

ಕುಂದಾಪುರ, ಜ.1.2026: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ2025 ರ ಸಂಜೆ, ಹೊಸ ವರ್ಷ 2026 ರ ಪ್ರಯುಕ್ತಕುಂದಾಪುರ ಚರ್ಚಿನಲ್ಲಿಪವಿತ್ರ ಬಲಿದಾನವನ್ನುಅರ್ಪಿಸಿ ಹೊಸ ವರ್ಷವನ್ನುಆಚರಿಸಲಾಯಿತು.
ಬಲಿದಾನದ ನೇತ್ರತ್ವವನ್ನುವಹಿಸಿಕೊಂಡ ತ್ರಾಸಿ ಡಾನ್ಬಾಸ್ಕೊಸಂಸ್ಥೆಯ ಆಡಳಿತಗಾರರಾದ ಧರ್ಮಗುರು ವಂ।ಅರ್ನಾಲ್ಡ್ ಮಥಾಯಸ್ “ನಮ್ಮ ಈ ಹೊಸ ವರ್ಷವನ್ನು ನಾವು ಮೇರಿ ಮಾತೆಗೆ ಸಮರ್ಪಿಸುತ್ತಿದ್ದೆವೆ, ಯೇಸು ಕ್ರಿಸ್ತರು ನಮಗೊಸ್ಕರ, ನಮ್ಮ ಮುಕ್ತಿಗೊಸ್ಕರ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದರು, ಅಂದರೆ ಯೇಸು ಕ್ರಿಸ್ತರು ದೈವತ್ಯ ಹಾಗೂ ಮನುಷತ್ವದ ಗುಣಗಳಿಂದ ವೀಶೆಷತ್ವವನ್ನು ಹೊಂದಿದವರಾಗಿದ್ದಾರೆ, ದೇವ ಪುತ್ರನಾದರೂ ಮಾತೆ ಮೇರಿಯ ಗರ್ಭದೊಳಗೆ ಮಾನವನಾಗಿ ಹುಟ್ಟಿದಕ್ಕೆ ಪವಿತ್ರ ಸಭೆಯು ಮೇರಿ ಮಾತೆ ಯೇಸುವಿನ ಮಾತೆ ಎಂದು ನಂಬುತ್ತದೆ. ಅದಕ್ಕಾಗಿ ಹೊಸ ವರ್ಷವನ್ನು ಮೇರಿ ಮಾತೆಗೆ ಸಮರ್ಪಿಸುತ್ತದೆ.ನಾವು ಹೇಗೆ ಜೀವಿಸಬೇಕೆಂದು ಮೇರಿ ಮಾತೆಯಿಂದ ಕಲಿಯೋಣ. ಹಾಗೇ ಅವರು 2025 ರಲ್ಲಿ ದೇವರು ನಮಗೆ ಮಾಡಿದ ಉಪಕಾರಗಳಿಗೆ ಕ್ರತ್ಝನ್ತೆ ಸಲ್ಲಿಸುವುದಕ್ಕೆ ಪವಿತ್ರ ಪ್ರಸಾದ ಆರಾದನೆಯನ್ನು ನಡೆಸಿಕೊಟ್ಟು, ನಮಗೆ ದೇವರು ಮಾಡಿದ ಉಪಕಾರಗಳಿಗೆ ಕ್ರತ್ಝನ್ತೆ ಸಲ್ಲಿಸಿದರೆ, ದೇವರು ನಮಗೆ ದಾರಳಾವಾಗಿ ಆಶಿರ್ವಾದಿಸುತ್ತಾರೆ’ ಎಂದುಸಂದೇಶ ನೀಡಿದರು.
ಪ್ರಧಾನ ಧರ್ಮಗುರು ಅ|ವಂ| ಪೌಲ್ ರೇಗೊ ಹೊಸ ವರ್ಷದ ಶುಭಾಷಯಗಳನ್ನುಕೋರಿ, ಮೇರಿ ಮಾತೆ ನಮಗೊಂದು ಆಶಿರ್ವಾದ, ಅದರಂತೆ ನಾವು ಇತರರಿಗೆ ಆಶಿರ್ವದಾಗಳಾಗೋಣ ಎಂದು ತಿಳಿಸಿ ವಂದಿಸಿದರು.
ಈಸಂದರ್ಭದಲ್ಲಿ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.






















































