

ಹಂಗಳೂರು;14.09.2025 ರಂದು ಸಂತ ಪಿಯುಸ್ 10ನೇ ಭಕ್ತಿನಾಥರ ಇಗರ್ಜಿಯಲ್ಲಿ ಸೃಷ್ಟಿ ಮಹಾಸಂಘ ಹಾಗೂ ಸ್ತ್ರೀ ಆಯೋಗದ ಮುಂದಾಳತ್ವದಲ್ಲಿ ತಾಯಂದಿರ ದಿನವನ್ನು ಆಚರಿಸಲಾಯಿತು.
ಪಿಯುಸ್ ನಗರ್ ಚರ್ಚಿನ ಗುರುಗಳಾದ ವಂದನಿಯ ಫಾದರ್ ಆಲ್ಬರ್ಟ್ ಕ್ರಾಸ್ತಾರವರು ಬಲಿಪೂಜೆಯನ್ನು ನೆರವೇರಿಸಿದರು. ಬಲಿಪೂಜೆಯಲ್ಲಿ ಗುರುಗಳು ಎಲ್ಲಾ ತಾಯಂದಿರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.
ಬಳಿಕ ತಾಯಿಂದಿರ ಸಹಮಿಲನವು ಇಗರ್ಜಿಯ ಮುಂಭಾಗದಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ತಾಯಿಯಂದಿರ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಪಿಯುಸ್ ಹತ್ತನೆಯ ಇಗರ್ಜಿಯ ಧರ್ಮಗುರುಗಳು ವಂದನಿಯ ಆಲ್ಬರ್ಟ್ ಕ್ರಾಸ್ತರವರು ವಹಿಸಿ ತಾಯಿಯಂದಿರಿಗೆ ಹಿತನುಡಿಯ ಮಾತುಗಳು .ಮಕ್ಕಳಿಗೆ ಬೆಳೆಸಿ.ಪ್ರೀತಿಕೊಡಿ.ಮಕ್ಕಳು ಕೇಳ್ತಾರೆ ಅಂತಾ ಎಲ್ಲಾವನ್ನು ತಂದುಕೊಡಬೇಡಿ. ಏನು ಅಗತ್ಯವಿದೆ ಆಲೋಚನೆ ಮಾಡಿ ಕೊಡಿರಿ .ಆವಾಗ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ತಾಯಿಯಿಂದಿರಿಗೆ ಹೇಳಿದರು.
ಪ್ರಧಾನ ಭಾಷಣವನ್ನು ಮಾಡಿದ ಆಶಾ ನಿರ್ಮಲಾರವರು ಹಿಂದಿನ ಕಾಲದ ತಾಯಿಂದಿರು ಹಾಗೂ ಇಂದಿನ ಕಾಲದ ತಾಯಿಂದಿರು ತಮ್ಮ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಿದ್ದರು. ತಾಯ್ತನದ ಹಾದಿಯಲ್ಲಿ ಅವರು ಎದುರಿಸುತ್ತಿರುವ ಸವಾಲುಗಳೇನು? ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಎಲ್ಲಾ ತಾಯಂದಿರಿಗೆ ತಾಯಿಂದಿರ ದಿನದ ಶುಭಾಶಯಗಳನ್ನು ಕೋರಿದ್ದರು.
ಪ್ರಧಾನ ಭಾಷಣಕಾರರಾದ ಆಶಾ ನಿರ್ಮಲಾರವರು ಹಿಂದಿನ ಕಾಲದ ತಾಯಿಂದಿರು ಹಾಗೂ ಇಂದಿನ ಕಾಲದ ತಾಯಿಂದಿರು ತಮ್ಮ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಿದ್ದರು. ತಾಯ್ತನದ ಹಾದಿಯಲ್ಲಿ ಅವರು ಎದುರಿಸುತ್ತಿರುವ ಸವಾಲುಗಳೇನು? ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ನಾವೆಲ್ಲರು ತಾಯಿಯ ಗರ್ಭದಿಂದ ಜನ್ಮತಾಳಿದ್ದೇವೆ ಈ ಶಕ್ತಿ ಇರುವುದು ಪ್ರಪಂಚದಲ್ಲಿ ತಾಯಿಗೆ ಅಲ್ಲದೆ ಮತ್ತ್ಯಾರಿಗೂ ಸಾಧ್ಯವಿಲ್ಲ . ಒಂಬತ್ತು ತಿಂಗಳು ಹೊತ್ತು ಪ್ರ ಸವ ವೇದನೆಯನ್ನು ಅನುಭವಿಸಿ ಈ ಭುಮಿಗೆ ತರುತ್ತಾಳೆ.ಪ್ರೀತಿ ಪ್ರೇಮ ಮಮತೆಯಿಂದ ತನ್ನ ಮಗುವನ್ನು ಬೆಳೆಸುತ್ತಾಳೆ.ತನಗೆ ಕಷ್ಟವಾದರೂ ತನ್ನ ಮಕ್ಕಳಿಗೆ ಯಾವುದೇ ಕಷ್ಟಕಾರ್ಯ್ಪಣ್ಯಗಳಿಂದ ಕಾಪಾಡುತ್ತಾಳೆ.ನೀವು ತಾಯಿಯಂದಿರು ನಿಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಎಲ್ಲಾವನ್ನು ಮೆಟ್ಟಿ ನಿಂತು ನಿಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಪ್ರಯತ್ನ ಮಾಡಿರಿ ಎಲ್ಲಾ ತಾಯಂದಿರಿಗೆ ತಾಯಿಂದಿರ ದಿನದ ಶುಭಾಶಯಗಳನ್ನು ಕೋರಿದ್ದರು.
ಸಂತ ಪಿಯುಸ್ ಇಗರ್ಜಿಯ ಗಾಯನಾಮಂಡಳಿ ಮಕ್ಕಳು ತಾಯಿಯ ಬಗ್ಗೆ “ಆವಯ್ ತಿ ಆವಯ್” ಒಂದು ಪದ್ಯವನ್ನು ಹಾಡಿದರು.ತಾಯಿಯಂದಿರಿಗೆ ಆಟಗಳನ್ನು ಆಡಿ ಸಲಾಯಿತು. ಅತಿಥಿಗಳಾಗಿ, ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಜೇಮ್ಸ್ ಡಿಮೆಲ್ಲೊ , ಕಾರ್ಯದರ್ಶಿ ರೇಶ್ಮಾ ಡಿಸೋಜಾ, 20 ಆಯೋಗದ ಸಂಚಾಲಕಿ ಲೀನಾ ತಾವ್ರೊ, ಸ್ಥಳಿಯ ಕೊನ್ವೆಂಟಿನ ಧರ್ಮ ಭಗಿನಿಯಾರದ ಸಿ.ವೆರೊನಿಕಾ ಮಿನೇಜಸ್, ಸೈಂಟ್ ಪಿಯುಸ್ ಶಾಲೆಯ ಮುಖ್ಯೋಪಾಧ್ಯೀನಿ ಸಿ.ಶಾಂತಾಂ ಕಾಂಬ್ಳಿ ಉಪಸ್ಥತರಿದ್ದರು. ಸೃಷ್ಟಿ ಮಹಾ ಸಂಘದ ಅಧ್ಯಕ್ಷೆ ಬೆನೆಡಿಕ್ಟಾ ಸ್ವಾಗತಿಸಿದರು. ಕಾರ್ಯದರ್ಶಿ ಡೈಝಿ ಡಿಸೋಜಾ ವಂದಿಸಿದರು,ಎವ್ಲಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.






































