

ಕುಂದಾಪುರ ; ದಿನಾಂಕ : 16-08-2025ರಂದು ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳ ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಸರಿ ಮತ್ತು ಸೈಂಟ್ ಮೇರಿಸ್ ಸಮೂಹ ಸಂಸ್ಥೆಗಳ ಸಂಚಾಲಕರು ಹಾಗೂ ಕುಂದಾಪುರ ಹೋಲಿ ರೋಸರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ। ವಂ। ಗುರು ಪೌಲ್ ರೆಗೋ ರವರು ಅಧ್ಯಕ್ಷೀಯ ಸ್ಥಾನವನ್ನು ವಹಿಸಿಕೊಂಡು “ನಮ್ಮ ಸ್ವಾತಂತ್ರ್ಯ ತ್ಯಾಗ ಬಲಿದಾನಗಳ ಸಂಕೇತವಾಗಿದ್ದು, ಅದನ್ನು ನಾವು ಉತ್ತಮ ರೀತಿಯಲ್ಲಿಅನುಭವಿಸಿ ಇತರರಿಗೆ ಅನುಭವಿಸುವಂತೆ ನೋಡಿಕೊಳ್ಳಬೇಕೆಂದು” ಸಂದೇಶವನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಇಂಡೋ-ಟಿಬೆಟಿಯನ್ ಗಡಿ ಪೋಲೀಸ್ ಪಡೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸಿರುವ ಶ್ರೀಯುತ ದಿನೇಶ್ ಆಚಾರ್ಯರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಸಮಯಕ್ಕೆ ಮೌಲ್ಯವನ್ನು ನೀಡಿ ತಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತಾ ನಮ್ಮ ಸಂಸ್ಕ್ರತಿಗೆ ಹಾಗೂ ತಾಯ್ನಾಡಿಗೆ ಗೌರವವನ್ನು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು, ಭೋಧಕ ವ್ರಂದದವರು ಉಪಸ್ಥಿತರಿದ್ದು, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಪ್ರದರ್ಶನ ಮಾಡಲಾಯಿತು.
ಝೀಯಾ, ಆದಿತ್ಯ, ಪ್ಯೂಸೆಲ್, ಜೇಷ್ಠಾ ಸ್ವಾಗತಿಸಿದರು. ಅಬ್ದುಲ್ ಮುಸಾವಿರ್ ಧನ್ಯವಾದ ಸಮರ್ಪಿಸಿದರು. ಹವ್ಯಾ ಮತ್ತು ರುಬೇನ್ ರೆಬೆರೋ ಕಾರ್ಯಕ್ರಮ ನಿರೂಪಿಸಿದರು.






















