

ಕಾರ್ಕಳ ಅತ್ತೂರು ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2026 ಬಗ್ಗೆ ಕಾರ್ಕಳ ಅತ್ತೂರು ಸಂತ ಲೋರೆನ್ಸ್ ಬಸಿಲಿಕದ ಪತ್ರಿಕಾ ಗೋಷ್ಟಿ ನಡೆಯಿತು. ಅದರಂತೆ ಭಕ್ತರಿಗೆ ಕೆಳಕಂಡತ್ತೆ ಮಾರ್ಪಾಡುಗಳನ್ನು ತಿಳಿಸಿದ್ದಾರೆ.
- ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2026 ಜನವರಿ 25, 26, 27, 28 ಹಾಗೂ 29ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ಧರಾಗಿದ್ದೇವೆ. ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವ ಯಾತ್ರಿಕರ ಭೇಟಿಯು, ಆಧ್ಯಾತ್ಮಿಕ ನೆಮ್ಮದಿ, ಮಾನಸಿಕ ಸಂತೃಪ್ತಿ ಹಾಗೂ ಸ್ಮರಣೀಯವಾಗಲೆಂದು ಹಾರೈಸುತ್ತೇವೆ.
- ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನು ನೀಡುವ ನವದಿನಗಳ ಪ್ರಾರ್ಥನೆ ದಿನಾಂಕ 16-01-2026 ರಿಂದ ಆರಂಭಗೊಂಡು ದಿನಾಂಕ 24-01-2026 ರವರೆಗೆ ನೆರವೇರಲಿರುವುದು.
- ದಿನಾಂಕ 24-01-2026ರಂದು ಶನಿವಾರ ಬೆಳಿಗ್ಗೆ 9.00 ಘಂಟೆಗೆ ಆರಾಧನೆ ಹಾಗೂ 9.30 ಘಂಟೆಗೆ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ಇರುವುದು. ಅಸ್ವಸ್ಥರು ಅದೇ ದಿವಸದ ಪೂಜೆಗೆ ಬಂದು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ಹಬ್ಬದ ಬೇರೆ ದಿನಗಳಲ್ಲಿ ಇಗರ್ಜಿಯ ವಠಾರಕ್ಕೆ ವಾಹನಗಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ.
- ದಿನಾಂಕ 25-01-2026ರಂದು ಆದಿತ್ಯವಾರ ಸಂಜೆ 3.00 ಘಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆ ಇರುವುದು.
- ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡ ಭಾಷೆಯಲ್ಲಿ 9 ಹೀಗೆ ಒಟ್ಟು 45 ದಿವ್ಯ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಉಡುಪಿ, ಮಂಗಳೂರು, ಕಾರವಾರ, ಅಲಹಾಬಾದ್, ಅಜ್ಮೀರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸುವರು.
- ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 72 ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ.
- ಬಸಿಲಿಕಾದ ಬಲ ಬದಿಯಲ್ಲಿ ಅಂದರೆ ‘ಪವಾಡ ಮೂರ್ತಿ’ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೆöÊಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ.
- ಭಕ್ತರು ಶ್ರೀಕ್ಷೇತ್ರಕ್ಕೆ ಹೇಳಿಕೊಂಡ ಹಣದ ರೂಪದ ಹರಕೆ, ವಸ್ತು ರೂಪದ ಹರಕೆ, ಮೊಂಬತ್ತಿಗಳ ಹರಕೆಗಳನ್ನು ದೇವಾಲಯದ ಎಡಬದಿಯಲ್ಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ಭಕ್ತಾಧಿಗಳಿಗೆ ಕುಡಿಯಲು ಶುದ್ಧ ಹಾಗೂ ತಂಪು ನೀರಿನ ವ್ಯವಸ್ಥೆಯನ್ನು ಬಸಿಲಿಕದ ವಠಾರದಲ್ಲಿ 5 ಸ್ಥಳದಲ್ಲಿ ಮಾಡಲಾಗುವುದು.
- ಶಾರೀರಿಕ ಅಗತ್ಯತೆ ಪೂರೈಸಲು ಬಸಿಲಿಕದ ವಠಾರದಲ್ಲಿ ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳು, ಗುರುನಿವಾಸದ ಎಡ ಬದಿಯಲ್ಲಿ 20 ಶೌಚಾಲಯಗಳು ಇವೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳಿವೆ.
- ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖ್ಯೆಯ ಪೋಲಿಸ್ ಅಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಯಾತ್ರಾರ್ಥಿಗಳ ಸುರಕ್ಷತೆಗೆ ಸಹಕರಿಸುತ್ತಾರೆ.
- ಯಾತ್ರಾರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನುರಿತ ಗೃಹರಕ್ಷದಳ ಹಾಗೂ ಇತರ ಸಿಬ್ಬಂದಿಗಳು ನಿರ್ವಹಿಸಲಿರುವರು.
- ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು, ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಮುಂದೆ ಬ್ಯಾರಿಕೇಡ್ ಹಾಕಿರುವ ತನಕ ಮಾತ್ರ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅಲ್ಲಿಂದ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ.
- ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲೋರೆನ್ಸ್ ಧರ್ಮಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲೋರೆನ್ಸ್ ಹೈಸ್ಕೂಲ್ ಶಾಲಾ ಆಟದ ವಿಶಾಲವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿಯೇ ಕಾದಿರಿಸಲಾಗಿದೆ.
- ವೆಹಿಕಲ್ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು – ಅತ್ತೂರು ಕಾನ್ವೆಂಟ್ ಮಾರ್ಗವಾಗಿ ತಂದು ಎಡಬದಿಯ ಪಂಚಾಯತ್ ಶೌಚಾಲಯದ ಬಳಿ ಎಡಕ್ಕೆ ತಿರುಗಿ ಮುಂದೆ ಸಾಗಿ ಬಲಬದಿಯBSNL MOBILE TOWERಬಳಿ ಮುಂದೆ ಸಾಗಿ ಎಡಕ್ಕೆ ತಿರುಗಿ V.I.P. ಹಾಗೂ ಇತರ PASS HOLDER ಗಳಿಗಾಗಿ ನಿರ್ಮಿಸಿದ ವಿಶಾಲವಾದ ಪಾರ್ಕಿಂಗ್ ವಠಾರದಲ್ಲಿ ವಾಹನಗಳನ್ನು ನಿಲ್ಲಿಸುವುದು.
- ವೆಹಿಕಲ್ ಪಾಸ್ ಹೊಂದಿದ ವಾಹನಗಳು, ನಿಲುಗಡೆ ಮಾಡಿದ ವಾಹನಗಳಿಗೆ ನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಏಕಮುಖ ಕಾಂಕ್ರಿಟ್ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪೋಲಿಸ್ ಸಿಬಂದಿ ವಾಹನಗಳಿಗೆ ಹಾಗೂ ತುರ್ತು ಚಿಕಿತ್ಸಾ ವಾಹನಗಳಿಗೆ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಬಸಿಲಿಕಾದ ವಠಾರಕ್ಕೆ ಪ್ರವೇಶವಿಲ್ಲ.
- ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಇತರರಿಗೆ ಬಸಿಲಿಕಾ ವಠಾರದಲ್ಲಿ ಮೊಂಬತ್ತಿ ಮಾರಾಟ ಮಾಡಲು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಸಾರ್ವಜನಿಕರ ಹಾಗೂ ಭಕ್ತಾಧಿಗಳ ಸುಗಮ ಸಂಚಾರಕ್ಕಾಗಿ ದೂಪದಕಟ್ಟೆಯಿಂದ ಪ್ರಸಾದ್ ಟೈಲರ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಕಡೆಯ ಅಂಚಿನಿAದ ಸ್ವಲ್ಪ ಜಾಗ ಬಿಟ್ಟು ಅಂಗಡಿಮುAಗಟ್ಟು ನಿರ್ಮಿಸುವಂತೆ ಸ್ಥಳೀಯ ನಿಟ್ಟೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದು ಸುರಕ್ಷೆಯ ದೃಷ್ಠಿಯಿಂದ ಹಾಗೂ ರಸ್ತೆಯಲ್ಲಿ ಹಾದುಹೋಗುವ ಯಾವುದೇ ವ್ಯಕ್ತಿಗೆ ದೈಹಿಕ ಕಿರುಕುಳ ಆಗದಂತೆ ತಡೆಯಲು ಅತೀ ಅವಶ್ಯಕವಾಗಿದೆ.
- ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಅತೀ ದೊಡ್ಡ ಮೂರ್ತಿಯನ್ನು ಬಸಿಲಿಕದ ಬಲಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಪ್ರತಿಮೆ ಇಟಲಿ ದೇಶದ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಸಂತ ಲೋರೆನ್ಸ್ ಬಸಿಲಿಕಾದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗುವುಸಿಲ್ಲ.
- ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಹೊಸ ಮೂರ್ತಿಯನ್ನು ನವ್ಮಿÆÃ ಸಂತ ಲೋರೆನ್ಸರ ಪುಷ್ಕರಣಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಸಿಲಿಕದಲ್ಲಿ ಪುಷ್ಕರಣಿ ಹಾಗೂ ಪುಷ್ಕರಣಿಯಲ್ಲಿ ಸಂತ ಲೋರೆನ್ಸರ ಏಕಶಿಲಾ ಪ್ರತಿಮೆ ನವ್ಮಿÆ ಅತ್ತೂರು ಸಂತ ಲೋರೆನ್ಸ್ ಬಸಿಲಿಕದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ.
- ಬಸಿಲಿಕಾ ವಠಾರದಲ್ಲಿ ಹಾಸುಕಲ್ಲು ಮತ್ತು ಇಂಟರ್ಲಾಕನ್ನು ಅಳವಡಿಸಿ ಪರಿಸರವನ್ನು ಧೂಳಿನಿಂದ ಮುಕ್ತಗೊಳಿಸಿದ್ದೇವೆ.
