ಸಂದೇಶ ಪ್ರಶಸ್ತಿಗಳು 2026 ಅನ್ನು ಘೋಷಿಸಿದ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ


ಮಂಗಳೂರು, ಜನವರಿ 09, 2026 – ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಮೌಲ್ಯಾಧಾರಿತ ಸಮಾಜವನ್ನು ಪೋಷಿಸುವ ದೃಢವಾದ ಬದ್ಧತೆಯಿಂದ ಹುಟ್ಟಿಕೊಂಡ ಸಂಸ್ಥೆ. 1989ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆಯು 1991 ರಲ್ಲಿ ದತ್ತಿಸಂಸ್ಥೆಯಾಗಿ ನೋಂದಾಯಿತವಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಜಾನಪದಕ್ಕೆ ಸಕ್ರಿಯ ಬೆಂಬಲ ನೀಡುವ ಹಾಗೂ ರಾಜ್ಯದ ಜನರಲ್ಲಿ ಸಾಮರಸ್ಯ ಮತ್ತು ರ‍್ವಾಂಗೀಣ ಗುಣಮಟ್ಟವನ್ನು ಉತ್ತೇಜಿಸುವ ಸೇವೆಗೆ ಬದ್ಧವಾಗಿದೆ. ಇದೀಗ ಬಹುನಿರೀಕ್ಷಿತ 2026 ರ ಸಂದೇಶ ಪ್ರಶಸ್ತಿಗಳನ್ನು ಕೊಡಮಾಡುವ ಕೈಂರ‍್ಯದಲ್ಲಿ ತೊಡಗಿದೆ.
ಸಂಗೀತ, ನೃತ್ಯ, ಕಲೆ, ಚಿತ್ರಕಲೆ, ಪತ್ರಿಕೋದ್ಯಮ, ಮಾಧ್ಯಮ ಶಿಕ್ಷಣ, ಸರ‍್ವಜನಿಕ ಭಾಷಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಕರ‍್ಯಕ್ರಮಗಳ ಮೂಲಕ ಪ್ರತಿಷ್ಠಾನವು ಜೀವನವನ್ನು ರೂಪಿಸುವ ಕಾಯಕವನ್ನು ನಡೆಸುತ್ತ ಬಂದಿದೆ. ಹೆಚ್ಚುವರಿಯಾಗಿ, ನಾಟಕ, ಕವನ, ಮಾಧ್ಯಮ ಮತ್ತು ಜೀವನದ ವಿವಿಧ ಹಂತದ ವಿಷಯಗಳ ಕುರಿತು ಕಾರ್ಯಗಾರಗಳನ್ನು ಆಯೋಜಿಸುವ ಮೂಲಕ ಕ್ರಿಯಾತ್ಮಕ ವೇದಿಕೆಗಳನ್ನು ರಚಿಸಿದೆ. ಇತ್ತೀಚೆಗೆ, ಸಂದೇಶವು ರ‍್ನಾಟಕ ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರರ‍್ಶಕ ಕಲಾ ವಿಶ್ವವಿದ್ಯಾಲಯದೊಂದಿಗೆ ಮಾನ್ಯತಾ ಒಪ್ಪಂದಕ್ಕೆ (ಒಔU) ಸಹಿ ಹಾಕುವ ಮೂಲಕ ತನ್ನ ಶೈಕ್ಷಣಿಕ ಕೊಡುಗೆಗಳನ್ನು ಮತ್ತಷ್ಟು ಹೆಚ್ಚಿಸುವ ಡಿಪ್ಲೊಮಾ ಕಾರ‍್ಯಕ್ರಮಗಳಿಗೆ ಅನುವು ಮಾಡಿಕೊಟ್ಟಿದೆ. ಕಳೆದ ಡಿಸೆಂಬರ್ 22, 2024 ರಂದು ಮಂಡ್ಯದಲ್ಲಿ ನಡೆದ 87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ನೀಡಿದ ಕೊಡುಗೆಗಳಿಗಾಗಿ ಸಂದೇಶವನ್ನು ಗುರುತಿಸಿ, ಗೌರವಿಸಿದೆ.
ಸಂದೇಶ ಪ್ರಶಸ್ತಿಗಳ ಬಗ್ಗೆ
ಸಂದೇಶ ಪ್ರಶಸ್ತಿಗಳು ಪ್ರತಿಷ್ಠಾನದ ಪ್ರಮುಖ ಉಪಕ್ರಮವಾಗಿದ್ದು ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಂಗೀತ, ಮಾಧ್ಯಮ, ಸಮಾಜ ಸೇವೆ ಮುಂತಾದ ವಲಯಗಳಲ್ಲಿ ಅಸಾಧಾರಣ ಕೊಡುಗೆ ನೀಡಿದವರನ್ನು ಆಯ್ದು ಗೌರವಿಸುತ್ತಿದೆ. ಈ ಪ್ರತಿಷ್ಠಿತ ವರ‍್ಷಿಕ ಕರ‍್ಯಕ್ರಮವು ಅತ್ಯುತ್ತಮ ಸಾಧಕರನ್ನು ಗೌರವಿಸುವುದು ಮಾತ್ರವಲ್ಲದೆ ಮೌಲ್ಯಾಧಾರಿತ ಕೊಡುಗೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ಸಂದೇಶ ಪ್ರಶಸ್ತಿಗಳು 2026 – ಸಮಾರಂಭದ ವಿವರಗಳು
ಸಂದೇಶ ಪ್ರಶಸ್ತಿಗಳು 2026 ಪ್ರದಾನ ಸಮಾರಂಭವು
ಬುಧವಾರ, ಜನವರಿ 21, 2026ರಂದು ಸಂಜೆ 5:30ಕ್ಕೆ,
ಸಂದೇಶ ಸಂಸ್ಥೆಯ ಆವರಣ, ಮಂಗಳೂರುನಲ್ಲಿ ನಡೆಯಲಿದೆ.
ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿಯ ರ‍್ಮಪ್ರಾಂತ್ಯದ ಬಿಷಪ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಅತಿ ಪೂಜ್ಯ ಡಾ. ಹೆನ್ರಿ ಡಿ’ಸೋಜಾ ವಹಿಸಲಿದ್ದಾರೆ.
ಸಮಾರಂಭದ ಮುಖ್ಯ ಅತಿಥಿ: ಡಾ.ನಾಗತಿಹಳ್ಳಿ ಚಂದ್ರಶೇಖರ್, ನರ‍್ದೇಶಕ, ನಟ, ಚಿತ್ರಕಥೆಗಾರ, ಮತ್ತು ಗೀತ ರಚನೆಕಾರ

ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು:

