

ಕುಂದಾಪುರ, ಆ.4: ಕುಂದಾಪುರದ ಸಂತ ಜೋಸೆಫ್ ಪ್ರಾರ್ಥನಾ ಮಂದಿರದಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಕುಂದಾಪುರ ಇಗರ್ಜಿಯ ಧರ್ಮಗುರು ಬಲಿಪೂಜೆಯನ್ನು ಅರ್ಪಿಸಿ ಅ|ವಂ|ಪಾವ್ಲ್ ರೇಗೊ ಅವರ ಸ್ಮರಣೆಯನ್ನು ಆಚರಿಸಲಾಯಿತು.
ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಅವರಿಗೆ ಅವರಿಗೆ ವಹಿಸಲ್ಪಟ್ಟ ಇಗರ್ಜಿಯ ಜನರು ಕೆಟ್ಟ ಜನರರಾಗಿದ್ದರು, ಅಲ್ಲಿ ಯಾವ ಧರ್ಮಗುರುವು ಸೇವೆ ನೀಡಲು ಹೋಗಲು ಕೇಳುತಿರಲಿಲ್ಲ, ಅವಾಗ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಅಲ್ಲಿ ತೆರಳಿ ತನ್ನ ನಡೆತೆ, ಕ್ಷಮಾಪಣೆ, ಪ್ರೀತಿಯಿಂದ ತನ್ನ ಇಗರ್ಜಿಯ ಜನರನನು ಬದಲಿಸಿದರು, ಅಲ್ಲಿನ ಜನರು ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿವರನ್ನು ದೇವರಂತೆ ಕ್ಕಂಡರು.ದಿನಕ್ಕೆ ೧೬ ಗಂಟೆಗಳ ಪಾಪ ನಿವೇದನೆ ಕೇಳುತಿದ್ದರು. ಯಾವ ಪಾಪ ನಿವೇದನೆ ಮಾಡದಿದ್ದರು, ಅವರಿಗೆ ತಿಳಿಯುತಿತ್ತಂತೆ.
ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಹೂಗುಚ್ಚ ನೀಡಿ ವಂ|ಪಾವ್ಲ್ ರೇಗೊರವರಿಗೆ ಅಭಿನಂದಿಸಿದರು, ಇಗರ್ಜಿಯ ಪರವಾಗಿ ನಿವ್ರತ್ತ ಅಧ್ಯಾಪಕ ಲುವಿಸ್ ಫೆರ್ನಾಂಡಿಸ್ ಶುಭ ಕೋರಿದರು. ಇತರ ಧರ್ಮ ಭಗಿನಿಯರು, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಿದರು.















