

ಕುಂದಾಪುರ; ಜೆಸಿಯಲ್ಲಿ ಹಲವು ವರ್ಷಗಳಿಂದ ಕ್ರಿಯಾಶೀಲ ರಾಗಿದ್ದು, ತರಬೇತಿ ನೀಡುವಲ್ಲಿ ಗಾಢ ಅನುಭವ ಹೊಂದಿರುವ ಹಿರಿಯ ತರಬೇತುದಾರರ ಉತ್ಸಾಹದಿಂದ ವಿನೂತನವಾಗಿ ಕುಂದಾಪುರದ ಆರ್. ಎನ್. ಎಸ್. ಕಾಲೇಜಿನಲ್ಲಿ ಜಿಲ್ಲೆಯ ಮೊದಲ ಯೂತ್ ವಿಂಗ್ ಆರಂಭವಾಗಿದ್ದು ಸಂತಸದ ವಿಷಯ. ವಿದ್ಯಾರ್ಥಿಗಳು ಪರಿಣಿತ ತರಬೇತುದಾರರು ನೀಡುವ ಮಾರ್ಗದರ್ಶನ ಮತ್ತು ಎಲ್ಲ ತರಹದ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ‘ ಎಂದು ಸೀನಿಯರ್ ಛೇಂಬರ್ಸ್ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಅಧ್ಯಕ್ಷ SNR PPF ಎಮ್. ಆರ್. ಜಯೇಶ ರವರುಸೀನಿಯರ್ ಛೇಂಬರ್ಸ್ ಕೋಟಾ ಲೀಜನ್ ನ ಆಶ್ರಯದಲ್ಲಿ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ‘ ‘ ‘ಯೂತ್ ವಿಂಗ್ ‘ ನ್ನು ಉದ್ಘಾಟಿಸಿ ಯುವ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಜೆಸಿಐ ನ ಪೂರ್ವ ರಾಷ್ಟ್ರೀಯ ಅಧ್ಯಕ್ಷ JFP ಕಾರ್ತಿಕೇಯ ಮಧ್ಯಸ್ಥರವರು ವಿದ್ಯಾರ್ಥಿಗಳು ಇನ್ನೊಬ್ಬರಿಗೆ ಸ್ಪೂರ್ತಿಯಾದಾಗ, ಮತ್ಯಾರಿಗೋ ರೋಲ್ ಮಾಡೆಲ್ ಆದಾಗ ಸಿಗುವ ಸಂತೃಪ್ತಿ – ಸಾರ್ಥಕತೆ ಅನನ್ಯವಾದುದು ಎಂಬುದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಕೆಲವು ಸರಳ ಸೂತ್ರಗಳನ್ನು ಅನುಸರಿಸಬೇಕೆಂದು ತಿಳಿಸಿದರು.
ಯೂತ್ ವಿಂಗ್ ಉದ್ಘಾಟನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿ ಭರತನಾಟ್ಯ ಪ್ರವೀಣೆ ಗಾರ್ಗಿದೇವಿ ಯ ನೃತ್ಯ ಪ್ರದರ್ಶನ ನಡೆಯಿತು. SCI ನ ಏರಿಯಾ-G ಇದರ ರಾಷ್ಟ್ರೀಯ ಉಪಾಧ್ಯಕ್ಷ SNR PPF ಸಿದ್ಧಗಂಗಯ್ಯ ರವರು ಯೂತ್ ವಿಂಗ್ ನ ಯಶಸ್ಸಿಗೆ ಶುಭ ಹಾರೈಸಿದರು. SCI ಯ ತರಬೇತಿ ಮತ್ತು ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕರಾದ SNR ಹುಸೇನ್ ಹೈಕಾಡಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕೋಟಾ ಲೀಜನ್ ನ ಅಧ್ಯಕ್ಷರಾದ SNR ಕೇಶವ ಆಚಾರ್ ಅತಿಥಿಗಳನ್ನು ಸ್ವಾಗತಿಸಿದರು. ಸೀನಿಯರ್ ಛೇಂಬರ್ಸ್ ಕುಂದಾಪುರದ ಅಧ್ಯಕ್ಷರಾದ SNR ರಾಘವೇಂದ್ರ ಚರಣ್ ನಾವಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ್ ಶೆಟ್ಟಿ, ಯೂತ್ ವಿಂಗ್ ಘಟಕದ ಅಧ್ಯಕ್ಷ YWಕೌಶಿಕ್, ಕಾರ್ಯದರ್ಶಿ YW ಕೃತಿ ದೇವಾಡಿಗ, ಖಜಾಂಚಿ YW ಅಕ್ಷಯಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು.SCI ಕೋಟಾ ಲೀಜನ್ ನ ಕಾರ್ಯದರ್ಶಿ SNR ವಿನಯಚಂದ್ರ ರವರು ಧನ್ಯವಾದ ಸಲ್ಲಿಸಿದರು. ಯೂತ್ ವಿಂಗ್ ಸಂಯೋಜಕಿ ನಿರೂಪಿಸಿದರು.


