

ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಭಾಗ್ಯವಂತೆ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 455ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಮತ್ತು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ತಾರೀಖಿನ ಲೆಕ್ಕದ ಪ್ರಕಾರ ನಡೆದ ಭಾಗ್ಯವಂತೆ ರೊಜರಿ ಮಾತೆಯ ಹಬ್ಬದ ಬಲಿದಾನವನ್ನು. ಕೊಟೇಶ್ವರ ಚರ್ಚಿನ ಧರ್ಮಗುರು, ಕಟ್ಕೆರೆ ಬಾಲಾಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ।ಪ್ರವೀಣ್ ಪಿಂಟೊ ಅರ್ಪಿಸಿ ‘ರೊಜರಿ ಮಾತೆಯ ಶಕ್ತಿ ಅಗಾಧವಾಗಿದೆ. ಅವಳಿಗೆ ವಿಜಯದ ರಾಣಿ ಎನ್ನುತ್ತಾರೆ, ಇಟೆಲಿಯಲ್ಲಿ 1520 ರಲ್ಲಿ ಕ್ರೈಸ್ತರ ಮೇಲೆ, ಕ್ರೈಸ್ತ ವಿರೋಧಿಗಳು ಯುದ್ದ ಸಾರಿದರು, ವೈರಿಗಳ ಸೈನ್ಯ ಬಹಳ ದೊಡ್ಡದಾಗಿತು, ಸಮುದ್ರ ಯುದ್ದವಾದಾಗ, ಇಟೆಲಿದು ಸಣ್ಣ ಸೈನ್ಯವಾಗಿತ್ತು, ಹವಮಾನವೂ ಇವರಿಗೆ ಪೂರಕವಾಗಿ ಇರಲಿಲ್ಲ, ಆವಾಗ ಪೋಪ್ ಸ್ವಾಮಿ ಹಾಗೂ ಅಲ್ಲಿನ ರಾಜ ರೋಜರಿ ಮಾತೆ ಜಪ ಪಟಿಸಲು ಕೋರಿಕೊಳ್ಳುತ್ತಾರೆ, ಜನರೆಲ್ಲರೂ ಜಪ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ, ಅವಾಗ ಸಮುದ್ರದ ಗಾಳಿ ಕ್ರೈಸ್ತರಿಗೆ ಪೂರಕವಾಗಿ ಬೀಸಿ, ಕ್ರೈಸ್ತರಿಗೆ ಜಯ ಸಲ್ಲುತ್ತೆ, ಯುದ್ದದ ಸೇನಾಪತಿ, ನಮ್ಮ ಯೋಧರ ಬಲದಿಂದ ನಾವು ಗೆಲುವು ಪಡೆದದಲ್ಲ, ರೋಜರಿ ಮಾತೆಯೇ ನಮಗೆ ಜಯ ತಂದು ಕೋಟ್ಟಿದ್ದು ಅಂತಾ ಸಾರುತ್ತಾರೆ, ರೋಜರಿ ಮಾತೆಯಲ್ಲಿ ಅಷ್ಟು ಶಕ್ತಿ ಇದೆ ಎಂದು ತಿಳಿದು ಬಂದು, ಇವತ್ತು ಜಗತ್ತಿನಾದ್ಯಂತ ರೋಜರಿ ಜಪವನ್ನು ಮಾಡುತ್ತಾರೆ, ಜಪ ಮಾಲೆ ಒಂದು ಪವಿತ್ರವಾದ ಅಸ್ತ್ರ ನಾವು ನಿತ್ಯ ಕುಟುಂಬ ಕೂಡಿ ಜಪ ಮಾಡಬೇಕು. ನದಿಯಲ್ಲಿ ಪ್ರಯಾಣಿಸುತಿದ್ದಾಗ, ನಮ್ಮ ದೋಣಿ ಬಿರುಗಾಳಿಗೆ ಸಿಕ್ಕಿ, ದೋಣಿ ಮಗುಚಿತು, ನಾನು ನೀಅರಲ್ಲಿ ಬಿದ್ದೆ, ಮುಳುಗುತಿದ್ದ ನನ್ನನ್ನು ಜಪಮಾಲೆ ರಕ್ಷಿಸಿದೆ, ಇತರರು ಇಜಿ ಪಾರಾದರು, ನನಗೆ ಇಜು ಬರುತಿರಲಿಲ್ಲ, ಆದರೆ ನನ್ನ ಜಪ ಮಾಲೆ, ನಾನು ಪಯಣಿಸುತಿದ್ದ ದೋಣಿಗೆ ಸಿಲುಕಿತು, ಅದನ್ನು ನಾನು ಹಿಡಿದುಕೊಂಡು ಮುಳಗದ ಹಾಗೆ ನೋಡಿಕೊಂಡೆ, ನಂತರ ಬೇರೆಯವರು ಹುಡುಕಿಕೊಂಡು ಬಂದು ನನ್ನನ್ನು ರಕ್ಷಿಸಿದರು. ರೋಜರಿ ಮಾತೆ ಕರುಣಾ ಮಯಿ “ರೋಜರಿ ಮಾತೆ ಪ್ರಾರ್ಥನೆ ಮಾಡಲು ಕರೆ ಕೊಟ್ಟಿದ್ದಾಳೆ’ ರೋಜರಿ ಮಾತಾ ಜಪ ಒಂದು ಅತ್ಯುತ್ತಮ ಪ್ರಾರ್ಥನೆ’ ತಿಳಿಸಿದರು.
455 ವರ್ಷಗಳ ಐತಿಹಾಸಿಕ ಇತಿಹಾಸವುಳ್ಳು, ಹಲವು ಚರ್ಚುಗಳ ಮೂಲ ಚರ್ಚ್ ಆಗಿರುವ ಭಾಗ್ಯವಂತೆ ರೊಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಬಲಿದಾನದಲ್ಲಿ ಭಾಗಿಯಾಗಿ, ಶುಭ ಕೋರಿದರು. ಅತಿಥಿ ಗುರುಗಳಾಗಿ ಕುಂದಾಪುರದವರೆ ಆದ ಇಟೆಲಿಯಲ್ಲಿ ಸೇವೆ ನೀಡುತ್ತೀರುವ ಧರ್ಮಗುರು ವಂ।ಮನೋಜ್ ಬ್ರಗಾಂಜಾ ಬಲಿದಾನದಲ್ಲಿ ಪಾಲ್ಗೊಂಡರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಭಕ್ತರಿಗೆ ಉಪಹಾರವನ್ನು ನೀಡಲಾಯಿತು.








































