  • ಅತಿ ಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನ್ಹಾ, ಮಂಗಳೂರು ರ‍್ಮಪ್ರಾಂತ್ಯದ ಬಿಷಪ್
  • ಶ್ರೀ ಐವನ್ ಡಿ’ಸೋಜ, ವಿಧಾನ ಪರಿಷತ್ ಸದಸ್ಯರು
  • ಶ್ರೀಮತಿ ಶಾಲೆಟ್ ಪಿಂಟೊ, ಅಧ್ಯಕ್ಷರು, ಕರ‍್ನಾಟಕ ಇಕೋ ಟೂರಿಸಂ ಬರ‍್ಡ್
  • ಶ್ರೀ ಸ್ಟ್ಯಾನಿ ಆಲ್ವಾರೆಸ್, ಅಧ್ಯಕ್ಷರು, ಕೊಂಕಣಿ ಸಾಹಿತ್ಯ ಅಕಾಡೆಮಿ
  • ಶ್ರೀ ತಾರಾನಾಥ್ ಗಟ್ಟಿ ಕಾಪಿಕಾಡ್, ಅಧ್ಯಕ್ಷರು, ರ‍್ನಾಟಕ ತುಳು ಸಾಹಿತ್ಯ ಅಕಾಡೆಮಿ
  • ಶ್ರೀ ಉಮರ್ ಯು. ಎಚ್., ಅಧ್ಯಕ್ಷರು, ರ‍್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
  • ಡಾ. ಎಂ. ಪಿ. ಶ್ರೀನಾಥ್, ಅಧ್ಯಕ್ಷರು, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್
  • ಡಾ. ಸುಧೀಪ್ ಪೌಲ್, ಎಂ.ಎಸ್‌.ಎಫ್‌.ಎಸ್., ನರ‍್ದೇಶಕರು, ಸಂದೇಶ
  • ಶ್ರೀ ರಾಯ್ ಕ್ಯಾಸ್ಟೆಲಿನೋ, ಸಂಸ್ಥೆಯ ಟ್ರಸ್ಟಿಗಳು
  • ಶ್ರೀ ದಾಮೋದರ್ ಶೆಟ್ಟಿ, ಅಧ್ಯಕ್ಷರು, ಸಂದೇಶ ಪ್ರಶಸ್ತಿ ಜ್ಯೂರಿ
    ಈ ಕರ‍್ಯಕ್ರಮವು ಕಲೆ ಮತ್ತು ಸಂಸ್ಕೃತಿಗೆ ಸಾಮಾಜಿಕ ಬದ್ಧತೆಯೊಂದಿಗೆ ಸಲ್ಲಿಸಲಾದ ಪ್ರತಿಭೆ, ನಿಷ್ಠೆ ಮತ್ತು ಸೇವೆಯ ಪ್ರೇರಣಾದಾಯಕ ಸಂಭ್ರಮವಾಗಲಿದೆ.
    ಸಂದೇಶ ಪ್ರಶಸ್ತಿ ಪುರಸ್ಕೃತರು 2026
    ಈ ರ‍್ಷದ ಪ್ರಶಸ್ತಿ ಪುರಸ್ಕೃತರನ್ನು ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಗುಣಮಟ್ಟದ ಕೊಡುಗೆಗಳಿಗಾಗಿ ಆಯ್ಕೆ ಮಾಡಲಾಗಿದೆ:
    ಸಂದೇಶ ಪ್ರಶಸ್ತಿಗಳು 2026
    • ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ – ಡಾ. ನಾ .ಮೊಗಸಾಲೆ
    • ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ – ಶ್ರೀ ಪ್ಯಾಟ್ರಿಕ್ ಕಾಮಿಲ್‌ ಮೋರಸ್
    • ಸಂದೇಶ ತುಳು ಸಾಹಿತ್ಯ ಪ್ರಶಸ್ತಿ- ಡಾ. ಇಂದಿರಾ ಹೆಗ್ಗಡೆ
    • ಸಂದೇಶ ಮಾಧ್ಯಮ ಪ್ರಶಸ್ತಿ – ಶ್ರೀಮತಿ ತುಂಗರೇಣುಕ
    • ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ – ಶ್ರೀ ಸೈಮನ್ ಪಾಯ್ಸ್
    • ಸಂದೇಶ ಕಲಾ ಪ್ರಶಸ್ತಿ – ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ
    • ಸಂದೇಶ ಶಿಕ್ಷಣ ಪ್ರಶಸ್ತಿ – ಡಾ. ದತ್ತಾತ್ರೇಯ ಅರಳಿಕಟ್ಟೆ
    • ಸಂದೇಶ ವಿಶೇಷ ಪ್ರಶಸ್ತಿ – ನವಜೀವನ ರಿಹಬಿಲಿಟೇಷನ್ ಸೆಂಟರ್ ಫಾರ್ ದ ಡಿಸೇಬಲ್ಡ್
    ಈ ರ‍್ಷದ ಜ್ಯೂರಿ ಮಂಡಳಿಗೆ ಅಧ್ಯಕ್ಷರಾಗಿ ಡಾ. ನಾ. ದಾಮೋದರ್ ಶೆಟ್ಟಿ ಅವರು ನೇತೃತ್ವ ವಹಿಸಿದ್ದರು. ಸದಸ್ಯರಾಗಿ ಶ್ರೀಮತಿ ರೂಪಕಲಾ ಆಳ್ವ, ಅಡ್ವೊಕೇಟ್ ಬಿ. ಎ. ಮೊಹಮ್ಮದ್ ಹನೀಫ್ ಹಾಗೂ ಶ್ರೀಮತಿ ಕನ್ಸೆಪ್ಟ ಫರ‍್ನಾಂಡಿಸ್ ಅವರು ಸೇವೆ ಸಲ್ಲಿಸಿದ್ದರು

ಸಂದೇಶ ಪ್ರಶಸ್ತಿಗಳು 2026 ಪ್ರತಿಭೆ, ಸರ‍್ಪಣೆ ಮತ್ತು ಮೌಲ್ಯಗಳ ಸ್ಮರಣೀಯ ಆಚರಣೆಯಾಗಲಿದೆ. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿರುವ ಈ ಅಸಾಧಾರಣ ವ್ಯಕ್ತಿಗಳನ್ನು ನಾವು ಗೌರವಿಸುತ್ತಿರುವಾಗ, ಸ್ಫರ‍್ತಿ ಮತ್ತು ಮನ್ನಣೆಯ ಸಂಜೆಯನ್ನು ನಾವು ಎದುರು ನೋಡುತ್ತಿದ್ದೇವೆ.
ಪ್ರಶಸ್ತಿ ಪುರಸ್ಕೃತರ ವಿವರಗಳು
೧. ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ- ೨೦೨೬
ಡಾ. ನಾ. ಮೊಗಸಾಲೆ


