

ಸಂವಿಧಾನದ ಆಶಯದಂತೆ ಪಂಚ ಗ್ಯಾರಂಟಿಗಳು ರಾಜ್ಯದ ಮಹಿಳೆಯರನ್ನು ಸಬಲೀಕರಣ ಗೊಳಿಸಲು ಸಾಧ್ಯವಾಯಿತು ಎಂದು ನಾಯಕರು, ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಕೆದೂರು ಸದಾನಂದ ಶೆಟ್ಟಿ, ಮಹಿಳಾ ದಿನಾಚರಣೆಯ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಇಂದು ,ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮೂರು ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಹೆಬ್ಬಾರ್, ನಾಯಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, , ಬೇಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಹಾಜರಿದ್ದು ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ಡಾ. ಮಾಯ ಉಪಾಧ್ಯಾಯ, ಶ್ರೀಮತಿ ಪ್ರಭಾವತಿ ಶೆಟ್ಟಿ ಬೇಳೂರು ಹಾಗೂ ಡಾ. ಪ್ರಮೀಳಾ ನಾಯಕ್ ಇವರ ಸಾಧನೆಯನ್ನು ಗುರುತಿಸಿ ಇವರನ್ನು ಸನ್ಮಾನಿಸಲಾಯಿತು.ಡಾ ಮಾಯಾ ಉಪಾಧ್ಯಾಯ ಅವರ ಪರಿಚಯವನ್ನು ಶ್ರೀಮತಿ ಜ್ಯೋತಿ ಡಿ ನಾಯಕ್, ಶ್ರೀಮತಿ ಪ್ರಭಾವತಿ ಶೆಟ್ಟಿ ಅವರ ಪರಿಚಯವನ್ನು ಶ್ರೀಮತಿ ರೇವತಿ ಶೆಟ್ಟಿ ಹಾಗೂ ಡಾಕ್ಟರ್ ಪ್ರಮೀಳಾ ನಾಯಕ್ ಅವರ ಪರಿಚಯವನ್ನು ಶ್ರೀಮತಿ ಸುಮನಾ ಬಿದ್ಕಲ್ ಕಟ್ಟೆ ಮಾಡಿದರು. ಡಾ. ಮಾಯಾ ಹಾಗೂ ಶ್ರೀಮತಿ ಪ್ರಭಾವತಿ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಡಾ. ಪ್ರಮೀಳಾ ನಾಯಕ್ ಅವರು ಮಹಿಳೆಯರು ತಮ್ಮ ಆರೋಗ್ಯವನ್ನು ಉತ್ತಮ ಜೀವನಶೈಲಿಯ ಮೂಲಕ ಹೇಗೆ ಸುಧಾರಣೆ ಮಾಡಬಹುದು ಅನ್ನುವ ವಿಚಾರದಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಿದರು.
ಈ ಸಭೆಯಲ್ಲಿ ಜ್ಯೋತಿ ಪುತ್ರನ್, ಟಿ. ಶೋಬಾನ ತೆಕ್ಕಟ್ಟೆ, ಮಮತಾ ತೆಕ್ಕಟ್ಟೆ, ವೇಲಾ ಬ್ರಗಾಂಜ, ಬಿ ಸೂರ್ಯಕಾಂತಿ, ಸವಿತಾ ಆನಗಳ್ಳಿ, ಜಾನಕಿ ಬಿಲ್ಲವ,ಯಶೋಧ, ಮೈಮುನ, ಲೀಲಾ, ಮುತ್ತು, ಮೇಬೆಲ್ ಡಿಸೋಜಾ, ಚಂದ್ರಾವತಿ, ಆಶಾ ನಾಗರಾಜ್, ಸಾವಿತ್ರಿ ಎಚ್, ಮೂಕಾಂಬಿಕಾ, ಸೀಮಾ ಪಿ, ಲೀಲಾವತಿ ಟಿ ಶೆಟ್ಟಿ, ಶೋಭ ಮಾಣಿ, ಸುವರ್ಣ , ಸುಶೀಲ ಮಾಣಿ ಮನೆ, ವೀಣಾ ಎನ್ ರಾವ್, ಸುಗುಣ ಹಂಗಳೂರು ಹಾಗೂ ರಾಧಾ ಉಪಸ್ಥಿತರಿದ್ದರು.
ಮಹಿಳಾ ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ದೇವಕಿ ಸಣ್ಣಯ್ಯ ಸ್ವಾಗತಿಸಿ, ಶ್ರೀಮತಿ ವಾಣಿ ಆರ್ ಶೆಟ್ಟಿ ವಂದಿಸಿದರು. ಶ್ರೀಮತಿ ಆಶಾ ಕರ್ವಾಲ್ಲೊ ಕಾರ್ಯಕ್ರಮವನ್ನು ನಿರೂಪಿಸಿದರು.









