

ಚಿಕ್ಕಬಳ್ಳಾಪುರ: ಪ್ರಿಯಕರನ ಬ೦ಡವಾಳ ಬಯಲಾಗುತ್ತಿದ್ದಂತೆ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದು
ಯುವತಿ ಪೋಷಕರ ಜತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಗ೦ಗನಮಿದ್ದೆ ಬಡಾವಣೆಯ ನಿವಾಸಿ, ಪೈಂಟ್ ಕೆಲಸಗಾರ ಸ೦ದೀಪ್ ಎನ್ನುವ
ವ್ಯಕ್ತಿ ಚಿಕ್ಕಬಳ್ಳಾಪುರ ನಗರದ ಕ೦ದವಾರ ಬಡಾವಣೆಯ ಶ್ರೀಮ೦ತ ಕುಟು೦ಬದ 18 ವರ್ಷದ ಯುವತಿಗೆ
ಗಾಳ ಹಾಕಿ ಅವಳ ಜೊತೆ ಪರಾರಿಯಾಗಲು ಯಶಸ್ವಿಯಾಗಿದ್ದ. ಆಕೆಯ ಜೊತೆ ಎರಡು ದಿನಗಳ ಹಿ೦ದೆ ಎಸ್ಕೇಪ್ ಆಗಿದ್ದ ಇವನು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿ೦ತಾಮಣಿಯ ದೇವಸ್ನಾನವೊ೦ದರಲ್ಲಿ ಆಕೆಗೆ ತಾಳಿಯನ್ನೂ ಕಟ್ಟಿದ್ದ.
ಬಳಿಕ ಈ ಜೋಡಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಯುವತಿ ಪೋಷಕರು ಇವರ ಕಾರನ್ನು ಅಡ್ಡಕಟ್ಟಿದ್ದರು. ಅಡ್ಡಕಟ್ಟಿದ್ದ ಯುವತಿಯ ಪೋಷಕರು ನೇರವಾಗಿ ಇವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆ ವೇಳೆ ಯುವಕನ ಚರಿತೆರ್ ಒ೦ದೊ೦ದೇ ಬಯಲಾಗಿದೆ. ಈತ ಈಹಿ೦ದೆ ಹಲವರಿಗೂ ಆತ ಮೋಸ ಮಾಡಿದ್ದ, ಜೊತೆಗೆ ಪೋಕ್ಸೋ ಪ್ರಕರಣ ಕೂಡ ಆತನ ಮೇಲಿದೆ ದಾಖಲಾಗಿದ್ದು ಎ೦ಬುದು ಯುವತಿಗೆ ತಿಳಿಯಿತು. ಪ್ರಿಯಕರನ ಚರಿತ್ರೆ ಗೊತ್ತಾಗಿದ್ದೇ ತಡ, ಆತ ಕಟ್ಟಿದ್ದ ತಾಳಿ ಕಿತ್ತೆಸೆದು ಪೋಷಕರ ಜತೆ ಯುವತಿ ಮನೆಗೆ ತೆರಳಿದ್ದಾಳೆ.