ಡಾ. ನಾ. ಮೊಗಸಾಲೆಯವರು (ನಾರಾಯಣ ಭಟ್ಟ, ಮೊಗಸಾಲೆ) ಕಾಸರಗೋಡು ತಾಲೂಕಿನ ಕೋಳ್ಯೂರು ಗ್ರಾಮದಲ್ಲಿ ೧೯೪೪ರಲ್ಲಿ ವಿಠಲ ಭಟ್ಟ ಹಾಗೂ ಸರಸ್ವತಿಯವರ ಮಗನಾಗಿ ಜನಿಸಿದರು. ಕಾಂತಾವರದ ಗ್ರಾಮೀಣ ಚಿಕಿತ್ಸಾಲಯದ ವೈದ್ಯಾಧಿಕಾರಿಯಾಗಿ ೧೯೬೫ರಲ್ಲಿ ನೇಮಕಗೊಂಡ ಬಳಿಕ ಕಾಂತಾವರವನ್ನೇ ಕರ‍್ಯಕ್ಷೇತ್ರ ಮಾಡಿಕೊಂಡರು.
ಕಾಂತಾವರ ಕನ್ನಡ ಸಂಘವನ್ನು ೧೯೭೬ರಲ್ಲಿ ಸ್ಥಾಪಿಸಿದ ಮೊಗಸಾಲೆಯವರು ಸಾಹಿತ್ಯ ಚಟುವಟಿಕೆಗಳಿಗೆ ವಿಸ್ತೃತ ರೂಪ ನೀಡಿದರು. ʻರ‍್ತಮಾನದ ಮುಖಗಳು, ಬೇಲಿಯ ಗೂಟದ ಮೇಲೊಂದು ಚಿಟ್ಟೆʼಯ ವರೆಗಿನ ೧೫ ಕವನ ಸಂಕಲನಗಳು, ʻಮಣ್ಣಿನ ಮಕ್ಕಳು, ಉಲ್ಲಂಘನೆʼ ಮುಂತಾದ ೨೩ ಕಾದಂಬರಿಗಳು, ʻಆಶಾಂಕುಶ, ಆಗು ನೀ ಅನಿಕೇತನʼದ ವರೆಗಿನ ೮ ಕಥಾ ಸಂಕಲನಗಳು, ʻಮೊಗಸಾಲೆಯವರ ಒಲವು ನಿಲುವು, ನುಡಿದು ಸೂತಕಿಗಳಲ್ಲʼದ ವರೆಗಿನ ೧೦ ಲೇಖನ ಸಂಕಲನಗಳು, ʻನಿಮ್ಮ ಕೈಯಲ್ಲೇ ಆರೋಗ್ಯ, ದಾಂಪತ್ಯ ಯೋಗʼ ಮುಂತಾದ ೬ ವೈದ್ಯಕೀಯ ಕೃತಿಗಳು, ಎರಡು ಗೀತ ನಾಟಕಗಳು, ೧೦ ಸಂಪಾದಿತ ಕೃತಿಗಳು ಡಾ. ನಾ ಮೊಗಸಾಲೆಯವರಿಂದ ರಚಿತವಾಗಿವೆ. ಮಲಯಾಳ, ಇಂಗ್ಲಿಷ್‌, ಮರಾಠಿ, ಹಿಂದಿ, ತೆಲುಗು, ತಮಿಳು ಮುಂತಾದ ಭಾಷೆಗಳಿಗೆ ಇವರ ಹಲವು ಕೃತಿಗಳು ಅನುವಾದಗೊಂಡಿವೆ.
ಸುಮಾರು ಐವತ್ತರಷ್ಟು ರಾಜ್ಯ, ರಾಷ್ಟ್ರ ಮಟ್ಟದ ಕವಿ ಸಮ್ಮೇಳನಗಳಲ್ಲಿ ಅಧ್ಯಕ್ಷತೆ, ಸಹಭಾಗಿತ್ವ ವಹಿಸಿರುವ ಅವರ ʻನನ್ನದಲ್ಲದ್ದುʼ ಕಾದಂಬರಿಗೆ, ʻಇದಲ್ಲ-ದಲ್ಲʼ ಕವನ ಸಂಕಲನಕ್ಕೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ. ʻಉಲ್ಲಂಘನೆʼ ಕಾದಂಬರಿಗೆ ಶಿವಮೊಗ್ಗ ರ‍್ನಾಟಕ ಸಂಘದ ಪ್ರಶಸ್ತಿ, ʻಇಹಪರದ ಕೊಳʼ ಕವನ ಸಂಕಲನಕ್ಕೆ ಡಿ.ಎಸ್.‌ ರ‍್ಕಿ ಕಾವ್ಯ ಪ್ರಶಸ್ತಿ, ʻಸ್ವಂತಕ್ಕೆ ಸ್ವಂತಾವತಾರʼ ಕವನ ಸಂಕಲನಕ್ಕೆ ಉಗ್ರಾಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರ‍್ನಾಟಕ ರಾಜ್ಯೋತ್ಸವ ಪ್ರಶಸ್ತಿ –ಹೀಗೆ ಡಾ. ನಾ. ಮೊಗಸಾಲೆಯವರಿಗೆ ಸಂದ ಪ್ರಶಸ್ತಿಗಳು ಅಸಂಖ್ಯ.
ಶ್ರೀಯುತರು ೧೯೬೬ರಲ್ಲಿ ಸ್ಥಾಪಿಸಿದ ಕಾಂತಾವರ ಕನ್ನಡ ಸಂಘಕ್ಕೆ ರಾಜ್ಯ ಮಟ್ಟದ ಪ್ರಸಿದ್ಧಿಯಿದೆ. ಆ ಮೂಲಕ ಮುದ್ದಣ ಕಾವ್ಯ ಪ್ರಶಸ್ತಿ, ಸುರ‍್ಣ ರಂಗ ಸನ್ಮಾನ್‌, ಲಲಿತ ಕಲಾ ಪುರಸ್ಕಾರಗಳ ಜೊತೆಗೆ ನುಡಿನಮನ , ಕಾಂತಾವರ ಉತ್ಸವ ಇತ್ಯಾದಿ ಕರ‍್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ಅವರು ಪ್ರಕಟಿಸುತ್ತಿರುವ ʻನಾಡಿಗೆ ನಮಸ್ಕಾರʼ ಕಿರುಹೊತ್ತಿಗೆಗಳ ಸಂಖ್ಯೆ ಮುನ್ನೂರ ಐವತ್ತನ್ನು ತಲುಪಿದೆ.
ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ನಿರಂತರ ಸೇವೆಯನ್ನು ಮನಗಂಡು ಸಂದೇಶ ಸಾಂಸ್ಕೃತಿಕ ಪ್ರತಿಷ್ಠಾನವು ೨೦೨೬ರ ಸಂದೇಶ ಸಾಹಿತ್ಯ ಪ್ರಶಸ್ತಿಯನ್ನಿತ್ತು ಡಾ. ನಾ. ಮೊಗಸಾಲೆಯವರನ್ನು ಗೌರವಿಸುತ್ತಿದೆ.

ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ-2026
ಪ್ಯಾಟ್ರಿಕ್ ಕಾಮಿಲ್‌ ಮೋರಸ್


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ 1945ರಲ್ಲಿ ಜನಿಸಿದ ಪ್ಯಾಟ್ರಿಕ್ ಕಾಮಿಲ್ ಮೋರಸ್ ಅವರು ಕಡು ಬಡತನದಲ್ಲಿ ಬೆಳೆದು, ಹೆಚ್ಚಿನ ಶಿಕ್ಷಣದಿಂದ ವಂಚಿತರಾದರೂ ಹದಿಹರೆಯದಲ್ಲಿಯೇ ಕೊಂಕಣಿ ನಿಯತಕಾಲಿಕ ಪತ್ರಿಕೆಗಳ ಮತ್ತು ಕೊಂಕಣಿ ಪುಸ್ತಕಗಳ ವಿತರಕರಾಗಿ, ಮಾರಾಟ ಪ್ರತಿನಿಧಿಯಾಗಿ, ಚಂದಾ ಸಂಗ್ರಹಕಾರರಾಗಿ, ಕಾಣಿಕ್ ಪತ್ರಿಕೆಯ ಉಪಸಂಪಾದಕರಾಗಿ, ಕೊಂಕಣಿಯ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು. ಹದಿನೆಂಟರ ವಯಸ್ಸಿನಿಂದಲೇ ಇವರ ಸಣ್ಣಕತೆಗಳು ಮತ್ತು ಸಾಮಾಜಿಕ, ರಾಜಕೀಯ ವಿಷಯಗಳ ಕುರಿತ ಲೇಖನಗಳು ಆ ಕಾಲದ ವಿವಿಧ ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
‘ಎಂ. ಪ್ಯಾಟ್ರಿಕ್’, ‘ಫ್ರೀ ಮಾರ್ಸ್’ ಹಾಗೂ ‘ಕುಲಶಾಂತ್’ ಎಂಬ ಹೆಸರುಗಳಲ್ಲಿ ಕಳೆದ ಆರು ದಶಕಗಳಿಂದ ನಿರಂತರವಾಗಿ ಇವರು ಕೊಂಕಣಿ ಸಾಹಿತ್ಯಕ್ಕೆ ಗಣನೀಯ ಪ್ರಮಾಣದಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇವರ ಲೇಖನಿಯಿಂದ ಮೂಡಿ ಬಂದಿರುವ 10 ಕಾದಂಬರಿಗಳು ಮತ್ತು ಎರಡು ಸಣ್ಣಕಥಾ ಸಂಕಲನಗಳು ಕೊಂಕಣಿ ಓದುಗರ ಹೃದಯದಲ್ಲಿ ಅವರಿಗೆ ಶಾಶ್ವತ ಸ್ಥಾನ ಕಲ್ಪಿಸಿಕೊಟ್ಟಿದೆ. ವಿವಿಧ ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಸುಮಾರು 800 ಸಣ್ಣಕತೆಗಳು, 400ರಷ್ಟು ಲೇಖನಗಳು, ಹಲವಾರು ಕವನಗಳು, ಚುಟುಕುಗಳು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.
ಸ್ವಂತದ ‘ನಿತ್ಯಾಧಾರ್’ ಪ್ರಕಾಶನ ಸಂಸ್ಥೆಯಿAದ ಕೊಂಕಣಿ ಪುಸ್ತಕಗಳ ಪ್ರಕಟಣೆ, ಪುಸ್ತಕ ವಿತರಣೆಯ ಮೂಲಕ ಬರಹಗಾರರ ಮತ್ತು ಓದುಗರ ನಡುವಿನ ಕೊಂಡಿಯಾಗಿಯೂ ಇವರು ಕೆಲಸ ಮಾಡಿದ್ದಾರೆ.
ಕೊಂಕಣಿ ಪತ್ರಿಕೆಗಳ ಪ್ರಸಾರ, ಪ್ರಚಾರ ಮತ್ತು ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಎಂ. ಪ್ಯಾಟ್ರಿಕ್ ಅವರ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಬೆಂದೂರ್ ಚರ್ಚ್ ವತಿಯಿಂದ ಕೊಂಕಣಿ ಮಾನ್ಯತಾ ದಿನದ ಗೌರವ, ಬಜ್ಜೋಡಿ ಚರ್ಚ್ ವತಿಯಿಂದ ‘ಬಜ್ಜೋಡಿ ರತ್ನ’ ಪ್ರಶಸ್ತಿ ಪಡೆದಿದ್ದಾರೆ.
ಕೊಂಕಣಿ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಶ್ರೀ ಎಂ. ಪ್ಯಾಟ್ರಿಕ್ ಅವರಿಗೆ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು 2026ರ ಸಾಲಿನ ʻಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿʼಯನ್ನು ನೀಡಿ ಗೌರವಿಸಲು ಸಂತೋಷ ಪಡುತ್ತದೆ.

