

ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯ ಆಯೋಜಿಸಿದ ರಾಷ್ಟ್ರಮಟ್ಟದ 69ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ 200 ಮೀ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದು ಶಾಲೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. 23.37 ಸೆಕೆಂಡಿನಲ್ಲಿ ಈ ಸಾಧನೆಗೈದ ಯುವರಾಜ್ ಸಿ ಬಿ ಎಸ್ ಇ ಪರವಾಗಿ ರಾಷ್ಟ್ರಮಟ್ಟದ ಈ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಮೊದಲ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯು ಡಿಸೆಂಬರ್ 1 ರಿಂದ 4 ರವರೆಗೆ ಮಧ್ಯಪ್ರದೇಶದ ಇಂದೋರ್ ನ ಎಮರಾಲ್ಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆಯಿತು. ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ ಅಲ್ಮೇಡ ಅವರು ಯುವರಾಜ್ ಅವರ ಈ ಅದ್ಭುತ ಸಾಧನೆಗಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದ ಪರವಾಗಿ ಅಭಿನಂದಿಸಿ, ಮುಂದಿನ ದಿನಗಳಿಗೂ ಇದೇ ರೀತಿಯ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.
St Aloysius Gonzaga Student Wins Gold at National School Games
Mangalur ; Yuvaraj D. Kunder of Class VIII, of St Aloysius Gonzaga School, has brought great honour to the institution by winning the Gold Medal in the 200m track event at the 69th National School Games Competition held from December 1 to 4 at Emerald International School, Indore, Madhya Pradesh. Making history for the school, Yuvaraj became the first student from St Aloysius Gonzaga School to represent the Central Board of Secondary Education (CBSE) at the School Games Federation of India (SGFI), a national level competition. He delivered an outstanding performance with an impressive timing of 23.37 seconds, securing the top position.
The Principal and staff of the school have congratulated Yuvaraj on this remarkable achievement and have appreciated his dedication, discipline, and hard work. His success stands as an inspiration to young athletes and reflects the school’s commitment to excellence in sports.

