KELARAI Teachers–Students “Aati” Get-Together

10.08.2025 ರಂದು ಕೆಲರಾಯ್ ಸೈಂಟ್ ಜೋಕಿಂ ಹಾಗೂ ಅಮೃತ್ಲಾಲ್ಜೀ ಪ್ರೌಢಶಾಲೆಯ (1985-95) ಸಾಲಿನ ವಿದ್ಯಾರ್ಥಿ ಹಾಗೂ ಶಿಕ್ಷಕರ ಆಟಿ ಸಹಮಿಲನ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ‘ಐಡಿಯಲ್ ಫಾರ್ಮ್ ಹೌಸ್’ ಇಲ್ಲಿ ನಡೆಯಿತು.
ಸುಂದರವಾದ ಪ್ರಕೃತಿಯ ಮಡಿಲಲ್ಲಿ ಶಿಕ್ಷಕ-ವಿದ್ಯಾರ್ಥಿಗಳು ಕಳೆದ ಆಟ-ಪಾಠಗಳ, ವಿನೋದಗಳ ಸವಿನೆನಪನ್ನು ಮೆಲುಕು ಹಾಕಿ ಸಂಭ್ರಮಪಟ್ಟರು. ಆಟಿ ತಿಂಗಳಿನ ವಿವಿಧ ತರಹದ ಖಾಧ್ಯಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಾವೇ ತಯಾರಿಸಿ ತಂದು ಸಹಭೋಜನ ಮಾಡಿದರು. ಅನೇಕರು ತಮ್ಮ ಮಧುರ ಕಂಠದಿಂದ ಹಾಡಿ ರಂಜಿಸಿದರು. ತೆಂಗು-ಕಂಗು, ಡ್ರ್ಯಾಗನ್ ಫ್ರೂಟ್, ವಿವಿಧ ಹಣ್ಣು-ಹಂಪಲುಗಳ ಈ ಫಾರ್ಮ್ ಹೌಸಿನ ಮಾಲಿಕರಾದ ರಾಜೇಶ್ ಅಮೀನ್ ಹಾಗೂ ಕುಟುಂಬ ಇದನ್ನು ಆಯೋಜಿಸಿದ್ದರು.
KELARAI Teachers–Students “Aati” Get-Together
On 10-08-2025, the teachers and students of Kelarai St Joachim and Amrutlalji High School (batch of 1985–95) gathered for their “Aati” get-together at Ideal Farm House in Kuriyal village, Bantwal taluk.
In the lap of beautiful nature, teachers and students joyfully reminisced about their days of lessons, games, and fun. Various traditional delicacies of the Aati month were prepared and brought by the teachers and students themselves for a shared meal. Many entertained the gathering with melodious songs. The farm house, rich with coconut, arecanut, dragon fruit, and other fruits and crops, is owned by Rajesh Amin and his family, who hosted the event.