ಸಂದೇಶ ತುಳು ಸಾಹಿತ್ಯ ಪ್ರಶಸ್ತಿ- ೨೦೨೬
ಇಂದಿರಾ ಹೆಗ್ಗಡೆ


ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ಎಳತ್ತೂರು ಗುತ್ತು ಸಿಂಧು ಸೆಡ್ತಿ ಹಾಗೂ ರಾಜು ಸೆಟ್ಟಿಯವರ ಪುತ್ರಿಯಾಗಿ ೧೯೪೯ರಲ್ಲಿ ಜನಿಸಿದ ಡಾ. ಇಂದಿರಾ ಹೆಗ್ಗಡೆಯವರು ತುಳು ನಾಡು, ತುಳು ಸಂಸ್ಕೃತಿ, ತುಳು ಭಾಷೆ, ತುಳು ಸಾಹಿತ್ಯ, ತುಳು ಸಂಶೋಧನೆಗಳ ಬಗ್ಗೆ ತುಳು ಹಾಗೂ ಕನ್ನಡದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಡಾ ಇಂದಿರಾ ಹೆಗ್ಗಡೆಯವರು ದೇಶ ವಿದೇಶಗಳಿಗೆ ಪ್ರವಾಸ ಮಾಡಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡವರು. ಹಾಗಾಗಿಯೇ ಅವರು ರಚಿಸಿದ ಕೃತಿಗಳಿಗೆ ಸಾಹಿತ್ಯಕ, ಸಂಶೋಧನಾತ್ಮಕ ಮಹತ್ವವಿದೆ. ತುಳುವೆರೆ ಅಟಿಲ್‌ ಅರಗಣೆ,’ಬಾರಗೆರೆ ಬರಂಬು- ತುಳುವೆರೆ ಪುಂಚ ನಾಡೊಂದು’ ಮುಂತಾದ ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ ಇಂದಿರಾ ಹೆಗ್ಗಡೆಯವರು ತುಳುನಾಡಿನ ಮಹತ್ವವನ್ನು ಕನ್ನಡಿಗರಿಗೆ ತಿಳಿಯಹೇಳುವ ಉದ್ದೇಶದಿಂದ ಹಲವಾರು ಕೃತಿಗಳನ್ನು ಕನ್ನಡದಲ್ಲೂ ರಚಿಸಿದ್ದಾರೆ. ಮೂರು ಕಥಾ ಸಂಕಲನಗಳು, ಐದು ಕಾದಂಬರಿಗಳು, ಏಳು ಸಂಶೋಧನಾ ಕೃತಿಗಳು, ಒಂದು ಕವನ ಸಂಕಲನ, ಎರಡು ಜೀವನ ಚರಿತ್ರೆ, ಮೂರು ಪ್ರವಾಸ ಕಥನ, ಒಂದು ಅನುವಾದ ಹಾಗೂ ಎರಡು ಸಂಪಾದಿತ ಕೃತಿಗಳು ಅವರ ಲೇಖನಿಯಿಂದ ಮೂಡಿ ಬಂದಿವೆ.
ಬಂಟರು- ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾತೃಸಂಸ್ಕೃತಿ, ತುಳುನಾಡಿನ ಗರಡಿ ವಿದ್ಯೆ, ತುಳುನಾಡಿನ ಧರ‍್ಮಿಕ ಸ್ವಾತಂತ್ರ‍್ಯ ಮತ್ತು ಮಹಿಳೆ, ತುಳುನಾಡಿನ ಶಾಸನಗಳಲ್ಲಿ ಅಳತೆ ಪ್ರಮಾಣ- ಇತ್ಯಾದಿ ಮಹತ್ವಪರ‍್ಣ ವಿಷಯಗಳ ಬಗ್ಗೆ ಕೃತಿಗಳನ್ನು, ಲೇಖನಗಳನ್ನು ರಚಿಸಿದ್ದಾರೆ.
ಬೆಂಗಳೂರನ್ನು ಕರ‍್ಯಕ್ಷೇತ್ರ ಮಾಡಿಕೊಂಡಿದ್ದಾಗ ರ‍್ನಾಟಕ ಲೇಖಕಿಯರ ಸಂಘ ಬೆಂಗಳೂರು-ಇದರ ಕರ‍್ಯರ‍್ಶಿಯಾಗಿಯೂ ಉಪಾಧ್ಯಕ್ಷೆಯಾಗಿಯೂ ಶಂಬಾ ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿಯೂ ನಗರ ಜಿಲ್ಲಾ ಇತಿಹಾಸ ಅಕಾಡೆಮಿಯ ಉಪಾಧ್ಯಕ್ಷರಾಗಿಯೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಬೆಂಗಳೂರು ಬಂಟರ ಸಂಘ, ತುಳುಕೂಟ, ಕನ್ನಡ ಶಕ್ತಿಕೇಂದ್ರ ಮುಂತಾದ ಹತ್ತು ಹಲವು ಸಂಸ್ಥೆಗಳಲ್ಲಿ ಡಾ. ಇಂದಿರಾ ಹೆಗ್ಗಡೆಯವರ ದುಡಿಮೆಯಿದೆ.
ರ‍್ನಾಟಕ ಜಾನಪದ ಅಕಾಡೆಮಿ, ತುಳುಸಾಹಿತ್ಯ ಅಕಾಡೆಮಿಗಳ ಗೌರವ ಪ್ರಶಸ್ತಿ, ವೃತ್ತಿರಂಗದ ಯಶಸ್ವೀ ಮಹಿಳಾ ಉದ್ಯಮಿ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ತುಳುವರೆಂಕುಲು, ಕನ್ನಡ ಜನಶಕ್ತಿ ಕೇಂದ್ರ, ಬಿ.ಎಂ.ಶ್ರೀ. ಪ್ರತಿಷ್ಠಾನ ಮುಂತಾದ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಇಂದಿರಾ ಹೆಗ್ಗಡೆಯವರನ್ನು ಪ್ರಶಸ್ತಿಯಿತ್ತು ಗೌರವಿಸಿವೆ.
ತುಳು ಸಾಹಿತ್ಯಕ್ಕೆ, ಒಟ್ಟಾರೆಯಾಗಿ ತುಳುನಾಡಿಗೆ ಡಾ. ಇಂದಿರಾ ಹೆಗ್ಗೆಡೆಯವರು ಸಲ್ಲಿಸಿದ ಸೇವೆಯನ್ನು ಮನಗಂಡು ಸಂದೇಶ ಸಾಂಸ್ಕೃತಿಕ ಪ್ರತಿಷ್ಠಾನವು ೨೦೨೬ರ ತುಳು ಸಾಹಿತ್ಯ ಪ್ರಶಸ್ತಿಯನ್ನಿತ್ತು ಗೌರವಿಸಲು ಸಂತೋಷ ಪಡುತ್ತಿದೆ.

