

ಕುಂದಾಪ್ರ : ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕುಂದಾಪ್ರ ಕನ್ನಡ ಸ್ಪರ್ಧೆ ದಿನಾಂಕ 19-07-2025 ರಂದು ಮಧ್ಯಾಹ್ನ 2:30ಕ್ಕೆ ಏರ್ಪಡಿಸಲಾಗಿದೆ.
ಕುಂದ ಕನ್ನಡ ಗಾದೆಗಳನ್ನು ಎರಡು ನಿಮಿಷದಲ್ಲಿ ಸ್ಪಷ್ಟವಾಗಿ ಅತಿ ಹೆಚ್ಚು ಬಾರಿ ಹೇಳುವುದು ಹಾಗೂ 15 ನಿಮಿಷದಲ್ಲಿ ಕುಂದ ಕನ್ನಡ ಶಬ್ದಗಳನ್ನು ಅತಿ ಹೆಚ್ಚು ಬರೆಯುವುದು. ಈ ಎರಡು ಸ್ಪರ್ಧೆಗಳು ನಡೆಯುತ್ತವೆ.
ಭಾಗವಹಿಸುವವರು ಜ್ಯೋತಿ ಸಾಲಿಗ್ರಾಮ, ರೇಡಿಯೋ ಕುಂದಾಪ್ರ 89.6 ಈಒ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಈ ವಿಳಾಸಕ್ಕೆ ಪೂರ್ಣ ವಿಳಾಸದೊಂದಿಗೆ ಪತ್ರ ಬರೆದು ಜುಲೈ 16 ರೊಳಗೆ ತಿಳಿಸಬೇಕು ಎಂದು ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಪ್ರಕಟಣೆ ತಿಳಿಸಿದೆ.

