

ಪಡುಕೋಣೆ 8.9.2025, ರಂದು ದೇವರ ಅನುಗ್ರಹದಿಂದ ಜನ್ಮ ಪಾಪವಿಲ್ಲದೇ ಜನಿಸಿದ “ಮಹಾ ಮಾತೆ ಮರಿಯಮ್ಮ” ನ ಜನುಮದಿನವನ್ನು ವೈಭವದಿಂದ ಸಂತ ಅಂತೋನಿ ಚರ್ಚಿನಲ್ಲಿ ಆಚರಿಸಲಾಯಿತು.
ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊ,ಅತಿಥಿಗಳಾಗಿ,ದಿವ್ಯ ಬಲಿಪೂಜೆಗೆ ಆಗಮಿಸಿದ, ವಂದನೀಯ ಫಾ! ರೊಬರ್ಟ್ ವಿನ್ಸೆಂಟ್ ಕ್ರಾಸ್ತಾ, ವಂದನೀಯ ಫಾ! ಮ್ಯಾಕ್ಸಿಮ್ ಡಿ’ಸೋಜ ಹಾಗೂ ಮಾತೆ ಮರಿಯಮ್ಮನ ಭಕ್ತರೆಲ್ಲರೂ ಸೇರಿ ಸಂಪ್ರದಾಯದಂತೆ ಬಾಲ ಮರಿಯ ಮಾತೆಯ ಪುಥಳಿಗೆ ಹೂವುಗಳ ಅರ್ಪಣೆ ಮಾಡಿ, ಹೊಸ ಫಲದ ಬತ್ತದ ತೆನೆಗಳನ್ನು ಗುರುಗಳು ಆಶೀರ್ವಾದಿಸಿ,ಮೆರವಣಿಗೆಯ ಮೂಲಕ ಚರ್ಚಿನ ಒಳಗಡೆ ಪ್ರವೇಶಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು.
ಮರಿಯಳ ವಿಷಯವಾಗಿ ಭಕ್ತರ ಮನಸ್ಸಿಗೆ ಅಚ್ಚಳಿಯದೇ ಉಳಿಯುವ ಪ್ರಸಂಗವನ್ನು ವಂದನೀಯ ಫಾ! ವಿನ್ಸೆಂಟ್ ರೊಬರ್ಟ್
ಕ್ರಾಸ್ತಾರವರು ನೀಡಿದರು. ಹೀಗೆ ಚರ್ಚಿನಲ್ಲಿ ಬಲಿ ಪೂಜೆ ಅರ್ಪಣೆ, ವಿಧಿ ನಿಯಮಗಳು ಗುರುಗಳಾ ಆಶೀರ್ವಾದೊಂದಿಗೆ ಮುಗಿದ ಬಳಿಕ ಎಲ್ಲರೂ ಹೊರಗಿನ ಚರ್ಚಿನ ವಠಾರದಲ್ಲಿ ತುಂಬಾ ಆನಂದದಿಂದ ಒಬ್ಬರಿಗೊಬ್ಬರು ಶುಭಾಶಯವನ್ನು ಕೋರುತ್ತಾ ತಮ್ಮ ಹಬ್ಬವಾದ ಮರಿಯಮ್ಮನ ಜನುಮದಿನದ ಸವಿಯನ್ನು ಸೆಳೆದರು.






