

ಕುಂದಾಪುರ; ಮಾ.11; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸುಪ್ರಸಿದ್ದ ಪ್ರಾರ್ಥನಕೂಟಗಾರ ಪ್ರವಚನಗಾರ, ಧರ್ಮೋಪದೇಶಕ ವಂ।ಫ್ರಾಂಕ್ಲಿನ್ ಡಿಸೋಜಾ ಪಂಗಡದಿಂದ ನಡೆಯುತ್ತೀರುವ ಧ್ಯಾನಕೂಟದ (ಮಾ.10) ಎರಡನೇ ದಿನವು ಯಶಸ್ವಿಯಾಗಿ ನಡೆಯಿತು.
“ಈ ಜನ್ಮವು ನಮಗೆ ದೇವರು ಕೊಟ್ಟಿದ್ದು, ದೇವರು ನಮ್ಮನ್ನು ಅವನ ಅತ್ಯಂತ ಪ್ರೀತಿಯಿಂದ ಖರೀದಿಸಿದ್ದಾನೆ, ಹಾಗಾಗಿ ನಮ್ಮ ಜೀವನ ದೇವರಿಗಾಗಿ ಮುಡುಪಿಡಬೇಕು. ಉತ್ತಮ ಜೀವನ ಜೀವಿಸಿ, ಸತ್ತು ನಾವು ದೇವರ ಕಡೆಗೆ ಮರಳಬೇಕು, ನಮ್ಮ ಪೂರ್ವಜರೆಲ್ಲರು ಹಾಗೇ ಸತ್ತು ತೆರಳಿದರು. ಈ ಧ್ಯಾನಕೂಟದಿಂದ ನಾವು ಪಶ್ಚಾತಾಪ ಪಟ್ಟು, ಹಿಂತಿರುಗಬೇಕು, ರೆಟ್ರೀಟ್ ಅಂದರೆ, ಈ ಹಿಂದೆ ನಾನು, ನನ್ನ ಜೀವನವನ್ನು ಹೇಗೆ ಜೀವಿಸಿದ್ದೇನೆ ಎಂದು ಅವಲೋಕನ ಮಾಡಿಕೊಳ್ಳುವುದು, ನಾವು ಕ್ರಮಿಸಿದ ಜೀವನವನ್ನು ಹಿಂತಿರುಗಿ ನೋಡುವುದು’’ ವಂ।ಫ್ರಾಂಕ್ಲಿನ್ ತಿಳಿಸಿದರು.
ಅವರು ಮುಂದುವರೆಸುತ್ತಾ “ನಾವು ಎಲ್ಲರಿಗೂ ಕ್ಷಮಿಸೋಣ, ಯಾರು ಇತರರನ್ನು ಕ್ಷಮಿಸುದಿಲ್ಲವೋ ದೇವರು ಆತನನ್ನು ಕ್ಷಮಿಸುವುದಿಲ್ಲ. ದೇವರು ಯಾರನ್ನು ಪಾಪರಹಿತರಾಗಿ ಸಾಯುವುದನ್ನು ಇಷ್ಟ ಪಡುವುದಿಲ್ಲ, ಮನುಷ್ಯನೊಬ್ಬ ಪರಿವರ್ತನೆಯಾದರೆ, ಸ್ವರ್ಗರಾಜ್ಯದಲ್ಲಿ ಸಂತೋಷ ಪಡುತ್ತಾರಂತೆ. ನಾವು ದೇವರ ಸ್ವರ್ಗರಾಜ್ಯಕ್ಕೆ ಭಾಧ್ಯರಾಗಬೇಕು, ಸೈತಾನನ ಬಣ್ಣಬಣ್ಣದ ಮೋಡಿಗೆ ಒಳಗಾಗಬಾರದು. ದೇವರ ಜಲದಿಂದ ಕೂಡಿದ ಸ್ಥಳವನ್ನು ಬಿಟ್ಟು, ನೀವು ನೀರನ್ನು ಬತ್ತಿಡಲಾಗದ ಬಾವಿಗಳನ್ನು ಕೊರೆಯಬೇಡಿ, ಇದರ ತಾತ್ಪರ್ಯ ವಿವರಿಸುತ್ತಾ, ನೀಜ ದೇವರನ್ನು ಬಿಟ್ಟು, ಮಾಟ ಮಂತ್ರ, ವ್ಯಾಮಚಾರ, ಮೂಢನಂಬಿಕೆಗಳಿಗೆ ಮೋಸ ಹೋಗಬೇಡಿ. ಈ ಪ್ರಕ್ರತಿ, ದಿನಗಳು ದೇವರು ರಚಿಸಿದ್ದರಿಂದ ಎಲ್ಲವೂ ಶುಭವಾಗಿದೆ, ಅಶುಭ ದಿನವೆಂದು ಯಾವ ದಿನಗಳನ್ನು ಪರಿಗಣಿಸಬೇಡಿ, ದಿಕ್ಕುಗಳನ್ನು ಕೂಡ ದೇವರು ರಚಿಸಿದ್ದು ಅದಕ್ಕೆ ವಾಸ್ತು ಸರಿ ಇಲ್ಲವೆಂದು ಹೇಳಿದರೆ ನಂಬಬೇಡಿ” ಈ ರೀತಿಯ ಉತ್ತಮ ಧರ್ಮೋಪದೇಶ ನೀಡಿದರು.
ಪರಮ ಪ್ರಸಾದದ ಆರಾದನೆಯನ್ನು ನಡೆಸಿಕೊಟ್ಟುಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಎಲ್ಲರ ತಲೆಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ನಡೆಸಿ ಪವಿತ್ರ ಜಲದಿಂದ ಪ್ರೋಕ್ಷಣೆ ಮಾಡಾಲಾಯಿತು. ಪವಿತ್ರ ಬಲಿದಾನ ಅರ್ಪಿಸುವ ಮೂಲಕ ಮೊದಲ ದಿನದ ಧ್ಯಾನಕೂಟ ಸಂಪನ್ನವಾಯಿತು. ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಬಲಿದಾನದಲ್ಲಿ ಭಾಗಿಯಾಗಿ ಧ್ಯಾನ ಕೂಟಕ್ಕೆ ಸಹಕರಿಸಿದರು. ಸಹೋದರ ವಿಲಿಯಮ್ ಡಿ’ಸೋಜಾ ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ ಧ್ಯಾನ ಕೂಟದ ಯಶಸ್ವಿಗೆ ಸಹಕರಿಸಿದರು.
























