

ಕುಂದಾಪುರ; ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ವತಿಯಿಂದ ರೆಸ್ಟ್ ಕೊಡರ್ ಅಕಾಡೆಮಿಯ ಸಹಯೋಗದಲ್ಲಿ “ಎಂ ಇ ಆರ್ ಎನ್ ಸ್ಟಾಕ್ ” ವಿಷಯದ ಬಗ್ಗೆ ಎರಡು ದಿನದ ಕಾರ್ಯಾಗಾರ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಯ್ಯದ್ ಇಮ್ರಾನ್, ಸೀನಿಯರ್ ಸಾಫ್ಟ್ ವೇರ್ ಡೆವೆಲಪರ್, ರೆಸ್ಟ್ ಕೊಡರ್ ಅಕಾಡೆಮಿ ಆಗಮಿಸಿದ್ದರು. ಇದೆ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ದಾರ್ಥ ಜೆ ಶೆಟ್ಟಿ , ಪ್ರಾಚಾರ್ಯರಾದ ಡಾ. ರಾಮಕೃಷ್ಣ ಹೆಗಡೆ, ವಿಭಾಗದ ಮುಖ್ಯಸ್ಥರಾದ ಪ್ರೊ. ಮುರಳೀಧರ ಬಿ ಕೆ, ಕಾರ್ಯಕ್ರಮದ ಸಂಚಾಲಕರಾದ ಡಾ. ಮಂಜುನಾಥ ಲಮಾಣಿ , ಪ್ಲೇಸ್ಮೆಂಟ್ ಡೀನ್ ಡಾ. ಅಣ್ಣಾಮಲೈ ಹಾಗು ಪ್ಲೇಸ್ಮೆಂಟ್ ಆಫೀಸರ್ ಶ್ರೀ ಪ್ರಸಾದ್ ಸಮ್ಮುಖದಲ್ಲಿ ಎಂ ಐ ಟಿ ಕೆ ರೆಸ್ಟ್ ಕೊಡರ್ ಅಕಾಡೆಮಿಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು.

