

ಕುಂದಾಪುರ,ಆ.10:ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆಗಳು (ಆ.9 ರಂದು) ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿಜರಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಅಗಮಿಸಿದ ಕುಂದಾಪುರ ತಾಲುಕಿನ ತಹಸಿಲ್ದಾರ್ ಮಲ್ಲಿಕಾರ್ಜುನ ಮಾತನಾಡಿ ‘ನಮ್ಮ ದೇಶಕ್ಕೆ ಲಬಿಸಿದ ಸ್ವಾತಂತ್ರ್ಯದ ನೆನಪಿಗಾಗಿ ಉಂಟು ಮಾಡಿದ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆ ತುಂಬಾ ಚೆನ್ನಾಗಿತ್ತು, ಎಲ್ಲಾ ಮಕ್ಕಳು ಇದರಲ್ಲಿ ಚೆನ್ನಾಗಿ ಪಾತ್ರವಹಿಸಿದ್ದಾರೆ, ನಮಗೆಲ್ಲರಿಗೂ ದೇಶದ ಮೇಲೆ ಅಭಿಮಾನ ಇರಬೇಕು, ಜಾತಿಧರ್ಮ ಮರೆತು, ದೇಶ ಪ್ರೇಮ ಬೆಳೆಸಿಕೊಳ್ಳ ಬೇಕು, ದೇಶ ಪ್ರೇಮ ಅಭಿಮಾನ ಉಂಟು ಮಾಡುವಂತಹ ಈ ಸ್ಪರ್ಧೆ ಆಯೋಜಿಸಿದವರಿಗೆ ಅಭಿನಂದಿಸುತ್ತೇನೆ” ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಿರ್ದೇಶಕ ಅ|ವಂ|ಪಾವ್ಲ್ ರೇಗೊ ಮಾತನಾಡಿ ”ಸ್ವಾತಂತ್ರ್ಯದ ಪ್ರಯುಕ್ತ ಎರ್ಪಡಿಸಿದ ಈ ದೇಶ ಭಕ್ತಿ ಗೀತೆ ಮತ್ತು ನ್ರತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಉತ್ಸಾಹ, ಸ್ಪೂರ್ತಿ ನೋಡಿ ತುಂಬಾ ಖುಷಿಯನ್ನು ನೀಡಿದೆ, ಎಲ್ಲರೂ ಸ್ಫರ್ಧೆಯಲ್ಲಿ ಜಯಿಸಬೇಕೆಂದು ಭಾಗವಹಿಸಿದ್ದೀರಿ,ಎಲ್ಲರಿಗೂ ಗೆಲುವು ಸಿಗುವುದಿಲ್ಲ, ಅದು ಮಹತ್ಯವು ಅಲ್ಲ, ಭಾಗವಹಿಸುವುದೇ ಮಹತ್ವ ಎಂದು ಹೇಳಿ ಸ್ಪರ್ಧಿಗಳಿಗೆ, ಅವರಿಗೆ ಕಲಿಸಿದ ಅಧ್ಯಾಪಕರಿಗೆ, ಸ್ಫರ್ಧೆ ಎರ್ಪಡಿಸಿದವರಿಗೆ ಎಲ್ಲರಿಗೂ ಅಭಿನಂದನೆಗಳು’ ಎಂದು ಶುಭ ಹಾರೈಸಿದರು.
ಸ್ಫರ್ಧೆಯ ತೀರ್ಪುದಾರರಲ್ಲಿ ಒರ್ವರಾದ ಐಶ್ವರ್ಯ ಜೋಗಿ ತಮ್ಮ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು, ಮನೋಜ್ ಲೊಪೆಸ್ ಮತ್ತು ಲೊಯ್ಡ್ ರೆಬೇರೊ ಇನ್ನಿಬ್ಬರು ತೀರ್ಪುದಾರರಾಗಿದ್ದಾರು. ಕಥೊಲಿಕ್ ಸಭಾ ಕುಂದಾಪುರದ ವಲಯ ಸಮಿತಿಯ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಅತಿಥಿಗಳನ್ನು ಪುಷ್ಪ ನೀಡಿ ಸ್ವಾಗತಿಸಿದರು. ಸ್ಪರ್ಧೆ ಮತ್ತು ಸಭಾ ಕಾರ್ಯಕ್ರಮವನ್ನು ಕಾರ್ಯಕ್ರಮದ ಸಂಚಾಲಕಿ ವಿನಯಾ ಡಿಕೋಸ್ತಾ ನಡೆಸಿಕೊಟ್ಟರು, ನಿರ್ಗಮನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಥೊಲಿಕ್ ಸಭಾ ಕುಂದಾಪುರ ಘಟಕರ ಪದಾಧಿಕಾರಿಗಳು ಉಪಸ್ಥಿತರಿದ್ದು, ಸ್ಪರ್ಧೆ ನೆಡೆಸುವಲ್ಲಿ ಸಹಕರಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.
