

ಕುಂದಾಪುರ, ಫೆ.18; ಕ್ರೈಸ್ತರ ಬೋವು ಪ್ರಮುಖ ಪವಿತ್ರ ಹಬ್ಬವಾದ ಪಾಸ್ಕ ಹಬ್ಬಕ್ಕೆ ತಯಾರಿಯಾಗಿ ಮನುಷ್ಯನ ಪರಿವರ್ತನೆಗೆ ಜಗತ್ತಿನೆಲ್ಲಡೆ ಆಚರಿಸಲ್ಪಡುವ ಪವಿತ್ರ ಬೂದಿ ಬುಧವಾರವನ್ನು, ಹಿರಿಯ, ಚಾರಿತ್ರಿಕ ಹಿನ್ನೆಲೆಯುಳ್ಳ ಕುಂದಾಪುರದ ರೋಜರಿ ಮಾತಾ ಚರ್ಚಿನಲ್ಲಿ ಆಚರಿಸಲಾಯಿತು.
ಈ ಸಲುವಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿದ ಕುಂದಾಪುರದವರೇ ಆದ ಪ್ರಸ್ತೂತ ಇಟೆಲಿಯಲ್ಲಿ ಉನ್ನತ ವ್ಯಾಸಂಗ ಹಾಗೂ ಪಿ ಎಚ್ ಡಿ ಪದವಿ ಅಭ್ಯಾಸದಲಿರುವ ವಂ।ಮನೋಜ್ ಬ್ರಗಾಂಜಾ “ಬೂದಿ ಬುದವಾರ, ಅಂದರೆ ಪಾಸ್ಕ ಹಬ್ಬಕ್ಕೆ ನಾವು ತಯಾರಿಯಾಗಿ, ಪ್ರಾಯಚಿತ್ತ ಮಾಡಿ ಪರಿವರ್ತನೆ ಹೊಂದುವ ಕಾಲ. ಅದಕ್ಕೆ ಇಂಗ್ಲಿಷ್ ನಲ್ಲಿ ಲೆಂಟ್ ಅನ್ನುತಾರೆ. ಮೊದಲ ಅಕ್ಷರ “ಎಲ್” ಅಂದರೆ, ನಾವು ಕ್ರೋಧ, ಮತ್ಸರ, ಕೆಟ್ಟದನ್ನು ಬಿಟ್ಟುಬೀಡಬೇಕು. “ಇ” ಅಂದರೆ, ನಾವು ಪ್ರಾರ್ಥನೆಡೆ ನಡೆಯೋಣ, ನಾವೆಲ್ಲರೂ ಉಚ್ಚರಿಸಿ ಪ್ರಾರ್ಥೈಸುತ್ತೇವೆ ಅದು ಸಾಮಾನ್ಯ, ಆದರೆ ಪರಿವರ್ತನೆ ಕಾಲದಲ್ಲಿ, ನಾನು ದೇವರ ಸನ್ನಿಧಿಯಲ್ಲಿದ್ದೇನೆ ಎಂಬ ವಾತವರಣ ಕಲ್ಪಿಸಿಕೊಂಡು ದೇವರನ್ನು ನೆನೆದು ಮೌನವಾಗಿ ಪ್ರಾರ್ಥಿಸುವುದು. “ಎನ್” ಅಂದರೆ ನಮ್ಮ ಸುತ್ತಲಿರುವರ ಕಶ್ಟ ನಶ್ಟ ಭವಣೆ, ದುಖ ಸಮಸ್ಯೆಗಳನ್ನು ಗಮನಿಸುವುದು ಮತ್ತು ಅವರ ಅಗತ್ಯಕ್ಕೆ ತಲುಪುವುದು, “ಟಿ” ಅಂದರೆ ಹಿಂತಿರುಗುವುದು, ಪರಿವರ್ತನೆಯಾಗುವುದು, ನಮ್ಮ ಹಿಂದಿನ ಕೆಟ್ಟ ಜೀವನದಿಂದ ಹಿಂದೆ ಸರಿದು ಒಳ್ಳೆಯ ಜೀವನ ನಡೆಸುವುದು. ಪ್ರಾಯಚಿತ್ತ ಪರಿವರ್ತನೆಯ ಕಾಲ ಅಂದರೆ ಕಶ್ಟ, ಹಿಂಸೆಯ ದಿನಗಳು ಎಂದು ಭಾವಿಸಬಾರದು, ಇದು ಭರವಸೆಯ ಕಾಲ ಆಗಿದೆ” ಎಂದು ಸ್ಪಷ್ಟ ಪಡಿಸಿದರು.
ಪರಿವರ್ತನೆಯ ಸೂಚಕವಾಗಿ ಭಕ್ತಾಧಿಗಳ ಹಣೆಗೆ ಬೂದಿಯನ್ನು ಹಚ್ಚಲಾಯಿತು. ಧರ್ಮಕೇಂದ್ರದ ಧರ್ಮಗುರು ಅ।ವಂ।ಪೌಲ್ ರೇಗೊ ಬಲಿದಾನದಲ್ಲಿ ಸಹಕರಿಸಿ, ಪರಿವರ್ತನೆಯ ಕಾಲದಲ್ಲಿ ಅನುಸರಿಸಬೇಕಾದ ಮಾರ್ಗ ಸೂಚಿಗಳನ್ನು ನೀಡಿದರು.











