

ಶ್ರೀನಿವಾಸಪುರ : ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟಹವ್ಯಾಸಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯ ಮೂಲಕ ದೇಶದ ಘನತೆ ಗೌರವವನ್ನು ಕಾಪಾಡುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರೆನೀಡಿದರು.
ಪಟ್ಟಣದ ಅಮಾನಿಕರೆ ಕ್ರೀಡಾಂಗಣದಲ್ಲಿ ಶನಿವಾರ ಪ್ರಾಥಮಿಕ, ಪ್ರೌಡಶಾಲೆಗಳ ತಾಲೂಕು ಮಟ್ಟದ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲು, ಗೆಲವು ಎರಡನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸುತ್ತಾ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಮನಸ್ಸು ಉಲ್ಲಾಸವಾಗಿ ,ಏಕಾಗ್ರತೆಯು ಬೆಳೆಯುತ್ತದೆ ಎಂದು ತಿಳಿಸಿದರು.
ಅಮಾನಿಕರೆಯು ಸುಮಾರು 50 ರಿಂದ 60 ಎಕರೆ ಇದ್ದು, ಪಟ್ಟಣಕ್ಕೆ ನೀರು ಸರಬಾರಜು ಮಾಡಲು ಲಕ್ಷ್ಮೀಪುರ, ರೋಣೂರು ಭಾಗಗಳಿಂದ ನೀರು ಹರಿಸಲಾಗುವುದು. ಕರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೆರೆ ಕಟ್ಟೆಯ ಮೇಲೆ ಪಾರ್ಕ್ ನಿರ್ಮಿಸಿ ಅಲ್ಲಿ ವಾಕಿಂಗ್ ಮಾಡಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕರೆಯಂಗಳವನ್ನು ಕೆಲವರು ಒತ್ತುವರಿ ಮಾಡಿದ್ದು , ಅದನ್ನ ಅತಿ ಶೀಘ್ರವಾಗಿ ಒತ್ತುವರಿ ತೆರವುಗೊಳಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಈ ಕ್ರೀಡಾಂಗಣವನ್ನು ಸುಸಜಿತವಾಗಿ ನಿರ್ಮಾಣ ಮಾಡಲು ಬೇಕಾದ ಎಲ್ಲಾ ರೂಪರೇಷಗಳನ್ನು ಹಮ್ಮಿಕೊಳ್ಳಲಾಗಿದೆ.
ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸೋಲು –ಗೆಲವು ಒಂದೇ ನಾಣ್ಯದ ಎರಡು ಮುಖಗಳಂತೆ , ತೀರ್ಪುಗಾರರು ನೀಡುವಂತಹ ತೀರ್ಪು ಅಂತಿಮವಾಗಿರುವುದರಿಂದ ಕ್ರೀಡಾಪಟುಗಳ ತೀರ್ಪುಗಾರರು ನೀಡುವಂತಹ ನಿರ್ಣಯವನ್ನು ಗೌರವಿಸಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷೆ ಸುನಿತ, ಬಿಆರ್ಸಿ ಕೆ.ಸಿ.ವಸಂತ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ , ಸರ್ಕಾರಿ ನೌಕರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಎ.ಸುಜಾತ, ಸರ್ಕಾರಿ ಪ್ರಾಥಮಿಕ ಶಾಲೆಗಳ ಜಿಲ್ಲಾ ಖಜಾಂಚಿ ಸಿ. ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಸ್.ರೆಡ್ಡಪ್ಪ, ಕಾರ್ಯದರ್ಶಿ ರಘುನಾಥರೆಡ್ಡಿ, ಖಜಾಂಚಿ ಎನ್.ಬಿ.ವೇಣುಗೋಪಾಲ್, ಟಿಪಿಒ ವೆಂಕಟಸ್ವಾಮಿ, ಇಸಿಒ ಕೆ.ಸಿ.ಶ್ರೀನಿವಾಸ್, ಸಿಆರ್ಪಿಗಳಾದ ರಾಧಕೃಷ್ಣ, ವರದರೆಡ್ಡಿ, ಹಾಗು ದೈಹಿಕ ಶಿಕ್ಷಕರು ಇದ್ದರು.


