

ಕುಂದಾಪುರ; ಆಗಸ್ಟ್ 30, 2025 ರಂದು ಬೆಂಗಳೂರಿನಲ್ಲಿ ನಡೆದ 4 ನೇ ದಕ್ಷಿಣ ಭಾರತ ಕರಾಟೆ ಚಾಂಪಿಯನ್ಶಿಪ್ 2025 ರಲ್ಲಿ ಕಟಾ ಮತ್ತು ಕುಮಿಟೆಯಲ್ಲಿ ಕುಂದಾಪುರದ ಅರ್ನಾನ್ ಡಿ’ಆಲ್ಮೇಡಾ ಚಿನ್ನದ ಪದಕ ಗೆದ್ದಿದ್ದಾನೆ. ಅವನು ಸಬ್ ಜೂನಿಯರ್ 11 ವರ್ಷ -40 ಕೆಜಿ ವಿಭಾಗದಲ್ಲಿ ಸ್ಫರ್ಧಿಸಿ ಪದಕ ಪಡೆದಿದ್ದಾನೆ. ಇವನು ಕುಂದಾಪುರದ ವಿಲ್ಸನ್ ಮತ್ತು ಜ್ಯೋತಿ ಡಿಅಲ್ಮೇಡ ಅವರ ಪುತ್ರನಾಗಿದ್ದಾನೆ. ಎಚ್ಎಂಎಂ ಇಂಗ್ಲಿಷ್ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.






