

ಶ್ರೀನಿವಾಸಪುರ : ನಮಗೆ ಸ್ವಾತಂತ್ರ್ಯ ಬಂದ ಮೇಲೆ ಜಾತಿಪದ್ದತಿ ಹೋಗತ್ತದೆ ಎಲ್ಲರೂ ಸರ್ವ ಸಮಾನವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ಅಂದುಕೊಳ್ಳುತ್ತಿದ್ದರು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ರಾಷ್ಟಿಯ ಹಬ್ಬಗಳ ಸಮಿತಿ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದರೆ ಇಂದಿನ ವ್ಯವಸ್ಥೆಯು ಗ್ರಾಮಪಂಚಾಯಿತಿ ಚುನವಾಣೆಯಿಂದ ಪ್ರಾರಂಭವಾಗಿ ಎಲ್ಲಾ ಚುನಾವಣೆಗಳಲ್ಲಿಯು ಸಹ ಸಮುದಾಯದ ಮೇಲೆ ಆಧಾರವಾಗಿ ಇಟ್ಟುಕೊಂಡು ಚುನಾವಣೆ ನಡೆಯುತ್ತಿರುವುದು ಒಂದು ದುರದೃಷ್ಟಕರವಾಗಿ ಪರಿಣಿಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣನವರ ಹಾದಿಯಲ್ಲಿ ನಡೆದ ಅಂಬಿಗರ ಚೌಡಯ್ಯರವರು ಅನೇಕ ವಚನಗಳನ್ನು ರಚಿಸಿ, ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದರು. ಕಾಯಕವೇ ಕೈಲಾಸ ಎಂಬAತೆ ತಮ್ಮ ಜೀವನವನ್ನು ತಮ್ಮ ಕೆಲಸ ಕಾರ್ಯಗಳ ಮೂಲಕ ಕಾರ್ಯನಿರ್ವಹಿಸುತ್ತಾ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡುAಕುಗಳನ್ನು ಸರಿಪಡಿಸುತ್ತಿದ್ದ ಮಾಹಾನ್ ಚೇತನ ಅವರ ಜೀವನದ ಆದರ್ಶಗಳನ್ನು ತಮ್ಮ ಜೀವನಕ್ಕೆ ಆಳವಡಿಸಿಕೊಳ್ಳಬೇಕು ಎಂದರು.
ಬೆಸ್ತ ಸಮುದಾಯದ ತಾಲೂಕು ಅಧ್ಯಕ್ಷ ಕೋಟೇಶ್ ಮಾತನಾಡಿ ಸಮುದಾಯದ ವಿದ್ಯಾರ್ಥಿಗಳನ್ನ ಸಮುದಾಯ ಒಗ್ಗೂಡಿಸಿಕೊಂಡು ಉನ್ನತ ವ್ಯಾಂಸಗ ಮಾಡಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವAತೆ ಪ್ರೇರಿಪಿಸಬೇಕೆಂದು ಸಮುದಾಯ ಮುಖಂಡರಿಗೆ ಸಲಹೆ ನೀಡುತ್ತಾ, ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮುದಾಯದ ಮುಖಂಡರು ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರ ಮಾರ್ಗದರ್ಶನ ಸಹಕಾರ ಪಡೆದು ಅಂಬಿಗರ ಚೌಡಯ್ಯ ರವರ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡೋಣವೆಂದು ನುಡಿದರು.
ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ, ಬಿಐಆರ್ಟಿ ಜಿ.ವಿ.ಚಂದ್ರಪ್ಪ, ಬಿಸಿಎಂ ಇಲಾಖೆ ಅಧಿಕಾರಿ ಪ್ರಸನ್ನ, ಪುರಸಭೆ ಕಂದಾಯ ಅಧಿಕಾರಿ ಎನ್.ಶಂಕರ್, ಪರಿಸರ ಅಬಯಂತರರು ಲಕ್ಷಿö್ಮÃಶ, ಸಮುದಾಯದ ಮುಖಂಡರಾದ ಆಂಜನೇಯಪ್ಪ, ಎಸ್.ಎನ್.ಸತ್ಯನಾರಾಣ, ಕಾರ್ವೆಂಕಟರಮಣಪ್ಪ, ಮುತ್ತಕಪಲ್ಲಿ ಸತೀಶ್, ಮಂಚನೀಳ್ಳಕೋಟೆ ರೆಡ್ಡಪ್ಪ, ವೆಂಕಟೇಶ್, ನಾಗೇಶ್, ಅಂಗಡಿ ಸತ್ಯಣ್ಣ, ಶ್ರೀನಿವಾಸ್, ಪ್ರಕಾಶ್ ಇದ್ದರು.