ಸಂದೇಶ ಮಾಧ್ಯಮ ಪ್ರಶಸ್ತಿ- ೨೦೨೬
ತುಂಗರೇಣುಕ


ತುಮಕೂರು ಜಿಲ್ಲೆಯ ಚಿಕನಾಯಕನ ಹಳ್ಳಿಯ ಶೆಟ್ಟಿಕೆರೆ ಗ್ರಾಮದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಎಸ್.‌ ಕೆ. ಗಂಗಣ್ಣ ಹಾಗೂ ಎಸ್.‌ ಕೆ. ಚೆನ್ನವೀರಮ್ಮನವರ ಮಗಳಾಗಿ – ಕೃಷಿಕ ಮನೆತನದಲ್ಲಿ – ಜನಿಸಿದ ಶ್ರೀಮತಿ ತುಂಗರೇಣುಕ ಅವರು ಪತ್ರರ‍್ತೆಯಾಗಿ ಮೂರೂವರೆ ದಶಕಗಳನ್ನು ಪೂರೈಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ತುಂಗರೇಣುಕ ಅವರು ಪ್ರಾರಂಭದಲ್ಲಿ ಲಂಕೇಶ ಪತ್ರಿಕೆಗೆ ಬಿಡಿ ಲೇಖನಗಳನ್ನು ಬರೆಯುತ್ತ ಬರವಣಿಗೆ ಪ್ರಾರಂಭಿಸಿದರು.‌ ಬಳಿಕ ಖ್ಯಾತ ಪತ್ರರ‍್ತ ವಿ. ಎನ್.‌ ಸುಬ್ಬ ರಾವ್‌ ಸಂಪಾದಕತ್ವದ ʻನಾವು ನೀವುʼ ಹಾಗೂ ʻತಾರಾಲೋಕʼ ಪತ್ರಿಕೆಗಳಲ್ಲಿ ಪತ್ರರ‍್ತೆಯಾದರು. ಅಭಿಮಾನಿ ಪ್ರಕಾಶನದ ʻಈ ಸಂಜೆʼ ಪತ್ರಿಕೆ ಹಾಗೂ ʻಅರಗಿಣಿʼ ಸಿನಿಮಾ ವಾರಪತ್ರಿಕೆ, ʻಸಂಯುಕ್ತ ರ‍್ನಾಟಕʼ ದಿನ ಪತ್ರಿಕೆ, ʻರ‍್ಮವೀರʼ ವಾರಪತ್ರಿಕೆಗಳಲ್ಲಿ ಕೆಲಸ ಮಾಡುತ್ತ ತಮ್ಮ ಅನುಭವವನ್ನು ವಿಸ್ತರಿಸಿಕೊಂಡರು. ಸುಮಾರು ಐದು ರ‍್ಷಗಳ ಕಾಲ ಈ ಟೀವಿಯ ಕನ್ನಡ ವಿಭಾಗದಲ್ಲಿದ್ದುಕೊಂಡು ನೂರಕ್ಕೂ ಹೆಚ್ಚು ʻವೀಕೆಂಡ್‌ ಸ್ಪೆಷಲ್‌ ಕರ‍್ಯಕ್ರಮʼಗಳನ್ನು ನಡೆಸಿ ಪ್ರಸಿದ್ಧಿ ಪಡೆದರು.
ಕನ್ನಡ ಚಿತ್ರರಂಗದ ಸೀನಿಯರ್‌ ಪತ್ರರ‍್ತೆಯಾಗಿರುವ ತುಂಗರೇಣುಕ ಅವರು ಡಾ. ರಾಜಕುಮಾರ್‌, ವಿಷ್ಣುರ‍್ಧನ್‌, ಅಂಬರೀಷ್‌, ಪುನೀತ್‌ ರಾಜಕುಮಾರ್‌, ಯಶ್‌, ಸುದೀಪ್‌, ಜಯಮಾಲ, ಜಯಂತಿ, ಆರತಿ ಮೊದಲಾದ ಹಲವಾರು ಪ್ರಸಿದ್ಧ ನಟನಟಿಯರ ಸಂರ‍್ಶನ ಮಾಡಿ ಪ್ರಕಟಿಸಿದ್ದಾರೆ. ಶಂಭು ಕ್ರಿಯೇಷನ್ಸ್‌ ಯು ಟ್ಯೂಬ್‌ ಛಾನಲ್ಲಿನಲ್ಲಿ ಇವೆಲ್ಲವೂ ಲಭ್ಯವಿದೆ.
ಅವರು ʻಚಿತ್ರʼ ಸಿನಿಮಾ ಪತ್ರಿಕೆಯಲ್ಲಿ ಸಂಪಾದಕಿಯಾಗಿ ಸತತ ಇಪ್ಪತ್ತೆರಡು ರ‍್ಷಗಳ ಕಾಲ ದುಡಿದುದೊಂದು ದಾಖಲೆಯೆ. ಸುಮಾರು ನಾಲ್ಕು ರ‍್ಷಗಳಿಂದ ಅವರು ಮಹಿಳೆಯರ ಅಚ್ಚುಮೆಚ್ಚಿನ ʻಪ್ರಿಯಾಂಕʼ ಮಾಸಪತ್ರಿಕೆಯ ಕರ‍್ಯ ನರ‍್ವಾಹಕ ಸಂಪಾದಕಿಯಾಗಿ ರ‍್ತವ್ಯ ನಿಭಾಯಿಸುತ್ತಿದ್ದಾರೆ.
ರ‍್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ರ‍್ತವ್ಯ ನಿಭಾಯಿಸಿದ ತುಂಗರೇಣುಕ ಅವರು ಚಿತ್ರರಂಗದ ಅನೇಕ ಓರೆಕೋರೆಗಳನ್ನು ತಮ್ಮ ಬರಹಗಳ ಮೂಲಕ ನಿಕಷಕ್ಕೊಡ್ಡಿದ್ದಾರೆ. ಯಾವತ್ತೂ ಪ್ರಶಸ್ತಿಗಳಿಂದ ದೂರವಿದ್ದ ಅವರಿಗೆ ಪ್ರೆಸ್‌ ಕ್ಲಬ್‌ ಪ್ರಶಸ್ತಿಯೊಂದನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಇದೀಗ ಸಂದೇಶ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ೨೦೨೬ರ ʻಸಂದೇಶ ಮಾಧ್ಯಮ ಪ್ರಶಸ್ತಿʼಯನ್ನು ಸ್ವೀಕರಿಸುತ್ತಿರುವ ತುಂಗರೇಣುಕ ಅವರಿಗೆ ಹರ‍್ದಿಕ ಅಭಿನಂದನೆಗಳು.

