

ಡಿಸೆಂಬರ್ 31, 2025 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಸಂಜೆ ಪರಮ ಪ್ರಸಾದದ ಆರಾಧನೆ ಹಾಗೂ ದಿವ್ಯ ಬಲಿ ಪೂಜೆಯ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ದಿವ್ಯ ಬಲಿ ಪೂಜೆಯನ್ನು ಪ್ರಧಾನ ಯಾಜಕರಾಗಿ ಆಗಮಿಸಿದ ಬಸ್ರೂರು ಫಿಲಿಪ್ ನೇರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ. ಡ್ಯಾನ್ಸಿ ಮಾರ್ಟಿಸ್ ಅವರು ನೆರವೇರಿಸಿ ‘ಯೇಸುವಿನ ತಾಯಿ ಮೇರಿಮಾತೆ ಹಾಗೂ ಸಾಂಸಾರಿಕ ತಾಯಿಯ ಮಹತ್ವದ ಬಗ್ಗೆ ನೆರೆದಿದ್ದವರಿಗೆ ತಿಳಿಹೇಳಿದರು. ಹೊಸ ರ್ಷಕ್ಕೆ ಕಾಲಿಡುವ ಈ ಸಂರ್ಭದಲ್ಲಿ ಉಡುಪಿ ಧರ್ಮ ಪ್ರಾಂತ್ಯವು ನೀಡಿರುವ ಹೊಸ ಧ್ಯೇಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ, ನಮ್ಮಲ್ಲಿ ಯಾರಾದರೂ ಅವಶ್ಯಕತೆ ಹೊಂದಿದ್ದರೆ ಅವರಿಗೆ ಸ್ಪಂದಿಸೋಣ, ನಮ್ಮ ಸಮಾಜದಲ್ಲಿ ಯಾರೂ ಅವಶ್ಯಕತೆಯಿಂದ ವಂಚಿತರಾಗದಂತೆ ನೋಡಿಕೊಳ್ಳೋಣ’ ಎಂದು ಸಂದೇಶ ನೀಡಿದರು.
ಚರ್ಚಿನ ಧರ್ಮಗುರು ವಂ। ಫಾ. ಎಡ್ವಿನ್ ಡಿಸೋಜಾ ಬಲಿಪೂಜೆಯಲ್ಲಿ ಭಾಗಿಯಾಗಿ, ಶುಭ ಕೋರಿ ವಂದಿಸಿದರು.






















