

ಶ್ರೀನಿವಾಸಪುರ: ಪಟ್ಟಣದ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿ ಗುರುವಾರ ಗುರು ಪೂರ್ಣಿಮಾ ಅಂಗವಾಗಿ ದೇವಾಲಯದ 16ನೇ ವಾರ್ಷಿಕೋತ್ಸವವು ಧಾರ್ಮಿಕ ಸಾನಿಧ್ಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೂಲ ವಿಗ್ರಹಕ್ಕೆ ಹಾಲು, ಗಂಧದಿಂದ ಅಭಿಷೇಕ ನಡೆಸಿ, ವಿಶೇಷ ಅಲಂಕಾರ ಮಾಡಲಾಯಿತು.
ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ಶಿವಂಪಾಂಡ್ಯ ಅವರು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ದೇವಾಲಯದ ಧರ್ಮದರ್ಶಿ ಕೆ.ಆರ್. ಕೇದಾರನಾಥ್ ಸೇರಿದಂತೆ ವಾಸವಿ ಸಿಸ್ಟರ್ ಪಿ. ನಾಗಮಣ ಮೋಹನ್, ಅಶ್ವಿನಿ, ಅಶ್ವನಾಥನಾರಾಯಣ ಶೆಟ್ಟಿ, ರಾಮನಾಥ್, ಬಾಬು, ಶ್ರೇಯಸ್, ಕಾರ್ತಿಕ್, ಚಿನ್ಮಯಿ, ಬಾಲಾಜಿ, ಬದ್ರಿ ಮತ್ತು ಅನೇಕ ಭಕ್ತರು ಈ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಸಾಯಿಬಾಬಾ ಆಶೀರ್ವಾದ ಪಡೆದರು.

