

ಹಂಗಾರಕಟ್ಟೆ ; ವೃತ್ತಿ ಕೌಶಲ್ಯವು ಪಾರಂಪರಿಕ ವೃತ್ತಿಗಳಾದ ಕಮ್ಮಾರಿಕೆ, ಚಮ್ಮಾರಿಕೆ ನೇಕಾರಿಕಾ ಕುಂಬಾರಿಕೆ ಹಾಗೂ ಕ್ಷೌರಿಕ ಎಂಬ ಐದು ಪ್ರಧಾನ ಪ್ರಭೇದಗಳಿದ್ದು, ಅತ್ಯಂತ ಪ್ರಾಚೀನ ಕಸುಬುದಾರರು ಎಂದು ಗುರುತಿಸಲಾಗಿದ್ದು, ಅವರು ಅತ್ಯಂತ ನೈಪುಣ್ಯ ಪಡೆದವರಾಗಿದ್ದು, ತುಂಬಾ ಜನಪ್ರಿಯರಾಗಿದ್ದರು. ಆದರೆ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಈ ಹಸ್ತ ಕುಶಲಗಾರರು ನಿರ್ಮಿಸಿದ ಅನೇಕ ಕಲಾಕೃತಿಗಳು ನಿರ್ಲಕ್ಷö್ಯಕ್ಕೊಳಪಟ್ಟು ಅವಸಾನದ ಅಂಚಿನಲ್ಲಿದ್ದು, ಅದನ್ನು ಪ್ರಜಾ ಸತ್ತಾತ್ಮಕ ನೆಲೆಯಾದ ಈ ಎಲ್ಲಾ ವೃತ್ತಿ ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ತುಂಬಾ ಅಗತ್ಯವಾಗಿದೆ ಎಂದು ಕೆ. ಆರ್ ನಾÊಕ್ ಸೂಪರ್ಗ್ರೇಡ್ ಇಲೆಕ್ಟಿçಕಲ್ ಕಂಟ್ರಾಕ್ಟರ್ ಹಾಗೂ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಕುಂದಾಪುರ ಇವರು ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಇದರ 16ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಮಾಹಿತಿ ಶಿಬಿರ 2026 ಉದ್ಘಾಟಿಸಿ ಕಲಾಕುಸುಮ ಪ್ರಶಸ್ತಿ ಪ್ರಧಾನ ಮಾಡಿ ಯಾವುದೇ ವೃತ್ತಿ ಅದು ಉಚ್ಚಾ-ಹೀನ ಎಂದು ಪರಿಗಣಿಸಬಾರದು ಎಲ್ಲಾ ವೃತ್ತಿಗಳು ಒಂದಕ್ಕೊಂದು ಪೂರಕವಾಗಿದ್ದು, ಅದು ಜೀವನಾಡಿಯ ಪ್ರತೀಕವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಲಾಕುಸುಮ ಪ್ರಶಸ್ತಿ ವಿಜೇತರಾದ ಬಾಲಕೃಷ್ಣ ಶೆಟ್ಟಿ ಶಿರೂರು ಮೂರ್ಕೈ ಇವರು ಮಾತನಾಡಿ ಇದು ಅತ್ಯಂತ ಸೋಜಿಗವಾದ ವಿಚಾರ ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂದು ಪ್ರತಿಪಾದಿಸಿ ವಿದ್ಯಾರ್ಥಿ ದೆಸೆಯಿಂದಲೇ ವೃತ್ತಿ ಗೌರವ ನಮ್ಮ ದಕ್ಷತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಯಾವುದೇ ಪ್ರವೃತ್ತಿ ನಮ್ಮ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ. ಅದಕ್ಕೆ ನಾನೇ ಸಾಕ್ಷಿ. ಓರ್ವ ಹವ್ಯಾಸಿ ಯಕ್ಷಗಾನ ಕಲಾವಿದನಾದ ನಾನು ಪ್ರವೃತ್ತಿಯಿಂದ ಈ ಎತ್ತರಕ್ಕೆ ಬೆಳೆದು ಬಂದಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳು ಆರಂಭದಿAದಲೇ ಯಾವುದಾದರೊಂದು ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಭಾಧ್ಯಕ್ಷತೆಯನ್ನು ನಿತ್ಯಾನಂದ ನಾಯಕ್ ನರಸಿಂಗೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಪರ್ಕಳ ಇವರು ನಿರ್ವಹಿಸಿ ನಮ್ಮ ನಡೆ-ನುಡಿ ಆಚಾರ ವಿಚಾರ ಮಾತು ನಡವಳಿಕೆಯೇ ವ್ಯಕ್ತಿತ್ವ ಎಂದರು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ನಮ್ಮ ಕಾರ್ಯದಕ್ಷತೆಯಲ್ಲಿಯೇ ಅದು ಲೀನವಾಗಿರುತ್ತದೆ. ನಾವು ಯಾವುದೇ ವೃತ್ತಿ ಆರಿಸಿದರೂ ಅದು ಸಮುದಾಯದ ಭಾಗವಾಗಿಯೇ ಇರಬೇಕೆಂದು ಪ್ರತಿಪಾದಿಸಿ ಅದರಿಂದ ದೂರ ಉಳಿಯಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಮಾರಾಳಿ ಪ್ರಭಾಕರ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದರು ಮಾತನಾಡಿ ನಮ್ಮ ಭವಿಷ್ಯದ ನಿರ್ಮಾತ್ರರು ನಾವೇ ಆಗಿದ್ದು, ಅದನ್ನು ಬೇರೆಯವರ ತಲೆಗೆ ಹೊರಿಸಬಾರದು ನಾವು ಮಾಡುವ ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ ದಕ್ಷತೆ ಮತ್ತು ಜವಾಬ್ದಾರಿತನವೇ ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತದೆ ಎಂದರು.
ಸAಪನ್ಮೂಲ ವ್ಯಕ್ತಿ ಆದರ್ಶ ಕೆಲ ತರಬೇತಿದಾರರು ಹಾಗೂ ಸಂಸ್ಥಾಪಕರು ಸ್ಪರ್ಧಾ ಸಾರಥಿ ಕೆ.ಎ.ಎಸ್. ಅಕಾಡೆಮಿ ಕುಂದಾಪುರ ಇವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ನಮಗೆ ಸ್ಪಷ್ಟ ಗುರಿಯೊಂದಿರಬೇಕು. ಅದನ್ನು ನಾವು ಹಂತ ಹಂತವಾಗಿ ಗಳಿಸುತ್ತಾ ಉದ್ಯೋಗದಲ್ಲಿ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂದು ಕರೆ ನೀಡಿದರು.
ಸಭೆಯಲ್ಲಿ ತಾರಾನಾಥ್ ಶೆಟ್ಟಿ, ಅಧ್ಯಕ್ಷರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್, ಮಾಬುಕಳ, ಶ್ರೀಮತಿ ವಿದ್ಯಾ, ಹಿರಿಯ ಉಪನ್ಯಾಸಕಿ ಆಶ್ರಿತಾ ಕಾಲೇಜ್ ಆಫ್ ನರ್ಸಿಂಗ್, ಕೋಟ, ರವಿ ಕುಮಾರ್, ಅಧ್ಯಕ್ಷರು ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ದಿವ್ಯ ಉಡುಪಿ ನಿರೂಪಿಸಿ, ಸುಧಾ ಭಟ್ ಅಮಾಸೆಬೈಲು ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿ, ಅನೀಶಾ ಬಾಯರಿ ಪೇತ್ರಿ ವಂದಿಸಿದರು. ಸುಮಾರು 285 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.

