

ದಿನಾಂಕ 07-02-2026ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಐ.ಸಿ.ವೈ.ಎಂ. ಚರ್ಚಿನಲ್ಲಿ ಪೋಷಕರಾದ ಸಂತ ಗೊನ್ಜಾಲೊ ಗರ್ಸಿಯವರ ದಿನವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಸಂಜೆ ಚರ್ಚಿನ ಧರ್ಮಗುರುಗಳಾದ ವಂ। ಫಾ. ಎಡ್ವಿನ್ ಡಿಸೋಜಾ ರವರು ಯುವಜನರಿಗಾಗಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಐ.ಸಿ.ವೈ.ಎಂ ಸದಸ್ಯರು ಪ್ರಾರ್ಥನಾ ವಿಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಲಿ ಪೂಜೆಯ ನಂತರ ಯುವಜನರಿಗಾಗಿ ಧರ್ಮಗುರುಗಳು ವಿಶೇಷ ಪ್ರಾಥನೆಯನ್ನು ಸಲ್ಲಿಸಿದರು.
ನಂತರ ಚರ್ಚಿನ ಸಭಾಭವನದಲ್ಲಿ ಯುವಜನರಿಗಾಗಿ ಸ್ನೇಹಕೂಟವನ್ನು ಎರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಯರಾಣಿ ಕಾನ್ವೆಂಟಿನ ಧರ್ಮಭಗಿನಿಯರು ಹಾಜರಿದ್ದು, ಯುವಜನರಿಗಾಗಿ ವಿವಿಧ ಆಟಗಳು ಹಾಗೂ ಚಟುವಟಿಕೆಗಳನ್ನು ಆಯೋಜಿಸಿದ್ದರು.
ಧರ್ಮಗುರುಗಳು ಯುವಜನರನ್ನು ಉದ್ದೇಶಿಸಿ ಉದಾರ ಮನಸ್ಸಿನ ಮಹತ್ವದ ಬಗ್ಗೆ ಸಂದೇಶ ನೀಡಿದರು. ತಪ್ಪುಗಳನ್ನು ಮಾಡಿದಾಗ ಅವನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಪ್ರಯತ್ನಿಸಬೇಕು. ಅಷ್ಟೇ ಮಾಡಿದರೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ತಮ್ಮ ಉದ್ಯೋಗ ಮತ್ತು ಜೀವನದಲ್ಲಿ ಮುನ್ನಡೆ ಸಾಧಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮವು ಸಹಭೋಜನದೊಂದಿಗೆ ಸಮಾಪ್ತಿಯಾಯಿತು. ಈ ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಆಯೋಗಗಳ ಸಂಯೋಜಕರು ಹಾಗೂ ಐ.ಸಿ.ವೈ.ಎಂ. ಸಂಚಾಲಕರಾದ ಜಾನ್ಸನ್ ಮಿನೇಜಸ್ ಹಾಜರಿದ್ದರು. ಹಲವಾರು ಯುವಜನರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.


































