

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು 2025ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು ರ್ಯಾಂಕ್ ಗಳು ದೊರಕಿವೆ.
ಬಿ.ಬಿ.ಎ ಪದವಿ ವಿಭಾಗದಲ್ಲಿ ಕೋಟೇಶ್ವರದ ಸೂರ್ಯನಾರಾಯಣ ಅಡಿಗ ಅವರ ಪುತ್ರಿ ಶ್ರಾವ್ಯ ಎಸ್.ಅಡಿಗ ಅವರಿಗೆ ಆರನೇ ರ್ಯಾಂಕ್ ದೊರೆತಿದೆ.
ಬಿ.ಸಿ.ಎ. ವಿಭಾಗದಲ್ಲಿ ಮರವಂತೆಯ ಮೋಹನದಾಸ ಶೆಣೈ ಅವರ ಪುತ್ರಿ ಶ್ರಾವ್ಯ ಶೆಣೈ ಅವರಿಗೆ ಎಂಟನೇ ರ್ಯಾಂಕ್ ಮತ್ತು ತೆಕ್ಕಟ್ಟೆಯ ರಾಘು ಅವರು ಪುತ್ರಿ ರಕ್ಷಿತಾ ಅವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರಾವ್ಯ ಎಸ್.ಅಡಿಗ

ಶ್ರಾವ್ಯ ಶೆಣೈ

ರಕ್ಷಿತಾ

