

ಜೆಮಿಮಾ ರೋಡ್ರಿಗಸ್ ಅಪ್ರತೀಮ ಸಾಹಸದಿಂದ ಭಾರತ ಫೈನಲ್ ನಲ್ಲಿ ಗೆದ್ದು ಇತಿಹಾಸ ಬರೆಯಲು ಸಜ್ಜಾಗಿದೆ. ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಗುರುವಾರ ನಡೆದ ಸೆಮಿಫೈನಲ್ನಲ್ಲಿ ಭಾರತ ಆಸ್ಟ್ರೇಲಿಯಾವನ್ನು 5 ವಿಕೆಟ್ಗಳಿಂದ ಸೋಲಿಸಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಫೈನಲ್ಗೆ ತಲುಪಿದೆ ಇದಕ್ಕೆ ಕಾರಣ ಜೆಮಿಮಾ ರೋಡ್ರಿಗಸ್ ಔಟಾಗದೆ ಅಮೂಲ್ಯ 127 ರನ್ ಗಳಿಸಿದ್ದು ಕಾರಣವಾಗಿದ್ದು, ಜೆಮಿಮಾ ರೋಡ್ರಿಗಸ್ ಬಹಳ ಜನಪ್ರಿಯತೆ ಪಡೆದುಕೊಂಡಿದ್ದಾರೆ
ಆಸ್ಟ್ರೇಲಿಯಾ ದೊಡ್ಡ ಮೊತ್ತ 338 ರನ್ಗಳಿಗೆ ಆಲೌಟ್ ಆದ ನಂತರ ನಿರಾಸೆ ಆಗಿತ್ತು. ಆದರೆ ಜೆಮಿಮಾ ರೋಡ್ರಿಗಸ್ 127 ಮತ್ತು ಹರ್ಮನ್ಪ್ರೀತ್ ಕೌರ್ ೮೯ ರನ್ ಹೊಡೆದು ಆತಿಥೇಯರು ಒಂಬತ್ತು ಎಸೆತಗಳು ಬಾಕಿ ಇರುವಾಗ ಗುರಿಯನ್ನು ಬೆನ್ನಟ್ಟಿದ ನಂತರ ಭಾರತವು ಇದುವರೆಗಿನ ಅತ್ಯಧಿಕ ರನ್ ಚೇಸ್ ಅನ್ನು ಪೂರ್ಣಗೊಳಿಸಿತು. ಇದೀಗ ಭಾನುವಾರ ನಡೆಯುವ ಪೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಹೋರಾಡಲು ಇಡೀ ಭಾರತ ಕಾತುರದಿಂದ ಕಾಯುವಂತಾಗಿದೆ.
ಜೆಮಿಮಾ ರೊಡ್ರಿಗಸ್ ಪರಿಚಯ
ಜೆಮಿಮಾ ರೊಡ್ರಿಗಸ್ ರವರು ಸೆಪ್ಟಂಬರ್ 15, 2000 ರಂದು ಮುಂಬೈಯಲ್ಲಿ ಜನಿಸಿದರು. ಇವರ ಪೂರ್ಣಹೆಸರು ಜೆಮಿಮಾ ಜೆಸ್ಸಿಕಾ ರೊಡ್ರಿಗಸ್, ಅವರನ್ನು ಹೆಚ್ಚಾಗಿ “ಮುಂಬೈ ಹುಡುಗಿ” ಎಂದು ವರ್ಣಿಸಲಾಗಿದ್ದರೂ, ಅವರ ಕುಟುಂಬವು ಮೂಲ ಕರ್ನಾಟಕದ ಮಂಗಳೂರು ಆಗಿದೆ. ಇವರ ತಾಯಿಯ ಹೆಸರು ಲವೀಟಾ ರಾಡ್ರಿಗಸ್. ಇವರ ತಂದೆ, ಇವಾನ್ ರೊಡ್ರಿಗಸ್ ತಮ್ಮ ಶಾಲೆಯಲ್ಲಿ ಜೂನಿಯರ್ ತರಬೇತುದಾರರಾಗಿದ್ದು, ಜೆಮಿಮಾ ತನ್ನ ಇಬ್ಬರು ಸಹೋದರರಾದ ಇನೋಚ್ ಮತ್ತು ಎಲಿಯೊಂದಿಗೆ ಮುಂಬೈನ ಬಾಂಡುಪ್ ಉಪನಗರದಲ್ಲಿ ಬೆಳೆದರು. ನಾಲ್ಕು ವರ್ಷದ ವಯಸ್ಸಿನಲ್ಲಿ, ಇವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಉತ್ತಮ ಕ್ರೀಡಾ ಸೌಕರ್ಯಗಳನ್ನು ಪಡೆಯಲು ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ನಗರದ ಮತ್ತೊಂದು ಕಡೆಗೆ ಸ್ಥಳಾಂತರಗೊಂಡರು. ಮತ್ತು ಇವರು ತಮ್ಮ ಸಹೋದರರಿಗೆ ಬೌಲಿಂಗ್ ಮಾಡುತ್ತ ಕ್ರಿಕೆಟ್ ಕಲಿಯಲಾರಂಭಿಸಿದರು. ಜೆಮಿಮಾರವರ ತಂದೆ, ಇವಾನ್, ಬಹಳ ಮೊದಲಿನಿಂದಲೇ ತರಬೇತಿ ನೀಡುತ್ತ ಬಂದು, ತಮ್ಮ ಶಾಲೆಯಲ್ಲಿ ಹುಡುಗಿಯರ ಕ್ರಿಕೆಟ್ ತಂಡವನ್ನು ಪ್ರಾರಂಭಿಸಿದರು. ಜೆಮಿಮಾ ಹಾಕಿ ಮತ್ತು ಕ್ರಿಕೆಟ್ ಎರಡನ್ನೂ ಆಡುತಿದ್ದರು.
