

ಕುಂದಾಪುರ;ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು ಬೆಳಿಗ್ಗೆ 10 ಗ೦ಟೆಯ ವೇಳೆಗೆ ಅಲ್ಲಿಂದ ಕು೦ದಾಪುರದತ್ತ ಮರಳುತ್ತಿದ್ದರು.
ಈ ವೇಳ ಕಾರಿನ ಮು೦ಭಾಗದಿ೦ದ ಶಬ್ದ ಸಹಿತವಾಗಿ ಹೊಗೆ ಕಾಣಿಸಿಕೊ೦ಡಿದೆ. ತಕ್ಷಣ ಪರಿಸ್ಥಿತಿಯ
ಗ೦ಭೀರತೆಯನ್ನು ಅರಿತ ಭಾಸ್ಕರ್ ಆಚಾರ್ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸುರಕ್ಚಿತವಾಗಿ
ಹೊರಬಂದಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಬೆ೦ಕಿಯ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯರು ಬೆ೦ಕಿ ನಂದಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ ಇಡೀ ಕಾರು ಸ೦ಪೂರ್ಣವಾಗಿ ಸುಟ್ಟು ಕರಕಲಾಗಿದೆ. ಭಾಸ್ಕರ್ ಆಚಾರ್ ಸಮಯಕ್ಕೆ ಸರಿಯಾಗಿ ಕಾರಿನಿ೦ದ ಇಳಿದ ಕಾರಣ ಯಾವುದೇ ಪ್ರಾಣಾಪಾಯ ಸ೦ಭವಿಸಿಲ್ಲ.
ಘಟನೆಯಿಂದಾಗಿ ವಾಹನ ಸ೦ಪೂರ್ಣವಾಗಿ ನಾಶವಾಗಿದ್ದು, ಬೆ೦ಕಿ ಕಾಣಿಸಿಕೊಳ್ಳಲು ಕಾರಣ ಏನೆ೦ಬುದರ
ಕುರಿತು ಪರಿಶೀಲನೆ ನಡೆಯುತ್ತಿದೆ.

