

ಶ್ರೀನಿವಾಸಪುರ : ಯಾವ ಮಕ್ಕಳು ಆನಾರೋಗ್ಯದಿಂದ ಇರುತ್ತಾರೋ ಅವರನ್ನ ಮಾತ್ರೆ ತೆಗೆದುಕೊಳ್ಳುವಂತೆ ಬಲವಂತ ಮಾಡಬೇಡಿ ಎಂದು ಟಿಎಚ್ಒ ಮಹ್ಮದ್ ಷರೀಪ್ ಮಾಹಿತಿ ನೀಡಿದರು.
ಪಟ್ಟಣದ ಚಿಂತಾಮಣಿ ರಸ್ತೆ ಉರ್ದು ಶಾಲೆಯ ಆವರಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ನಮ್ಮ ಕ್ಲೀನಿಕ್ ವತಿಯಿಂದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತಹ ಮಕ್ಕಳಿಗೆ ಅರೋಗ್ಯವಂತರಾದ ಮೇಲೆ ವೈದ್ಯರ ಸಲಹೆಯನ್ನ ಪಡೆದು ಮಾತ್ರೆಯನ್ನು ಕೊಡುವಂತೆ ತಿಳಿಸಿದರು. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದಾಗಿ ಸದಾ ಬಳಲಿದಂತಿರುತ್ತಾರೆ ಅಲ್ಲದೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಬಲ್ಲದು ಈ ಹಿನ್ನೆಲೆಯಲ್ಲಿ 1 ರಿಂದ 19 ವರ್ಷದ ವರಗಿನ ಎಲ್ಲರಿಗೂ ಶಾಲಾ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಜಂತುಹುಳ ನಿವಾರಣೆ ಮಾಡಲು ಉಚಿತವಾಗಿ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದರು. ರೋಗವನ್ನು ನಿರ್ಲಕ್ಷಿಸದೆ ಸಮೀಪದ ವೈದ್ಯರನ್ನ ಸಂರ್ಪಕಿಸಿವAತೆ ಸಲಹೆ ನೀಡಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಆಂಜಲಮ್ಮ ಮಾತನಾಡಿ ಮಕ್ಕಳಿನ ದೈಹಿಕ, ಮಾನಸಿಕ ಬೆಳವಣಿಗೆ, ಅಪೌಷ್ಟಿಕತೆಯನ್ನ ಹೋಗಲಾಡಿಸಲು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರತಿ 6 ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗುವುದು . ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿದಾಗ ಮಾತ್ರ ರೋಗವನ್ನು ತಡೆಗಟ್ಟಬಹುದು ಎಂದರು.
ನಮ್ಮ ಕ್ಲೀನಿಕ್ ವೈದ್ಯರಾದ ನರೇಂದ್ರ, ಸಿಬ್ಬಂದಿಗಳಾದ ರಾಜೇಶ್, ಗೌತಮಿ, ನೇತ್ರ, ಸಂತೋಷ್, ಲಕ್ಷ್ಮಿ, ಕೃಪಾ, ನಾಗವೇಣಿ, ಶಾಲೆಯ ಮುಖ್ಯ ಶಿಕ್ಷಕ ಶಿವಾರೆಡ್ಡಿ ಇದ್ದರು.

