

ಕುಂದಾಪುರ,ನ.24: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತೃತ್ವ ಬಾಂಧವ್ಯ ದಿನವನ್ನು “ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.23 ರಂದು ನೆಡೆಯಿತು. ಭಾಗ್ಯವಂತೆ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆ ನೆಡಸಲಾಯಿತು.
ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಪರಮಪ್ರಸಾದದ ಆರಾಧನೆ ಮುಂದುವರೆಯಿತು. ಆರಾಧನೆಯ ನೇತ್ರತ್ವ ವಹಿಸಿದ ಮೂಲ್ಕಿ ಡಿವೈನ್ ಸೆಂಟರಿನ ಧರ್ಮಗುರು ವಂ।ಅನಿಲ್ ಕಿರಣ್ ಫೆರ್ನಾಂಡಿಸ್ ”ಇಂದು ಕುಂದಾಪುರ ಚರ್ಚಿನ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಭ್ರಾತೃತ್ವ ಬಾಂಧವ್ಯ ದಿನವನ್ನು ಆಚರಿಸುತ್ತೀರಿ, ರೋಜರಿ ಮಾತೆಗೆ ಸಮರ್ಪಿಸಿದ ಈ ಚರ್ಚಿಗೆ ಸುಧೀರ್ಘ ಇತಿಹಾಸವಿದೆ, (455 ವರ್ಷಗಳ) ಹಲವು ವರ್ಷಗಳಿಂದ ತೆರಾಲಿ ಪೂರ್ವಭಾವಿಯಾಗಿ ಭ್ರಾತೃತ್ವ ಬಾಂಧವ್ಯ ದಿನವನ್ನು ಆಚರಿಸುತ್ತೀರಿ, ಜೊತೆಗೆ ಈ ದಿನದಂದೇ ಕ್ರಿಸ್ತರಾಜನ ಹಬ್ಬ ಕೂಡ ಬರುತ್ತದೆ, ಯೇಸುಕ್ರಿಸ್ತರನ್ನು ರಾಜನೆಂದು ಕರೆಯುತ್ತಾರೆ. ಆದರೆ ಯೇಸುಕ್ರಿಸರು, ಈ ಪ್ರಪಂಚದ ರಾಜರಲ್ಲ, ಅವರು ಪರಲೋಕದ ರಾಜರು, ಅವರು ನಮಗಾಗಿ ಈ ಪ್ರಪಂಚದಲ್ಲಿ ಮಾನವಾನಾಗಿ ಜನಿಸಿ ನಮ್ಮ ಪಾಪಗಳಿಗಾಗಿ ಜೀವ ತೆತ್ತು, ನಮಗೆ ಪಾಪ ವಿಮೋಚನೆ ಮಾಡಿ ವಿಜಯರಾಜರಾದವರು. ಅವರು ಇಲ್ಲಿ ವಿಧೇಯತೆ, ಸತ್ಯ ನೀತಿ ಶಾಂತಿಯ ಸಮಾದಾನದ ದೂತರಾಗಿ ನಮ್ಮನ್ನು ತಿದ್ದಿ, ನಮ್ಮನ್ನು ದೇವಪ್ರಜೆಯನ್ನಾಗಿಸಿದವರು, ಅವರ ತತ್ವಗಳನ್ನು ಪಾಲಿಸಿ ಅವರಿಗೆ ನಾವು ಸಾಕ್ಸಿಯಾಗೋಣ, ಹೀಗೆ ನಾವು ಕ್ರಿಸ್ತರಾಜರ ರಾಜಪ್ರಜೆಗಳಾಗಿ ಜಿವಿಸೋಣ’ ಎಂದು ಸಂದೇಶ ನೀಡಿ ಪರಮ ಪ್ರಸಾದದ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯಲ್ಲಿ ಕುಂದಾಪುರ ರೋಜರಿ ಮಾತಾ ಇಗರ್ಜಿಯ ಧರ್ಮಗುರು ಅ|ವಂ।ಪೌಲ್ ರೇಗೊ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿ. ಸುಪ್ರಿಯಾ ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.

















































































