ಜೆಮಿಮಾ ರೊಡ್ರಿಗಸ್ ರವರು ಮುಂಬೈನ ಸೇಂಟ್ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ರಿಜ್ವಿ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಲ್ಲಿ ತಮ್ಮ ಅಧ್ಯಯನ ಮುಂದುವರಿಸಿದ್ದರು.
ವೃತ್ತಿ ಜೀವನ – ಪ್ರಥಮ ದರ್ಜೆ ಕ್ರಿಕೆಟ್
ಜೆಮಿಮಾ ರೊಡ್ರಿಗಸ್ರನ್ನು ಮಹಾರಾಷ್ಟ್ರ ಅಂಡರ್-17 ಹಾಗು ಅಂಡರ್-19 ಹಾಕಿ ತಂಡಗಳಿಗೆ ಆಯ್ಕೆಯಾಗಿದ್ದರು. 2012-13ರಲ್ಲಿ ಇವರು ತಮ್ಮ 12 ವರ್ಷ 7 ತಿಂಗಳಿನ ವಯಸ್ಸಿನಲ್ಲೆ ಅಂಡರ್-19 ರ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ನಂತರ ತಮ್ಮ 13 ನೇ ವಯಸ್ಸಿನಲ್ಲೆ ರಾಜ್ಯ 19- ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.
50 ಓವರ್ ಕ್ರಿಕೆಟ್ ಪಂದ್ಯಗಳಲ್ಲಿ ಸ್ಮರ್ತಿ ಮಂದನ ನಂತರ ದ್ವಿಶತಕವನ್ನು ದಾಖಲಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆ ರೊಡ್ರಿಗಸ್ರವರದು. ಇವರು 1013 ರ ನವೆಂಬರ್ನಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ಔರಂಗಾಬಾದ್ನಲ್ಲಿ ನಡೆದ ಪಂದ್ಯದಲ್ಲಿ 162 ಎಸೆತಗಳಲ್ಲಿ 202 ರನ್ ಬಾರಿಸಿದರು. ಇದರಲ್ಲಿ 21 ಬೌಂಡರಿಗಳನ್ನು ಒಳಗೊಂಡಿತ್ತು. ಈ ಪಂದ್ಯದ ಮೊದಲು, ಇವರು ಗುಜರಾತ್ ವಿರುದ್ಧ ನಡೆದ ಅಂಡರ್ 19 ಕ್ರಿಕೆಟ್ ಪಂದ್ಯಾವಳಿಯಲ್ಲಿ 142 ಎಸೆತಗಳಲ್ಲಿ 178 ರನ್ ಬಾರಿಸಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್
ಫೆಭ್ರವರಿ 13, 2018 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-20 ಪಂದ್ಯದ ಮೂಲಕ ಜೆಮಿಮಾ ರೊಡ್ರಿಗಸ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಮಾರ್ಚ್ 12, 2018 ರಲ್ಲಿ ವಡೋದರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.
ಚಿಕ್ಕಂದಿನಿಂದಲೇ ಕ್ರಿಕೆಟ್ ಆಡುತ್ತೀರುವ ಜೆಮಿಮಾ ರೊಡ್ರಿಗಸ್ ಬಹಳ ಏಳು ಬೀಳು ಅನುಭವನ್ನು ಪಡೆದಿದ್ದಾರೆ. ಉತ್ತಮ ಫಾರ್ಮನಲ್ಲಿ ಇದ್ದರು ರಾಜಕೀಯ ಧರ್ಮದಿಂದಾಗಿ ವಂಚನೆಗೆ ಒಳಗಾಗಿದ್ದಾಳೆ. ಇವರ ತಂದೆಯ ಮೇಲೆ ಮತಾಂತರದ ಸುಳ್ಳು ಆರೋಪ ಹೊರಿಸಿ ಇವರ ಹೆಸರನ್ನು ಕೆಡಿಸುವ ಪ್ರಯತ್ನ ನಡೆದಿದಿತ್ತು. ಇದರಿಂದಾಗಿ ಇಡೀ ಕುಟುಂಬ ಅವಮಾನ ಮತ್ತು ದುಖದಲ್ಲಿತ್ತು. ಇದೀಗ ಆರೋಪ ಸುಳ್ಳು ಎಂದು ಸಾಬಿತಾಗಿದೆ. ಅಲ್ಲದೆ ನಿನ್ನೆ ದಿನ ಅಮೂಲ್ಯ 127 ರನ್ ಹೊಡೆದು ಆಸ್ಟ್ರೇಲಿಯವನ್ನು 5 ವಿಕೆಟ್ಗಳಿಂದ ಸೋಲಿಸಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಫೈನಲ್ಗೆ ತಲುಪಲು ಕಾರಣಕರ್ತರಾಗಿ ಅಪಾರ ಜನ ಮನ್ನಣೆ ಪಡೆದು ಅವರ ಇಡೀ ಕುಟುಂಬ ಸಂತೋಷ ಪಡುತ್ತಿದೆ ಅಲ್ಲದೆ ಇಡೀ ಭಾರತ ಸಂತೋಷ ಪಡುವಂತೆ ಮಾಡಿದ ಜೆಮಿಮಾ ರೊಡ್ರಿಗಸ್ಳಿಗೆ ಮುಂದೆ ಕ್ರಿಕೆಟನಲ್ಲಿಉತ್ತಮ ಭವಿಸ್ಯವನ್ನು ಜನನುಡಿ ಸುದ್ದಿ ಸಂಸ್ಥೆ ಹಾರೈಸುತ್ತದೆ.










