಲ್ ಪಿರೇರಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವಿಡ್ ಡಿಸೋಜಾ ಹಾಗೂ ನಿರ್ದೇಶಕರುಗಳಾದ ಹೆರಿ ರೇಗೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಂದನೀಯ ಆಲ್ವಿನ್ ಸೆರಾವೊರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಸನ್ಮಾನ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಅವರ ಹೆತ್ತವರಿಗೂ ಅಭಿನಂದಿಸಿದರು. ಉನ್ನತ ಶಿಕ್ಶಣಕ್ಕೆ ಹೋಗುವ ಸಂರ್ಭದಲ್ಲಿ ಮೂಲ ವಿಜ್ನಾನದ ವಿಶಯಗಳನ್ನು ಯುವಜನಾಂಗವು ಆಯ್ಕೆ ಮಾಡಬೇಕು ಹಾಗೂ ವಿಜ್ನಾನದ ವಿಶಯದಲ್ಲಿ ಘಾಡವಾದ ಅಧ್ಯಯನ ಮಾಡಿ ವಿಜ್ನಾನಿಗಳಾಗಿ ಹೊರಬರಬೇಕು ಎಂದು ತಿಳಿಸಿದರು. ಎಲ್ಲರೂ ಆಯ್ಕೆ ಮಾಡುವ ಸಾಮಾನ್ಯ ಕ್ಶೇತ್ರಗಳನ್ನು ಹೊರತುಪಡಿಸಿ, ಉಳಿದ ಕ್ಶೇತ್ರಗಳಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಕಿವಿ ಮಾತು ನೀಡಿದರು.
ಮುಖ್ಯ ಅತಿಥಿಗಳಾದ ಡಾ. ರೊನಾಲ್ಡ್ ನಜರೆತ್ ರವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡುತ್ತಾ ಶಿಕ್ಷಿತ ಸಮುದಾಯದವರಾದ ನಾವು ಉನ್ನತ ರ್ಜೆಯ ಆಡಳಿತಾತ್ಮಕ ಸರ್ಕಾರಿ ನೌಕರಿಗಾಗಿ ಪ್ರಯತ್ನ ಪಡಬೇಕು ಹಾಗೂ ಯಶಸ್ಸು ಸಿಗುವ ವರೆಗೆ ಪ್ರಯತ್ನ ನಿಲ್ಲಿಸಬಾರದು. ಶಿಕ್ಶಕ ವ್ರತ್ತಿಯನ್ನು ಆಯ್ಕೆ ಮಾಡಿ ಉನ್ನತ ಶಿಕ್ಶಕರಾಗಿ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ನೀಡುವಂತಾಗಬೇಕು ಎಂದು ತಿಳಿಸಿದರು. ಇಂತಹ ಒಂದು ಸುಂದರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭಾನ್ವಿತರನ್ನು ಸನ್ಮಾನಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯನ್ನು ಪ್ರಶಂಸಿಸಿದರು.
ಪುರಸ್ಕçತರಾದ ವಿದ್ಯಾರ್ಥಿಗಳ ಪರವಾಗಿ ಜೆನಿಶಾ ಶೆರಾ ಹಾಗೂ ರೆನಿಟಾ ಡಿಸೋಜ ತಮ್ಮ ಯಶಸ್ಸಿನ ಕತೆಯನ್ನು ಹಂಚಿಕೊಳ್ಳುತ್ತಾ, ಸನ್ಮಾನ ಕಾರ್ಯಕ್ರಮ ಆಯೋಜಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯನ್ನು ವಂದಿಸಿದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾಗಿರುವ ಸಂತೋಶ್ ಡಿಸೋಜ ಹಾಗೂ ಕಥೋಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷರಾಗಿರುವ ರೊನಾಲ್ಡ್ ಅಲ್ಮೇಡಾ ಇವರ ಅನುಪಸ್ಥಿತಿಯಲ್ಲಿ ಇವರಿಗೆ ಧನ್ಯವಾದ ಕೋರಲಾಯಿತು. ಸನ್ಮಾನ ಕರ್ಯಕ್ರಮ ಯಶಸ್ವಿಗೊಳಿಸಲು ಉದಾರ ಮನಸ್ಸಿನ ಧನ ಸಹಾಯ ನೀಡಿದ ಎಲ್ಲಾ ದಾನಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವನಿಶಾ ಸಾಂತುಮಾಯೆರ್ ಹಾಗೂ ಮೆಲಿಶಾ ಕೊರೇಯ ಕಾರ್ಯಕ್ರಮ ನಿರೂಪಿಸಿದರು. ಫುಡಾರ್ ಪ್ರತಿಷ್ಠಾನ್ ಅಧ್ಯಕ್ಶರಾಗಿರುವ ನೈಜಿಲ್ ಪಿರೇರಾ ರವರು ಸ್ವಾಗತ ಕೋರಿದರು. ಕರ್ಯರ್ಶಿ ವಿವಿಡ್ ಡಿಸೋಜರವರು ಧನ್ಯವಾದ ಸರ್ಪಣೆ ಮಾಡಿದರು. ಮಧ್ಯಾಹ್ನದ ಸಹ ಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
288 academic achievers awarded Pratibha Puraskar by Foodar Foundation

Fuddar Prathisttan (R) organized ‘Fuddar Prathisttan Puraskar-2026’ for the toppers and achievers of Mangaluru and Udupi diocese on Sunday, 22 March at Milagres Jubilee Hall Mangaluru.
As many as 288 catholic students excelled in SSLC, PUC, graduates, post graduation and various competitive examinations were felicitated during the programme.
Rev Dr Alwyn Serrao, Principal of Milagres PU College inaugurated the programme by lighting the lamp. Nigel Pereira, president of Fuddar Prathisttan presided over the programme. Chief Guest and keynote speaker, Dr Ronald Nazareth, Registrar, St Aloysius, deemed to be University, Secretary Vivid DSouza and the management committee member Harry Rego were present.
Rev Dr Alwyn Serrao in his inaugural address congratulated all the awardees and their parents on receiving the recognition. He spoke about the importance of learning basic sciences, aiming to be at the Scientist grade positions and to take the road less taken. He urged the students to stay in the country and stay connected with their families, live a value based life and serve the society in all possible ways.
Dr Ronald Nazareth, in his keynote address, congratulated Fuddar Prathistan Trust for organizing a beautiful programme to felicitate the achievers and for motivating them. In his keynote address he emphasized on the need of choosing teaching as a profession and to become the teachers of good values to be passed on to the generation of students. He encouraged the students to try answering various competitive examinations and try for the highest order administrative posts in India.
On behalf of the felicitated students Jenisha Shera and Renita DSouza shared their success story and expressed their gratitude to the organizers of the felicitation programme.
Vivid DSouza, the secretary rendered the vote of thanks. The management committee members and donors who supported generously for the success of the event were honored. The support and suggestions of Catholic Sabha Mangalore Pradesh president Santhosh DSouza and Catholic Sabha Udupi Pradesh president Ronald Dalmeida were greatly acknowledged. Vanisha Santhmayor and Melisha Correa compered the event. The programme concluded with a sumptuous lunch.



















