

ಕುಂದಾಪುರ, ಡಿ.19: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 18 ರಂದು ನೆಡಯಿತು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಹೋಲಿ ರೋಜರಿ ಚರ್ಚಿನ ಧರ್ಮಗುರು, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಪೌಲ್ ರೇಗೊ “ಮಕ್ಕಳಿಗೆ ಪ್ರೀತಿಯಿಂದ ಬೆಳೆಸಿರಿ, ಆದರೆ ಅತಿ ಮುದ್ದು ಮಾಡಬೇಡಿ. ಚಿಕ್ಕ ಮಕ್ಕಳು ಹಠ ಮಾಡುತ್ತಾರೆಂದು ಮೊಬಾಯ್ಲ್ ಅವರ ಕೈಯಲ್ಲಿ ಕೊಡಬೇಡಿ, ಮೊಬಾಯ್ಲ್ ಉಪಯೋಗಿಸುವಾಗ ವೀಕಿರಣಗಳು ಹೊರಸುಸುತ್ತವೆ, ಈ ವೀಕಿರಣ ಮಕ್ಕಳಿಗೆ ಬಹಳ ಅಪಾಯಕಾರಿ ಎಂದು ಹಿರಿಯರು ತಿಳಿದುಕೊಳ್ಳಬೇಕು, ಮಾತ ಪಿತರ ಜೀವನವೇ ಮಕ್ಕಳಿಗೆ ಸಂದೇಶವಾಗಿದೆ ಎಂದು ತಿಳಿದುಕೊಳ್ಳಿ’ ಎಂದು ಅವರು ಸಂದೇಶ ನೀಡಿದರು.ಮುಖ್ಯ ಅತಿಥಿಗಳಾದ ನವೀನ್ ಕುಮಾರ್ ಕೆ.“ನನ್ನ ಶಾಲಾ ದಿವಸವನ್ನು ಈ ಕ್ಯಾಂಪಸ್ ನಿಂದ ಆರಂಭಿಸಿದೆ, ಇಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಇಲ್ಲಿ ಆವತ್ತಿನ ಧರ್ಮಗುರುಗಳು, ಶಿಕ್ಷಕಿಯರಿಂದ ನನಗೆ ತುಂಬಾ ಪ್ರೀತಿ ಸಿಕ್ಕಿದೆ, ಅದನ್ನು ಮರೆಯಲಾರೆ, ಮಕ್ಕಳಿಗೆ ಮೊಬಾಯ್ಲ್ ನಿಂದ ದೂರವಿಡಬೇಕು’ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂತ ಮೇರಿಸ್ ಪಿ.ಯು. ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ, ಅಸುಂಪ್ತಾ ಲೋಬೊ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿ ಡಿಸೋಜಾ, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಶಿಕ್ಷಕಿ ನೀತಾ ಮೆಂಡೊನ್ಸಾ ಉಪಸ್ಥಿತರಿದ್ದು, ಅವರು ನಾನ ವಿಭಾಗದಲ್ಲಿ ವಿಜೇತರಾದ ಚಿಣ್ಣರಿಗೆ ಬಹುಮಾನಗಳನ್ನು ವಿತರಿಸಿದರು.
ವಾರ್ಷೀಕೋತ್ಸವದಲ್ಲಿ ಚಿಣ್ಣರು ಕೂಡ ನಾವು ದೂಡ್ಡ ಮಕ್ಕಳಿಕಿಂತ್ತ ಎನೂ ಕಡಿಮೆಯಿಲ್ಲ ಎಂಬಂತ್ತೆ, ನಿರೂಪಿಸಿ ಕುಣಿದು, ಕುಪ್ಪಳಿಸಿದವು, ಶಿಕ್ಷಕಿಯರೂ ಕೂಡ ನ್ರತ್ಯ ಮಾಡಿ ಮಕ್ಕಳಿಗೆ ಮನೋರಂಜನೆ ನೀಡಿದರು. ಚಿಣ್ಣರೇ ಸ್ವಾಗತ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.
ಕಿಂಡರ್ ಗಾರ್ಟನ್ ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾ ಲುವೀಸ್ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕಿ ವೀಣಾ ಡಿಸೋಜಾ ವಿಜೇತರ ಮಕ್ಕಳ ಹೆಸರನ್ನು ವಾಚಿಸಿದರು. ಶಿಕ್ಷಕಿ ರಿಚೇಲ್ ಡಿಸಿಲ್ವಾ ಮುಖ್ಯ ನಿರೂಪಣಾಗಾರರಾಗಿ ಕ್ರಾರ್ಯಕ್ರಮವನ್ನು ನಡೆಸಿಕೊಟ್ಟರು.










































































