

ಬೈಂದೂರು; ಕರ್ನಾಟಕ ಪ್ರಾಂತ್ಯದ ಜೆಜ್ವಿತ್ ಸಭಾದಿಂದ ಯಾಜಕ ತರಬೇತಿಯ ಬಳಿಕ ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಉಪಯಾಜಕರಾಗಿ ಸೇವೆ ಸಲ್ಲಿಸಿದ್ದ ವಂ। ಪೃಥ್ವಿ ರೊಡ್ರಿಗಸ್ ಅವರಿಗೆ ಇತ್ತೀಚಿಗೆ ಮಂಗಳೂರಿನಲ್ಲಿ ಗುರು ದೀಕ್ಷೆ ಲಭಿಸಿತ್ತು. ಅವರು ದೀಕ್ಷೆ ಬಳಿಕ ಬೈಂದೂರು ಚರ್ಚಿಗೆ ಆಗಮಿಸಿ ಪ್ರಥಮ ಬಲಿದಾನವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಬೈಂಬೈಂದೂರಿನ ಹೋಲಿಕ್ರಾಸ್ ಚರ್ಚಿನ ಕ್ರೈಸ್ತ ಬಾಂಧವರ ಪರವಾಗಿ ಚರ್ಚಿನ ನ ಧರ್ಮಗುರು ವಂ।ವಿನ್ಸೆಂಟ್ ಕುವೆಲ್ಲೊ ಅವರನ್ನು ಸನ್ಮಾಸಿದರು. ವಂ। ಪೃಥ್ವಿ ರೊಡ್ರಿಗಸ್ ರವರು ಮುಂದಿನ ಎಪ್ರಿಲ್ ತಿಂಗಳ ತನಕ ಬೈಂದೂರಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ.





