

ಕುಂದಾಪುರ; ಎಂ ಐ ಟಿ ಕುಂದಾಪುರದ ಇನ್ಫಾರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಬೆಂಗಳೂರಿನ ನ್ಯೂ ಹೊರಿಜಾನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕಾಲೇಜಿನ ಗೌರವವನ್ನು ಹೆಚ್ಚಿಸುತ್ತಾರೆ.
ಆರ್. ನವೀನ್ ಪಾಟಿಲ್, ನೇತ್ರಾವತಿ, ಯಶಸ್ವಿನಿ, ನಿಹಾರಿಕಾ, ಮೇಘಶ್ರೀ ಮತ್ತು ಶಶಾಂಕ್ ಒಳಗೊಂಡ ತಂಡವು ತಮ್ಮ ಸೃಜನಶೀಲ ಚಿಂತನೆ, ನವೀನ ಕಲ್ಪನೆ ಹಾಗೂ ತಾಂತ್ರಿಕ ನೈಪುಣ್ಯದಿಂದ ತೀರ್ಪುಗಾರರನ್ನು ಮೆಚ್ಚಿಸಿ, ₹5000 ದೊಂದಿಗೆ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದೆ.
ವಿಭಾಗದ ಮುಖ್ಯಸ್ಥರಾದ ಡಾ. ಜೇ. ಪ್ರಕಾಶ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಟ್ಟ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಈ ಸಾಧನೆಗೆ ವಿದ್ಯಾರ್ಥಿಗಳನ್ನು ಮತ್ತು ಸಹಕಾರ ನೀಡಿದ ಎಲ್ಲ ಪ್ರಾಧ್ಯಾಪಕರನ್ನು ಅಭಿನಂದಿಸಿರುತ್ತಾರೆ.

