

ಗಂಡಿಬಾಗಿಲು; ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇಲ್ಲಿ ಹೊಸವರ್ಷ ಸಂಭ್ರಮಾಚರಣೆ, ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ-ನೆರೆಕರೆಯ ಗ್ರಾಮಸ್ಥರಿಂದ 13ನೇ ವರ್ಷದ ಸ್ನೇಹಭೋಜನ ಕಾರ್ಯಕ್ರಮವನ್ನು ದಿನಾಂಕ :01.01.2026ರಂದು ಆಚರಿಸಲಾಯಿತು. ಅನುಗ್ರಹ ಮೆಲೋಡಿಯಸ್ ಕಕ್ಕಿಂಜೆ ತಂಡದವರಿಂದ ಗಾನ ಸಂಗೀತ ಕಾರ್ಯಕ್ರಮ ಸುಗಮವಾಗಿ ನೆರವೇರಿತು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಯುತ ಡಾ.ಯು.ಸಿ.ಪೌಲೋಸ್ ರವರು ಹೊಸ ವರ್ಷಕ್ಕೆ ಶುಭಾಶಯಗಳನ್ನು ಹಾರೈಸಿದರು. ಸಿಯೋನ್ ಆಶ್ರಮ ನಿವಾಸಿಗಳಿಗೋಸ್ಕರ ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ ನೆರೆಕರೆಯ ಗ್ರಾಮಸ್ಥರು ಪ್ರತೀ ವರ್ಷ ಜನವರಿ ಒಂದರಂದು ಒಂದು ದಿನದ ಅನ್ನದಾನ ನೀಡುತ್ತಿದ್ದು, ಈ ಕಾರ್ಯಕ್ರಮದ ಮುಂದಾಳತ್ವವನ್ನು ಸಂಸ್ಥೆಯ ಹಿತೈಷಿಗಳಾದ ಶ್ರೀಯುತ ಜೋಸೆಫ್ ಪರುವಕಾರನ್ ಮತ್ತು ಶ್ರೀಯುತ ಡೆನ್ನಿಯವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಶ್ರೀಮತಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು.