ಕೊಂಕಣಿ ಸಂಗೀತ ಪ್ರಶಸ್ತಿ- 2025
ಸೈಮನ್ ಪಾಯ್ಸ್


ಸಂಗೀತ ಕ್ಷೇತ್ರದಲ್ಲಿ ದೀರ್ಘ ಕಾಲದಿಂದ ಗುರುತಿಸಿಕೊಂಡಿರುವ ಶ್ರೀ ಸೈಮನ್ ಪಾಯ್ಸ್ ಅವರು ಹಲವಾರು ವಾದ್ಯಗಳಲ್ಲಿ ಪರಿಣತಿಯೊಂದಿಗೆ ಸಂಗೀತ ಸಂಯೋಜನೆ, ಸಂಗೀತ ಶಿಕ್ಷಣ ಮತ್ತು ತರಬೇತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಟ್ತಿನಿಟಿ ಕಾಲೇಜ್ ಆಫ್ ಮ್ಯೂಸಿಕ್, ಲಂಡನ್- ಇವರು ನಡೆಸುವ ಸಂಗೀತ ಪರೀಕ್ಷೆಗಳಲ್ಲಿ, ಕೀ ಬೋರ್ಡ್ ಗ್ರೇಡ್- 6 ಮತ್ತು ವಾಯೊಲಿನ್‌ನಲ್ಲಿ ಗ್ರೇಡ್- 3ರಲ್ಲಿ ಪರಿಣತಿ ಹಾಗೂ ಕರ್ನಾಟಕ ಶಾಸ್ತಿçÃಯ ಸಂಗೀತದಲ್ಲಿ ಜ್ಯೂನಿಯರ್ ಗ್ರೇಡ್ ಪಡೆದಿದ್ದಾರೆ. ಗಿಟಾರ್, ಕೀ ಬೋರ್ಡ್, ವಾಯೊಲಿನ್ ಮತ್ತು ಡ್ರಮ್ಸ್ ವಾದ್ಯಗಳ ತರಬೇತಿ ನೀಡುತ್ತಿರುವ ಇವರು 2005 ರಿಂದ ತಮ್ಮದೇ ಆದ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ,
ಮಂಗಳೂರಿನ ಸೈಂಟ್ ಆ್ಯಗ್ನೆಸ್ ಸಿಬಿಎಸ್‌ಸಿ ಸ್ಕೂಲ್, ಕಾರ್ಮೆಲ್ ಸಿಬಿಎಸ್‌ಸಿ ಸ್ಕೂಲ್, ಸೈಂಟ್ ಲಾರೆನ್ಸ್ ಸಿಬಿಎಸ್‌ಸಿ ಸ್ಕೂಲ್ ಬೋಂದೆಲ್, ನಿತ್ಯಾದಾರ್ ಸ್ಕೂಲ್ ಪೆರ್ಮನ್ನೂರ್ ಇಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಶ್ರೀಯುತ ಸೈಮನ್‌ ಪಾಯ್ಸ್ ಬಜಾಲ್ ಚರ್ಚ್ನ ಗಾಯನ ಮಂಡಳಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಡಿಪು ದೇವಾಲಯದ ಗಾಯನ ಮಂಡಳಿಗೂ ಇವರ ಸೇವೆ ವಿಸ್ತೃತಗೊಂಡಿದೆ. ಕ್ಯಾರಿಸ್ಮಾö್ಯಟಿಕ್ ಪ್ರಾರ್ಥನಾ ಸಭೆಗಳಲ್ಲಿ ಸಕ್ರಿಯರಾಗಿರುವ ಸೈಮನ್ ಪಾಯ್ಸ್ ಅವರು ಸಂಗೀತ ಸಂಯೋಜನೆ, ಗಾಯನ ತರಬೇತಿ ಮತ್ತು ವಾದ್ಯ ತರಬೇತಿಗಳನ್ನು ನೀಡುತ್ತಿದ್ದಾರೆ. ಸಿಡಿಗಳಿಗೆ ಸಂಗೀತ ಒದಗಿಸುವುದರ ಜೊತೆಗೆ ಸ್ವತಂತ್ರ ಸಂಗೀತ ಸಿಡಿಗಳನ್ನು ಸಹ ನಿರ್ಮಿಸಿದ್ದಾರೆ.
ಸಂಗೀತ ಕ್ಷೇತ್ರದ ಇವರ ಕೊಡುಗೆಗಳನ್ನು ಗಮನಿಸಿ 2023 ರ ಜಾಗತಿಕ ಸಂಗೀತ ದಿನಾಚರಣೆಯಂದು ಮಾಂಡ್ ಸೊಭಾಣ್ ಸಂಸ್ಥೆಯು ಕಲಾಂಗಣ್‌ನಲ್ಲಿ ಇವರನ್ನು ಸನ್ಮಾನಿಸಿದೆ. ಇವರ ಸಂಗೀತ ಶಾಲೆಯ ವಿದ್ಯಾರ್ಥಿಗಳು ಮಂಗಳೂರು ಆಕಾಶವಾಣಿ, ದೂರದರ್ಶನ ಹಾಗೂ ಇತರ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಹಲವು ವಾದ್ಯಗಳ ವಾದನ ಪರಿಣತಿ, ಆಲ್ಬಮ್‌ಗಳ ನಿರ್ಮಾಣ, ಯುವಪೀಳಿಗೆಗೆ ತರಬೇತಿ ನೀಡುವಿಕೆ – ಹೀಗೆ ಸಂಗೀತ ಕ್ಷೇತ್ರಕ್ಕೆ ಶ್ರೀಸೈಮನ್ ಪಾಯ್ಸ್ ಅವರು ನೀಡುತ್ತಿರುವ ಒಟ್ಟು ಕೊಡುಗೆಗಳನ್ನು ಪರಿಗಣಿಸಿದ ಸಂದೇಶ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನವು 2026ರ ಸಾಲಿನ ʻಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿʼಯನ್ನು ಅವರಿಗೆ ನೀಡಲಾಗುತ್ತಿದೆ.

ಸಂದೇಶ ಕಲಾ ಪ್ರಶಸ್ತಿ- ೨೦೨೬
ಶ್ರೀನಿವಾಸ ಜಿ. ಕಪ್ಪಣ್ಣ


