Adventure, Leadership, and Teamwork at St Aloysius Gonzaga School’s Three-Day Scout and Cub Camp


ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಸ್ಕೌಟ್ ಮತ್ತು ಕಬ್ ಘಟಕವು 2025 ಆಗಸ್ಟ್ 7ರಿಂದ 9 ರವರೆಗೆ ಪಿಲಿಕುಳ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಸನಿವಾಸ ಶಿಬಿರವನ್ನು ಆಯೋಜಿಸಿತು. ಈ ಶಿಬಿರವನ್ನು ಸ್ಕೌಟ್ ಮಾಸ್ಟರ್ ಶ್ರೀಮತಿ ಸುಶ್ಮಿತಾ ಕೆ.ಎಸ್. ಹಾಗೂ ಕಬ್ ಮಾಸ್ಟರ್ ಶ್ರೀಮತಿ ಶಶಿಕಲಾ ಅವರ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ನಡೆಸಲಾಯಿತು. ಶಿಬಿರದಲ್ಲಿ ಪ್ರೇರಣಾದಾಯಕ ಭಾಷಣಗಳು, ಅನುಭವ ಹಂಚಿಕೆ ಹಾಗೂ ಪ್ರಮಾಣಪತ್ರ ವಿತರಣೆಯು ನಡೆಯಿತು. ಕಲಿಕೆ, ನಾಯಕತ್ವ , ಸಾಹಸ, ತಂಡಗಳಾಗಿ ಕಾರ್ಯ ನಿರ್ವಹಣೆ ಹಾಗೂ ಸ್ನೇಹಭಾವದೊಂದಿಗೆ ಯಶಸ್ವಿಯಾಗಿ ಶಿಬಿರವು ಕೊನೆಗೊಂಡಿತು.ಈ ಸಮಾರಂಭಕ್ಕೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ – ಮಂಗಳೂರು ಉತ್ತರ ಸ್ಥಳೀಯ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಕೀಲಾ ರಾಜ್ ಅವರು ಅತಿಥಿಯಾಗಿ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಗುರುಮೂರ್ತಿ ಹಾಗೂ ಶ್ರೀ ವಿನೋದ್ ಚೆವಾರ್ ಉಪಸ್ಥಿತರಿದ್ದರು. ಈ ಶಿಬಿರವು ಸ್ಕೌಟಿಂಗ್ ಸಿದ್ಧಾಂತಗಳ ಮೂಲಕ ಸಮಗ್ರ ಶಿಕ್ಷಣದತ್ತ ಶಾಲೆಯ ಬದ್ಧತೆಯನ್ನು ಎತ್ತಿ ತೋರಿಸಿತು.
Adventure, Leadership, and Teamwork at St Aloysius Gonzaga School’s Three-Day Scout and Cub Camp
St Aloysius Gonzaga School, Scout and Cub Unit organised a 3-day stay camp from 7 to 9 August 2025 for the Cubs and Scouts students of the school at Pilikula District Training Center, effectively led by Scout Master Ms. Sushmitha K S and Cub Master Ms. Shashikala. The event featured inspiring addresses, heartfelt student reflections, and certificate distribution, marking a successful conclusion to three days of learning, adventure, and camaraderie. The camp culminated in a vibrant valedictory ceremony on 9 August 2025, graced by Ms. Shakila Raj, Vice President of Bharat Scouts and Guides – Mangalore North Local Association, along with resource persons Mr. Gurumurthy and Mr. Vinod Chevar. The camp highlighted the school’s commitment to holistic education through scouting principles.

