

ಖ್ಯಾತ ಪತ್ರಕರ್ತೆ, ಜನಪರ ಹೋರಾಟಗಾರ್ತಿ ಹಾಗೂ ಪ್ರಗತಿಪರ ಬರಹಗಾರ್ತಿ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಎಂಟು ವರ್ಷಗಳು ತುಂಬುತ್ತಿರುವ ಪ್ರಯುಕ್ತವಾಗಿ, ಈ ಬಾರಿ ಸೆಪ್ಟೆಂಬರ್ 05 ಶುಕ್ರವಾರ ಸಂಜೆ 6.00 ಗಂಟೆಗೆ, ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ “ಗೌರಿ ನೆನಪು” ಕಾರ್ಯಕ್ರಮವನ್ನು “ಸಹಬಾಳ್ವೆ ಕುಂದಾಪುರ” ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಅವರನ್ನು ಆತ್ಮೀಯವಾಗಿ ನೆನೆಸಿಕೊಳ್ಳಲಾಗುವುದು. ಅವರ ಬರಹ, ಅವರ ಹೋರಾಟ ಹಾಗೂ ಅವರ ಜನಪರ ಸಂದೇಶವನ್ನು ಚರ್ಚಿಸುವ ವೇದಿಕೆಯಾಗಲಿದೆ. ಕಾರ್ಯಕ್ರಮದಲ್ಲಿ ಗೌರಿಯ ಓದುಗ ಅಭಿಮಾನಿಗಳು, ಸಮಾನ ಮನಸ್ಕರು, ಸಮಾಜಮುಖಿ ಚಿಂತಕರು ಮತ್ತು ಸಮಾನ ಮನಸ್ಕ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮದ ಸಂಘಟಕರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.ಗೌರಿ ಲಂಕೇಶ್ ಅವರ ನೆನಪು, ಅವರ ಧೈರ್ಯ ಮತ್ತು ಅವರ ಮಾನವೀಯ ಮೌಲ್ಯಗಳು ನಮ್ಮ ಸಮಾಜಕ್ಕೆ ದಿಕ್ಕು ತೋರಿಸುವ ಬೆಳಕಾಗಿ ಮುಂದುವರಿಯಲಿ ಎಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

