

ಬಾರಕೂರು ; ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲೆಯ ಕನ್ನಡ ಸಂಘ ಮತ್ತು ಇಂಟರಾಕ್ಟ್ ಕ್ಲಬ್ ನ ಸಂಯೋಜನೆ ಯಲ್ಲಿ ಕಾರ್ಯಕ್ರಮ ನೆರವೇರಿತು. ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿರವರು ಅಧ್ಯಕ್ಷತೆ ವಹಿಸಿದ್ದರು.
ಆರೋಹಣ ಸಂಗೀತ ತರಭೇತಿ ಸಂಸ್ಥೆ ಬಾರಕೂರು ಇದರ ಮುಖ್ಯಸ್ಥ ರಾದ ಶ್ರೀ ರಾಜೇಶ ಶ್ಯಾನುಭಾಗ, ಶಾಲಾ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ಪ್ರೌಢ ಶಾಲಾ ಮೇಲ್ವಿಚಾರಕರಾದ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್, ವಿದ್ಯಾರ್ಥಿ ಮುಖಂಡ ಮಾಸ್ಟರ್ ಶ್ರೀಶ, ಆಡಳಿತ ಮಂಡಳಿಯ ಸದಸ್ಯರು,ಶಾಲೆಯ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು.
ಶಾಲೆಯ ಕನ್ನಡ ಶಿಕ್ಷಕಿ ಆಶಾಲತಾ ಮತ್ತು ವಿದ್ಯಾರ್ಥಿನಿ ಅನುಷಾ ಕನ್ನಡ ನಾಡು ನುಡಿಯ ಬಗ್ಗೆ ಮಾತುಗಳನ್ನಾಡಿದರು.. ಶಾಲಾ ವಿದ್ಯಾರ್ಥಿ ಗಳು ಕನ್ನಡ ಗೀತೆಗಳನ್ನು ಹಾಡಿದರು.ಆರೋಹಣ ಸಂಗೀತ ತರಬೇತಿ ಸಂಸ್ಥೆ ಬಾರಕೂರು ಇವರಿಂದ ಕನ್ನಡ ಗೀತೆಗಳ ಗಾನಾಮೃತ ಸಂಗೀತ ಕಾರ್ಯಕ್ರಮ ನೆರವೇರಿತು.
ವಿದ್ಯಾರ್ಥಿಗಳಾದ ಧರಿತ್ರಿ, ಅದಿತಿ, ಪ್ರಸ್ತುತಿ, ಶರಣ್ಯಮತ್ತು ದೀಕ್ಷಾ ಪ್ರಾರ್ಥಿಸಿದರು,ಖುಷಿ ಮತ್ತು ಸಹಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಅನ್ವೇಷಾ ಸ್ವಾಗತಿಸಿ,ಶಿವಾನಿ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.
ಶಿಕ್ಷಕರಾದ ಶ್ರೀ ನಾಗೇಂದ್ರ ಆಚಾರ್, ಶ್ರೀಮತಿ ಸುಜಾತ ಶೆಟ್ಟಿ, ಶ್ರೀಮತಿ ಸುವೇದ,ಮತ್ತು ಆಶಾಲತಾ ರವರು ಕಾರ್ಯಕ್ರಮ ವನ್ನು ಸಂಯೋಜನೆ ಮಾಡಿದರು.
Barkuru – Kannada Rajyotsava program at Sri Vidyesh Vidyamanya National English Medium School, Heradi – Barkuru

The Kannada Rajyotsava celebration was held at Shri Vidhyesha Vidyamanya National English Medium School, Heradi–Barkur, organized jointly by the school’s Kannada Sahithya Sangha and the Interact Club.
The programme was presided over by the school’s correspondent, Mr. Rajaram Shetty.
Mr. Rajesh Shanubhag, Head of Aarohana Music Training Institute, Barkur, Mrs. Likita Kotari,the school headmistress, Mrs. Brijith Gonsalves, high school section head,Student leader Master Shreesha, members of the management committee, teachers, and non-teaching staff were present on the occasion.
Kannada teacher Mrs. Ashalatha and student Anusha spoke about *
the richness of the Kannada land and language.
The school students sang beautiful Kannada songs.
A “Gaanamrutha” musical programme featuring Kannada songs was presented by Aarohana Music Training Institute, Barkur.
Students Dharitri, Aditi, Prasthuthi, Sharanya, and Deeksha offered the prayer. Khushi and Sahala compered the programme. Anvesha delivered the welcome speech, while Shivani proposed the vote of thanks.
Teaching, non-teaching staff, and students actively cooperated to make the event successful.
Teachers Mr. Nagendra Achar, Mrs. Sujatha Shetty, Mrs. Suveda, and Mrs. Ashalatha coordinated the programme.











