

ಕುಂದಾಪುರ : ದಿನಾಂಕ : 24.12.2025ರ ಬುಧವಾರದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂತ ಮೇರಿ ಮತ್ತು ಹೋಲಿ ರೋಜರಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ಫಾ. ಪೌವ್ಲ್ ರೇಗೋರವರು ಮಾತನಾಡಿ ಕ್ರಿಸ್ಮಸ್ ಎಂದರೆ ಶಾಂತಿ, ಪ್ರೀತಿ ಮತ್ತು ಸಂತೋಷವನ್ನು ಸಾರುವ ಹಬ್ಬ, ಶಾಂತಿ ನಮ್ಮ ಹೃದಯದಲ್ಲಿರಬೇಕು, ಪ್ರೀತಿ ನಮ್ಮನ್ನು ನಾವು ಹೇಗೆ ಪ್ರೀತಿಸುತ್ತೇವೆಯೋ ಹಾಗೇ ಇತರರನ್ನು ಪ್ರೀತಿಸಬೇಕು, ಸಂತೋಷ ನಮ್ಮಲ್ಲಿ ಹಾಗೂ ಇತರರಲ್ಲಿ ಇರುವಂತೆ ಶ್ರಮಿಸಬೇಕೆಂದು ಸೌಹಾರ್ದಯುತ ಸಂದೇಶದೊಂದಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಷಿಕಾ ಸ್ವಾಗತಿಸಿ, ಅಪೇಕ್ಷಾ ಕಾರ್ಯಕ್ರಮ ನಿರೂಪಿಸಿ, ಲಾಸ್ಯ ಮತ್ತು ಪ್ರಣವ್ ವಂದಿಸಿದರು.




