ಸಮೂಹ ಗೀತೆಯಲ್ಲಿ ವಿಜೇತ ಶಾಲ ತಂಡಗಳು
1 ರಿಂದ 7 ನೇ ತರಗತಿ ಸಮೂಹ ಗೀತೆಯಲ್ಲಿ ಎಚ್.ಎಮ್.ಎಮ್. ಆಂಗ್ಲಾ ಮಾಧ್ಯಮ ಶಾಲೆ ಪ್ರಥಮ, ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ ದ್ವೀತಿಯ, ಬ್ಯಾರೀಸ್ ಸಿ ಸೈಡ್ ಸ್ಕೂಲ್ ಕೋಡಿ ತ್ರತೀಯ.
8 ರಿಂದ 10 ನೇ ತರಗತಿ ಬ್ಯಾರೀಸ್ ಸಿ ಸೈಡ್ ಸ್ಕೂಲ್ ಕೋಡಿ ಪ್ರಥಮ, ವೆಂಕಟರಮಣ ಪ್ರೌಢ ಶಾಲೆ ದ್ವೀತಿಯ, ವಿ.ಕೆ. ಆರ್. ಆಚಾರ್ಯ ಆಂಗ್ಲ ಮಾದ್ಯಮ ಪ್ರೌಢ ಶಾಲೆ ತ್ರತೀಯ,
ಪಿ.ಯು.ಸಿ. ವಿಭಾಗದಲ್ಲಿ ಬ್ಯಾರೀಸ್ ಪಿ.ಯು.ಕಾಲೇಜ್, ಪ್ರಥಮ, ಸರಕಾರಿ ಪಿ.ಯು.ಕಾಲೇಜ್ ಕುಂದಾಪುರ ದ್ವೀತಿಯ, ಸಂತ ಮೇರಿಸ್ ಪಿ.ಯು.ಕಾಲೇಜ್ ಕುಂದಾಪುರ ತ್ರತೀಯ.
ನ್ರತ್ಯ ಸ್ಪರ್ಧೆಯಲ್ಲಿ ವಿಜೇತ ಶಾಲ ತಂಡಗಳು
1 ರಿಂದ 7 ನೇ ತರಗತಿ ನ್ರತ್ಯ ಸ್ಪರ್ಧೆಯಲ್ಲಿ ವೆಂಕಟರಮಣ ಆಂಗ್ಲಾ ಮಾದ್ಯಮ ಶಾಲೆ, ಪ್ರಥ., ಎಚ್.ಎಮ್.ಎಮ್. ಪ್ರಾಥಮಿಕ ಶಾಲೆ, ದ್ವೀತಿಯ. ಯು.ಬಿ.ಎಂ.ಸಿ. ಕುಂದಾಪುರ ತ್ರತೀಯ.
8 ರಿಂದ 10 ನೇ ತರಗತಿ ವಿಭಾಗದಲ್ಲಿ
ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆ, ಕುಂದಾಪುರ, ಪ್ರಥಮ. ವೆಂಕಟರಮಣ ಆಂಗ್ಲಾ ಮಾದ್ಯಮ ಶಾಲೆ ದ್ವೀತಿಯ. ವಿ.ಕೆ. ಆರ್. ಆಚಾರ್ಯ ತ್ರತೀಯ.
ಪಿ.ಯು.ಸಿ ವಿಭಾಗದಲ್ಲಿ ಸರಕಾರಿ ಪ.ಪೂ. ಕಾಲೇಜ್ ಕುಂದಾಪುರ ಪ್ರಥಮ ಸ್ಥಾನ ಪಡೆಯಿತು.





















































