- ದಿನಾಂಕ 29-01-206 ಗುರುವಾರ ಸಂಜೆ 6.00 ಘಂಟೆಯ ಬಲಿಪೂಜೆಯ ನಂತರ ಬಸಿಲಿಕಾ ವಠಾರದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಜಿ. ಕೆ. ಶ್ರೀನಿವಾಸ್ ಸಾಲ್ಯಾನ್ ವಿರಚಿತ “ಧರ್ಮರಕ್ಷಣೆ” ಎಂಬ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿರುವುದು.
- 2025ನೇ ಸಾಲಿನಲ್ಲಿ ಬಸಿಲಿಕಾ ವತಿಯಿಂದ ಎರಡು ಬಡ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಿಕೊಡಲಾಗಿದೆ.
- ಬಸಿಲಿಕಾಕ್ಕೆ ವರ್ಷಂಪ್ರತಿ ಸಹಾಯ ಕೇಳಿ ಬರುವ ಬಡವರಿಗೆ ಅವರ ಪರಿಸ್ಥಿತಿಗೆ ಅನುಗುಣವಾಗಿ ಜಾತಿ, ಮತ, ಭೇದವಿಲ್ಲದೆ ಸಹಾಯ ಮಾಡುತ್ತಾ ಬಂದಿರುತ್ತೇವೆ.
- ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಹೊರತು ಪಡಿಸಿ ಬಸಿಲಿಕಾ ವಠಾರದಲ್ಲಿ ಹೊಸದಾಗಿ ನಿರ್ಮಿಸಿದ ಕ್ರಿಸ್ತಾಕೃಪಾ ಕಟ್ಟಡದಲ್ಲಿ ಭಕ್ತಾದಿಗಳಿಗೆ ತಂಗಲು ಸುಮಾರು 60 ಕೋಣೆಗಳ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ. ಭಕ್ತಾದಿಗಳು ಇದರ ಸದುಪಯೋಗವನ್ನು ಮಾಡಿ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯಲು ಮತ್ತು ಸಂತ ಲೋರೆನ್ಸರಲ್ಲಿ ಪ್ರಾರ್ಥಿಸಲು ಒಳ್ಳೆ ಅವಕಾಶ ಇರುತ್ತದೆ.
- ವಾರ್ಷಿಕ ಮಹೋತ್ಸವದ ನಂತರ ಚರ್ಚಿನ ದೇವರ ಮಂಟಪದ ನವೀಕರಣದ ಯೋಜನೆಯನ್ನು ಹಮ್ಮಿಕೊಂಡಿರುತ್ತೇವೆ. ಪವಿತ್ರ ರೋಮಿನಲ್ಲಿ ಇರುವಂತಹ ದೇವರ ಮಂಟಪದ ರೀತಿಯಲ್ಲಿ ನವೀಕರಿಸಲು ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿರುತ್ತದೆ.
- ಪತ್ರಿಕಾ ಮಾಧ್ಯಮ ಮಿತ್ರರು ಕಳೆದ ಹಲವು ವರುಷಗಳಿಂದ ಈ ಕ್ಷೇತ್ರದ ಬಗ್ಗೆ ಅಭಿಮಾನವನ್ನಿಟ್ಟು, ಕ್ಷೇತ್ರದ ಎಲ್ಲಾ ವರದಿಗಳನ್ನು ಅತ್ಯುತ್ತಮವಾಗಿ ಪಸರಿಸಿ, ಭಕ್ತಾದಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಮುಂದೆಯೂ ತಾವು ತಮ್ಮ ಸೇವೆಯನ್ನು ನೀಡಲು ಸಂತ ಲೋರೆನ್ಸರು ತಮಗೆ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಹರಸಲಿ ಎಂದು ಹಾರೈಸಿ ತಮಗೆಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಅತೀ ವಂದನೀಯ ಆಲ್ಬನ್ ಡಿಸೋಜ
ನಿರ್ದೇಶಕರು, ಸಂತ ಲೋರೆನ್ಸ್ ಬಾಸಿಲಿಕ, ಅತ್ತೂರು, ಕಾರ್ಕಳ.
ಉಪಸ್ಥಿತರು : ಅತೀ ವಂದನೀಯ ಆಲ್ಬನ್ ಡಿಸೋಜ-ರೆಕ್ಟರ್/ನಿರ್ದೇಶಕರು,
ವಂದನೀಯ ರೊಬಿನ್ ಸಾಂತುಮಾಯೆರ್- ಸಹಾಯಕ ಗುರುಗಳು, ಸಂತೋಷ್ ಡಿಸಿಲ್ವ – ಉಪಾಧ್ಯಕ್ಷರು,
ರೊನಾಲ್ಡ್ ನೊರೊನ್ಹ-ಕಾರ್ಯದರ್ಶಿ, ಸದಸ್ಯರು – ವಂದೀಶ್ ಮತಾಯಸ್, ವಲೇರಿಯನ್ ಪಾಯ್ಸ್, ಮೆಲ್ವಿನ್ ಕ್ಯಾಸ್ತಲಿನೊ.