ಕರ‍್ನಾಟಕದ ಪ್ರಸಿದ್ಧ ರಂಗಸಂಘಟಕ, ಬೆಳಕಿನ ತಜ್ಞ ಎಂದು ಖ್ಯಾತರಾದ ಕಪ್ಪಣ್ಣ ಯಾನೆ ಶ್ರೀನಿವಾಸ್‌ ಜಿ. ಕಪ್ಪಣ್ಣನವರು ರ‍್ನಾಟಕ ವರ‍್ತಾ ಮತ್ತು ಪ್ರಸಾರ ವಿಭಾಗದಲ್ಲಿ ಉದ್ಯೋಗಿಯಾಗಿರುತ್ತಲೇ ಗೆಳೆಯರನ್ನು ಕೂಡಿಕೊಂಡು ʻನಟರಂಗʼ ಎಂಬ ತಂಡಕಟ್ಟಿ ನಾಟಕವಾಡತೊಡಗಿದರು. ರ‍್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್‌ ಆಗಿಯೂ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಜವಾಬ್ದಾರಿ ನರ‍್ವಹಿಸಿದರು.
೧೯೮೨ರಲ್ಲಿ ದೆಹಲಿಯಲ್ಲಿ ನಡೆದ ಏಷಿಯಡ್ ಗೇಮ್ಸ್, ೧೯೮೫ರಲ್ಲಿ ಮತ್ತೆ ದೆಹಲಿಯಲ್ಲಿ ನಡೆದ ೨೬ನೇ ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಜಾನಪದ ಕರ‍್ಯಕ್ರಮ ನಡೆಸಿಕೊಟ್ಟ ಕಪ್ಪಣ್ಣನವರು ೧೯೮೬ರಲ್ಲಿ ಬೆಂಗಳೂರಿನಲ್ಲಿ ನಡೆದ ಸರ‍್ಕ್‌ ಸಮ್ಮೇಳನದಲ್ಲಿ ೨೦೦೦ ಜನಪದ ಕಲಾವಿದರ ಉತ್ಸವವನ್ನು ನಡೆಸಿಕೊಟ್ಟರು. ೧೯೯೭ರಲ್ಲಿ ಬೆಂಗಳೂರಿನಲ್ಲಿ ನಡೆದ ೧೯ನೇ ರಾಷ್ಟ್ರೀಯ ಕ್ರೀಡಾಕೂಟದ ಆರಂಭ ಹಾಗೂ ಅಂತ್ಯದಲ್ಲಿ ೫೦೦೦ ಜಾನಪದ ಕಲಾವಿದರ ಪ್ರರ‍್ಶನ ರ‍್ಪಡಿಸಿದರು. ೨೦೦೬ರಲ್ಲಿ ಬೆಂಗಳೂರಿನಲ್ಲಿ ನಡೆದ ಸುರ‍್ಣ ರ‍್ನಾಟಕ ಸಂಭ್ರಮದಲ್ಲಿ ೫೦೦೦ ಜಾನಪದ ಕಲಾವಿದರ ಉತ್ಸವ ನಡೆಸಿದರು. ಇದಲ್ಲದೆ ರ‍್ನಾಟಕದ ಜಾನಪದ ಕಲಾವಿದರ ಉತ್ಸವವನ್ನು ಭಾರತದ ವಿವಿಧ ಕೇಂದ್ರಗಳಲ್ಲಿ ರ‍್ಪಡಿಸಿದ್ದರು. ರಾಜಧಾನಿಯಲ್ಲಿ ೫೮೦೦ ಕಲಾವಿದರ ೨೫೦ ತಂಡಗಳ ʻಜಾನಪದ ಜಾತ್ರೆʼಯನ್ನು ಎರಡು ರ‍್ಷಗಳ ಕಾಲಾವಧಿಯಲ್ಲಿ ನಡೆಸಿಕೊಟ್ಟರು. ಹಂಪಿ ಉತ್ಸವ, ಕದಂಬ ಉತ್ಸವ ಮೊದಲಾದೆಡೆ ಬೆಳಕಿನ ಅಪರ‍್ವ ನರ‍್ವಹಣೆ ಮಾಡಿದರು.
ಅಮೇರಿಕಾದಲ್ಲಿ ನಡೆಯುವ ಅಕ್ಕ ಹಾಗೂ ನಾವಿಕ ಸಮ್ಮೇಳನಗಳಿಗೆ ಕಪ್ಪಣ್ಣನವರು ನಾಲ್ಕು ಬಾರಿ ಜಾನಪದ ಕಲಾವಿದರ ತಂಡ ಕಟ್ಟಿಕೊಂಡು ಹೋಗಿದ್ದಾರೆ. ಐ.ಸಿ.ಸಿ.ಆರ್‌ ವತಿಯಿಂದ ನಡೆದ ಸಾಂಸ್ಕೃತಿಕ ವಿನಿಮಯ ಕರ‍್ಯಕ್ರಮದ ಕಲಾನರ‍್ದೇಶಕರಾಗಿ ತಂಡಕಟ್ಟಿಕೊಂಡು ಶ್ರೀಲಂಕಾ, ಬಂಗ್ಲಾದೇಶ, ಸಿಂಗಾಪುರ, ರ‍್ಮನಿ, ಪ್ಯಾರಿಸ್‌, ರ‍್ಕಿ, ಸಿರಿಯ ಮೊದಲಾದ ದೇಶಗಳಿಗೆ ಪ್ರವಾಸ ಮಾಡಿ ಪ್ರರ‍್ಶನ ನೀಡಿದ್ದಾರೆ. ದಕ್ಷಿಣ ಕೊರಿಯಾದ ಸಿಯೋಲ್‌, ಪರ‍್ವ ರ‍್ಮನಿ, ಇಟೆಲಿ, ಜಪಾನ್‌, ಪಿಲಿಪ್ಪೀನ್ಸ್‌, ಚೈನಾ ಮೊದಲಾದ ದೇಶಗಳ ರಂಗ ಕಮ್ಮಟ, ರಂಗ ಅಧ್ಯಯನ ಪ್ರವಾಸಗಳನ್ನೂ ಕಪ್ಪಣ್ಣನವರು ಪ್ರತಿನಿಧಿಸಿದ್ದಾರೆ.
ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, ದುಬಾಯಿಯ ಧ್ವನಿ ಪ್ರತಿಷ್ಠಾನದ ಶ್ರೀರಂಗ ಪ್ರಶಸ್ತಿ, ರ‍್ನಾಟಕ ಸರಕಾರದ ಬಿ.ವಿ.ಕಾರಂತ ಪ್ರಶಸ್ತಿ, ರ‍್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ- ಹೀಗೆ ಅಸಂಖ್ಯ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ರಂಗಭೂಮಿ ಹಾಗೂ ಜಾನಪದ ಕಲೆಗಳಿಗೆ ಶ್ರೀನಿವಾಸ್‌ ಜಿ.ಕಪ್ಪಣ್ಣ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಗಮನಿಸಿ ಸಂದೇಶ ಸಾಂಸ್ಕೃತಿಕ ಪ್ರತಿಷ್ಠಾನವು ಶ್ರೀಯುತರಿಗೆ ಸಂದೇಶ ಕಲಾ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಸಂದೇಶ ಶಿಕ್ಷಣ ಪ್ರಶಸ್ತಿ-೨೦೨೬
ಡಾ. ದತ್ತಾತ್ರೇಯ ಅರಳಿಕಟ್ಟೆ


