

ಕೋಲಾರ : 2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ UPSC/KAS ಗೆಜೆಟೆಡ್ ಪ್ರೊಬೇಷನರ್ ವಸತಿಯುತ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ಹಾಗೂ KPSC ಗ್ರೂಪ್-‘ಸಿ’, RRB ಮತ್ತು SSC ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ. ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಅಭ್ಯರ್ಥಿಗಳು ಈ ತರಬೇತಿಗಾಗಿ ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳಂತೆ, ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವಯೋಮಿತಿ: UPSC/KAS ಗೆಜೆಟೆಡ್ ಪ್ರೊಬೇಷನರ್ ಹಾಗೂ KPSC ಗ್ರೂಪ್-‘ಸಿ’ ತರಬೇತಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಿನವರು (ಅರ್ಜಿಯ ಕೊನೆ ದಿನಾಂಕದ ಅನ್ವಯ) ಅರ್ಹರಾಗಿರುತ್ತಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ಹಾಗೂ ಹಿಂದಿನ ಸಾಲಿನಲ್ಲಿ IAS/KAS ತರಬೇತಿ ಪಡೆದವರು ಅರ್ಹರಾಗುವುದಿಲ್ಲ.
ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್
(https://sevasindhuservices.karnataka.gov.in/sevasindu/DepartmentServices) ಮೂಲಕ ಆಗಸ್ಟ್ 11 ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ಸೈಟ್ https://dom.karnataka.gov.in ವೀಕ್ಷಿಸಬಹುದು ಅಥವಾ ಜಿಲ್ಲಾ ಹಾಗೂ ತಾಲ್ಲೂಕು ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು:
📞 ಜಿಲ್ಲಾ ಕಚೇರಿ, ಕೋಲಾರ: 08152-295257
📞 ಜಿಲ್ಲಾ ಮಾಹಿತಿ ಕೇಂದ್ರ, ಕೋಲಾರ: 7760391781
📞 ಬಂಗಾರಪೇಟೆ: 9964944123
📞 ಮಾಲೂರು: 9844445205
📞 ಶ್ರೀನಿವಾಸಪುರ: 9535466160
📞 ಮುಳಬಾಗಿಲು: 7899266051
ಇದ ಕುರಿತು ಮಾಹಿತಿ ನೀಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಮೈಲಾರಪ್ಪ ಅವರು, ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

