
ಶ್ರೀನಿವಾಸಪುರ : ಶ್ರೀನಿವಾಸಪುರ –ಮುಳಬಾಗಿಲು ಮುಖ್ಯ ರಸ್ತೆಯ ಯದರೂರು ಸಮೀಪ ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಶ್ರೀನಿವಾಸಪುರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಯದರೂರು ಸಮೀಪ ಯುವಕರ ಗುಂಪೊಂದು ವೀಲಿಂಗ್ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಈ ಕುರಿತು ಮಾಹಿತಿ ಪಡೆದ ಶ್ರೀನಿವಾಸಪುರ ಠಾಣೆಯ ಪಿಎಸ್ಐ ಹೆಚ್. ಜಯರಾಮ್ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಮುನಿಗುರಪ್ಪ ಹಾಗೂ ಸಿಬ್ಬಂದಿ ಟಿ.ಎ. ನಾಗರಾಜ್, ಎಂ. ಆನಂದ್ ಕುಮಾರ್, ಸಂತೋಷ್ ಕುಮಾರ್, ರಮೇಶ್, ಮುರುಳಿ, ರಾಜೇಶ್ ಮತ್ತು ಪತ್ರಿಬಸಪ್ಪ ಅವರು ಕಾರ್ಯಾಚರಣೆ ನಡೆಸಿ, ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದರು.
ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ರೀತಿಯ ವಾಹನ ಚಾಲನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