ಗೊಂಬೆಯಾಟದ ಮೂಲಕ ಪ್ರಸಿದ್ಧಿ ಪಡೆದ ಡಾ. ದತ್ತಾತ್ರೇಯ ಅರಳಿಕಟ್ಟೆಯವರು ಶ್ರಿಂಗೇರಿಯ ಅರಳಿಕಟ್ಟೆ ಎಂಬಲ್ಲಿ ಶ್ರೀ ರಾಮರಾವ್‌ ಹಾಗೂ ಶ್ರೀಮತಿ ಲಲಿತಮ್ಮನವರ ಮಗನಾಗಿ ಜನುಮಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿ. ಎಂ. ಆರ್‌. ರಂಗನಾಥ ರಾವ್ ಅವರಿಂದ ಗೊಂಬೆಯಾಟದ ವಿಶೇಷ ಅಭ್ಯಾಸ ಮಾಡಿದ ದತ್ತಾತ್ರೇಯ ಅವರು ಭಾರತದಾದ್ಯಂತ ಅನೇಕ ಶಿಷ್ಯರನ್ನು ಹೊಂದಿದ್ದಾರೆ. ʻಗೊಂಬೆಯಾಟ- ಒಂದು ಶಿಕ್ಷಣ ಸಹಾಯಿʼ ಎಂಬುದನ್ನು ಅವರು ತಮ್ಮ ವಿಶಿಷ್ಟ ಪ್ರಯೋಗಗಳಿಂದ ಶ್ರುತಪಡಿಸಿದ್ದಾರೆ. ದೇಶ ವಿದೇಶಗಳಲ್ಲಿ ಗೊಂಬೆಯಾಟದ ಪ್ರಯೋಗಗಳನ್ನು ನೀಡಿದ್ದಲ್ಲದೆ, ಅಸಂಖ್ಯ ಕಮ್ಮಟಗಳನ್ನೂ ನಡೆಸಿ ಕೊಟ್ಟಿದ್ದಾರೆ. ಗೊಂಬೆಯಾಟದ ಜಾಗತಿಕ ವಿಶ್ವಕೋಶದಲ್ಲಿ ಡಾ. ದತ್ತಾತ್ರೇಯರ ಹೆಸರು ಅಜರಾಮರಗೊಂಡಿದೆ.
ಇರಾನಿನಲ್ಲಿ ನಡೆದ ೭ನೇ ಅಂತಾರಾಷ್ಟ್ರೀಯ ಗೊಂಬೆಯಾಟ ಉತ್ಸವದಲ್ಲಿ, ಬ್ರೆಸಿಲ್‌ನಲ್ಲಿ ನಡೆದ ಜಾಗತಿಕ ಬೊಂಬೆಯಾಟ ಉತ್ಸವದಲ್ಲಿ, ಅಮೇರಿಕಾ, ರಷ್ಯ, ಪೋಲೆಂಡ್‌, ಇಸ್ರೇಲ್‌ ಹಾಗೂ ಭಾರತದ ಪ್ರಮುಖ ಕೇಂದ್ರಗಳಲ್ಲಿ ನಡೆದ ಬೊಂಬೆಯಾಟ ಹಬ್ಬಗಳಲ್ಲಿ ಶ್ರೀಯುತರು ಪ್ರರ‍್ಶನ ನೀಡಿದ್ದಾರೆ. ಬೊಂಬೆಯಾಟದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಲ್ಲಿ ಡಾ. ದತ್ತಾತ್ರೇಯರು ಪ್ರಮುಖರು.
ಸಲಾಕೆ ಗೊಂಬೆಯಾಟದ ಪರಿಣತಿಯನ್ನು ಪರಿಗಣಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಪ್ರಶಸ್ತಿಯನ್ನಿತ್ತು ಶ್ರೀಯುತರನ್ನು ಸನ್ಮಾನಿಸಿದೆ. ಅಂತೆಯೇ ಮುದ್ರಿಕಾ ಶೈಲಿಯಲ್ಲಿ ಕೂಡ ಅವರು ಪರಿಣತರು. ಶಿಕ್ಷಣಕ್ಕಾಗಿ ಬೊಂಬೆಯಾವನ್ನು ಬಳಸಬಲ್ಲ ಶ್ರೀಯುತರನ್ನು ರ‍್ನಾಟಕದ ಡಿಎಸ್‌ ಇ ಆರ್‌ ಟಿ, ಕೇಂದ್ರದ ಎನ್‌ ಸಿ ಆರ್‌ ಟಿ ಮೊದಲಾದ ಶಿಕ್ಷಣ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಅಮೇರಿಕಾದ ಬಯಾಗ್ರಫಿಕಲ್‌ ಸಂಸ್ಥೆಯ ರ‍್ಷದ ವ್ಯಕ್ತಿ ಪ್ರಶಸ್ತಿ, ರ‍್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಬೊಂಬೆಯಾಟ ಹಾಗೂ ಶಿಕ್ಷಣಕ್ಕೆ ಸಲ್ಲಿಸಿದ ಸೇವೆಗಾಗಿ ನೇಷನಲ್‌ ರ‍್ಚ್ಯುವಲ್‌ ವಿಶ್ವವಿದ್ಯಾಲಯವು ಶ್ರೀಯುತರಿಗೆ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದ್ದಾರೆ.
ಡಾ.ದತ್ತಾತ್ರೇಯ ಅವರು ಶಿಕ್ಷಣ ಕ್ಷೇತ್ರದಲ್ಲಿ ಗೊಂಬೆಯಾಟವನ್ನು ಬಳಸಿ ಪಡೆದ ಸತ್ಕರ‍್ತಿಯನ್ನು ಗಮನಿಸಿ ಅವರಿಗೆ ಸಂದೇಶ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ಸಂದೇಶ ಶಿಕ್ಷಣ ಪ್ರಶಸ್ತಿಯನ್ನಿತ್ತು ಗೌರವಿಸಲು ಹೆಮ್ಮೆ ಪಡುತ್ತಿದೆ.
ಸಂದೇಶ ವಿಶೇಷ ಪ್ರಶಸ್ತಿ – ನವಜೀವನ ರಿಹಬಿಲಿಟೇಷನ್ ಸೆಂಟರ್ ಫಾರ್ ದ ಡಿಸೇಬಲ್ಡ್
ಅಂದಿನ ಬಳ್ಳಾರಿಯ ಬಿಷಪರಾಗಿದ್ದ ಅತಿ ವಂದನೀಯ ಅಂಬ್ರೋಸ್‌ ಎಡನಪಳ್ಳಿಯವರಿಗೆ ಒಂದು ವಿಶೇಷ ಕನಸಿತ್ತು. ಅದನ್ನು ನನಸು ಮಾಡುವಂತೆ ಅವರು ವಿನಂತಿಸಿದ್ದು ಕ್ಲನಿ ಸಿಸ್ರ‍್ಸನ್ನು. ಬಿಷಪರು ನೀಡಿದ ಅವಕಾಶವನ್ನು ಅವರು ಒಂದು ಸವಾಲಾಗಿ ಸ್ವೀಕರಿಸಿದರು.
ಪುರ‍್ವಸತಿ ಕೇಂದ್ರದ ಜವಾಬ್ದಾರಿ ವಹಿಸಿಕೊಂಡ ಕ್ಲೂನಿ ಸಿಸ್ರ‍್ಸಿನ ಅಂದಿನ ಪ್ರೊವಿನ್ಶಿಯಲ್‌ ಆಗಿದ್ದ ಸಿಸ್ಟರ್‌ ಮೇರಿ ಎಡೇಲ್‌ ಅವರು ಆಯ್ಕೆ ಮಾಡಿದ್ದು ಸಿಸ್ಟರ್‌ ಸ್ಕೊಲಾಸ್ಟಿಕ್‌, ಸಿಸ್ಟರ್‌ ವಿಕ್ಟೋರಿಯಾ, ಸಿಸ್ಟರ್‌ ಹೆನ್ರಿ ಹಾಗೂ ಸಿಸ್ಟರ್‌ ಎಸ್ತರ್‌ ಅವರನ್ನು. ಬಹುಕಷ್ಟಕರವಾದ ಕೆಲಸಕ್ಕಾಗಿ ಅವರು ಬಳ್ಳಾರಿಯ ಸುತ್ತಮುತ್ತಣ ಹಳ್ಳಿಹಳ್ಳಿಗಳಿಗೆ ಸುತ್ತಾಡಿ ನೂರಾರು ವಿಶೇಷ ಚೇತನರನ್ನು ಒಂದೆಡೆ ಸೇರಿಸಿದರು. ಹಾಗೆ ೧೯೮೭ರಲ್ಲಿ ಹುಟ್ಟಿಕೊಂಡದ್ದು ನವಜೀವನ ಪರ‍್ವಸತಿ ಕೇಂದ್ರ.
ವಿಶೇಷ ಚೇತನರಿಗೆ ಟೇಲರಿಂಗ್‌, ಟೈಪಿಂಗ್‌, ಅಡುಗೆ, ಕಂಪ್ಯೂಟರ್‌, ಸಂಗೀತ ಮುಂತಾದ ವೃತ್ತಿಗಳನ್ನು ಕಲಿಸಿಕೊಡಲಾಗುತ್ತಿದೆ. ಇಂದೀಗ ಪುರ‍್ವಸತಿ ಕೇಂದ್ರವು ಬಳ್ಳಾರಿಯಿಂದ ಮುಂದುವರಿದು ಹೊಸಪೇಟೆಯನ್ನೂ ಸೇರಿಕೊಂಡ ಹಾಗೆ ೭೨ ಹಳ್ಳಿಗಳಿಗೆ ಆವರಿಸಿದೆ. ಸರಕಾರದ ಸಹಕಾರವನ್ನೂ ಬಳಸಿ ಹಲವು ಯೋಜನೆಗಳನ್ನು ಕರ‍್ಯಗತ ಮಾಡಲಾಗಿದೆ. ಕುರುಡು, ಕಿವುಡು, ಅಂಗ ವೈಕಲ್ಯ ಇತ್ಯಾದಿ ಸಮಸ್ಯೆಗಳುಳ್ಳ ವಿಶೇಷ ಚೇತನರಿಗೆ ಹೊಂದಿಕೊಳ್ಳುವ ವಿದ್ಯೆಯನ್ನು ಕಲಿಸಿಕೊಡಲಾಗುತ್ತದೆ.
೨೦೧೨ರಲ್ಲಿ ಬಾಲಕರ‍್ಮಿಕ ಸಮಸ್ಯೆಯನ್ನು ಮನಗಂಡ ಬಳ್ಳಾರಿ ಜಿಲ್ಲಾಧಿಕಾರಿ, ಅತಿ ವಂದನೀಯ ಬಿಷಪ್‌ ಹೆನ್ರಿ ಡಿ ಸೋಜ, ಸಿಸ್ಟರ್‌ ವಿಕ್ಟೋರಿಯ ಹಾಗೂ ಹಲವು ಭಗಿನಿಯರು ಸೇರಿಕೊಂಡು ಬಾಲಕರ‍್ಮಿಕರನ್ನು ಗುರುತಿಸುವ, ಅವರಿಗೆ ರಾಷ್ಟ್ರೀಯ ಬಾಲಕರ‍್ಮಿಕ ಯೋಜನೆಯಡಿಯಲ್ಲಿ ಪುನಶ್ಚೇತನ ನೀಡುವ ಕೆಲಸ ಆಗುತ್ತಲಿದೆ. ಇಂದೀಗ ನವಜಾತ ಶಿಶುವಿನಿಂದ ಮೊದಲ್ಗೊಂಡು ೨೦೦೦ಕ್ಕೂ ಅಧಿಕ ಮಕ್ಕಳಿಗೆ ಸಂಸ್ಥೆಯ ಸೇವೆ ಸಲ್ಲುತ್ತಿದೆ. ಈಗಾಗಲೇ ಅನೇಕ ಸಹಜೀವಿಗಳು ವಿವಿಧ ಉದ್ಯೋಗಗಳನ್ನು ಕಂಡುಕೊಂಡು ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ.
ಸೇವಾ ಮನೋಭಾವ, ರ‍್ತವ್ಯ ನಿಷ್ಠೆ ಇತ್ಯಾದಿಗಳನ್ನು ಮನಗಂಡು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಬಳ್ಳಾರಿಯ ನವಜೀವನ ಪುರ‍್ವಸತಿ ಕೇಂದ್ರಕ್ಕೆ ಸಂದೇಶ ವಿಶೇಷ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸುವುದಕ್ಕೆ ಅಭಿಮಾನ ಪಡುತ್ತಿದೆ.

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂರ‍್ಕಿಸಿ:
ಫಾ. ಸುದೀಪ್ ಪಾಲ್, ಒSಈS
ನರ‍್ದೇಶಕರು, ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನಲ
+91 9113646986